ಸಿಹಿನೀರು ಹೊಂಡದ ಸುತ್ತಮೂತ್ತಲಿನ ಜನರಿಗೆ ಶಾಂತಿ ಸಾಗರ ನೀರು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಸೆ.25: 20  ದಿನಗಳಲ್ಲಿ  ಸಿಹಿನೀರು ಹೊಂಡದ ಮೇಲ್ಭಾಗದ  200 ಕುಟುಂಬಗಳಿಗೆ  ನೇರವಾಗಿ ಶಾಂತಿ ಸಾಗರ ನೀರು ಸರಬರಾಜು ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಸಿಹಿನೀರು ಹೊಂಡದ ಬಳಿಯಲ್ಲಿ ನೂತನ ಹೈ ಮಾಸ್ಕ್ ದೀಪ ಉದ್ಘಾಟನೆ ಮತ್ತು  ಬೊರವೆಲ್ ಗಾಡಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಿಹಿನೀರು ಹೊಂಡದ ಸುತ್ತಮುತ್ತಲಿನ ಪ್ರದೇಶದಲ್ಲಿ 200 ಮನೆಗಳು ಇದ್ದು ಕುಡಿಯುವ ನೀರು, ರಸ್ತೆ, ಬೀದಿ ದೀಪ, ಹಕ್ಕ ಪತ್ರದ  ಸಮಸ್ಯೆಗಳ ಬಗ್ಗೆ ನನಗೆ ಮನವಿ ಮಾಡಿದ್ದರು. ಎಲ್ಲಾ ವ್ಯವಸ್ಥೆ ಮಾಡಲು ಸುಮಾರು 70 ಲಕ್ಷ ವೆಚ್ಚವಾಗಲಿದ್ದು ಎಲ್ಲಾವನ್ನು ಮಾಡಿಕೊಡಲಾಗುವುದು ಎಂದರು.
ಈ ಮೊದಲು ನಾನೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೆ ಆದರೆ ದಿಬ್ಬದ ಪ್ರದೇಶವಾದ್ದರಿಂದ ಈ ಭಾಗದ ಜನರು ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದ ಎಂದು ಮನವಿ ಮಾಡಿದ್ದರಿಂದ ತುರ್ತಾಗಿ ನಗರಸಭೆಯಿಂದ  ಬೊರವೆಲ್ ಕೊರೆಸಲಾಗುತ್ತಿದೆ.
ನಗರಸಭೆ ಅವರಿಗೆ  ಶಾಂತಿ ಸಾಗರ ನೀರನ್ನು ನೇರವಾಗಿ ವ್ಯವಸ್ಥೆ ಮಾಡಲು ಸೂಚಿಸಿದ್ದು 20 ದಿನಗಳಲ್ಲಿ ಶಾಂತಿ‌ಸಾಗರ ನೀರು ಒದಗಿಸಲಾಗುತ್ತದೆ. ಹಲವರು ಹಕ್ಕು ಪತ್ರ ನೀಡಿಲ್ಲ ಎಂದು ನನಗೆ ತಿಳಿಸಿದ್ದು  ಕೂಡಲೇ ಸ್ಲಂ ಬೋರ್ಡ್ ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ಭಾಗದಲ್ಲಿ ಸರ್ವೇ ಕಾರ್ಯ ಮಾಡಿ ಎಲ್ಲಾರಿಗೂ ಹಕ್ಕು ಪತ್ರ ನೀಡಬೇಕು ಎಂದು ಅಧಿಕಾರಿಗಳಿಗೆ  ತಾಕೀತು ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಹೈ ಮಾಸ್ಕ್ ದೀಪ ಅಳವಡಿಸಿದ್ದು ಸಿಹಿನೀರು ಹೊಂಡದ ಸುತ್ತಮುತ್ತಲಿನ ಮನೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಉಳಿದ ಕಡೆಗಳಲ್ಲಿ ಬೀದಿ ದೀಪವನ್ನು ಅಳವಡಿಸಲಾಗುತ್ತದೆ ಎಂದರು.
ನೀರಿನ ಸಂಪರ್ಕ ಕಲ್ಪಿಸಿದ ನಂತರ ಸಿ‌.ಸಿ.ರಸ್ತೆಯನ್ನು ಸಹ ನಿರ್ಮಾಣ ಮಾಡಲಾಗುತ್ತದೆ. ಒಟ್ಟಿನಲ್ಲಿ ಅವರು ಮನವಿ ಮಾಡಿದ ಎಲ್ಲಾ ಬೇಡಿಕೆಗಳನ್ನು ಹಿಡೇರಿಸಿದ್ದೇನೆ. ಅವರ ಜೊತೆ ಸದಾ ಇರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್, ನಗರಸಭೆ ಉಪಾಧ್ಯಕ್ಷ ಮಂಜುಳ ವೇದಾ, ನಗರಸಭೆ ಸದಸ್ಯರಾದ ಹರೀಶ್, ವೆಂಕಟೇಶ್, ಶ್ರೀನಿವಾಸ್, ಶ್ವೇತಾ ವೀರೇಶ್, ನಗರಸಭೆ ಪ್ರಭಾರ ಆಯುಕ್ತ ವಾಸಿಂ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸೋಮಶೇಖರ್, ಮುಖಂಡರಾದ ಪರಮೇಶ್, ಪಾಪಣ್ಣ, ಶಿವಕುಮಾರ್, ನಾಗರಾಜ್, ಲೋಕೇಶ್  ಇದ್ದರು.
[t4b-ticker]

You May Also Like

More From Author

+ There are no comments

Add yours