ಯುವ ಸಮುದಾಯಕ್ಕೆ ದಾರ್ಶನಿಕರ ಅರಿವು ಅತ್ಯಗತ್ಯ :ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ ( ಕರ್ನಾಟಕ ವಾರ್ತೆ) ಸೆ.10:
ದಾರ್ಶನಿಕ, ಮಹನೀಯರ ಇತಿಹಾಸದ ಅರಿವು ಹಾಗೂ ಆದರ್ಶ ಮೌಲ್ಯಗಳು ಯುವ ಸಮುದಾಯಕ್ಕೆ ಅತ್ಯಗತ್ಯ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ತರಾಸು ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ವತಿಯಿಂದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನ್ಯಾಯ ಸಿಗದೇ ತುಳಿತಕ್ಕೊಳಗಾದ ಸಮುದಾಯದ ವ್ಯಕ್ತಿಗಳ ಹೋರಾಟದ ಹಾದಿ, ಕಾರ್ಯವೈಖರಿ, ಸಿದ್ಧಾಂತ, ಮೌಲ್ಯಗಳ ಬಗ್ಗೆ ನೆನಪು ಮಾಡಿಸುವಂತಹ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರ ಆಚರಣೆ ಮಾಡುತ್ತಿದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಅವರು ಕೇರಳದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದಂತಹ  ಮಹಾತ್ಮ. ಜಾತಿಯ ವ್ಯವಸ್ಥೆಯನ್ನು ತೊಲಗಿಸಬೇಕೆನ್ನುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದ ದಾರ್ಶನಿಕ ಎಂದು ಬಣ್ಣಿಸಿದರು.
ಅಪರ ಜಿಲ್ಲಾಧಿಕಾರಿ ಈ ಬಾಲಕೃಷ್ಣ ಮಾತನಾಡಿ,  ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿದ್ದ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಲು  ಬ್ರಹ್ಮಶ್ರೀ ನಾರಾಯಣ ಗುರು ಶ್ರಮಿಸಿದ್ದಾರೆ. ಪ್ರತಿಯೊಬ್ಬ ನಾಗರಿಕರಲ್ಲೂ ಸಮ ಬಾಳು, ಸಮಾನತೆ, ಸ್ವಾತಂತ್ರ್ಯತೆಯಿಂದ ಬಾಳಬೇಕೆನ್ನುವ ನಿಟ್ಟಿನಲ್ಲಿ ಹೋರಾಟ ಮಾಡಿದರು ಎಂದು ಹೇಳಿದರು .
ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವ ಆದರ್ಶಗಳನ್ನು ಪಾಲನೆ ಮತ್ತು ಭಾರತ ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳ ಸಮಾನತೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು.  ಯಾರು ಮೇಲು ಅಲ್ಲ ಕೀಳು ಅಲ್ಲ. ದೇಶದಲ್ಲಿ ಜಾತಿ ವ್ಯವಸ್ಥೆ ಬದಲಾವಣೆಗೆ ನಾವೆಲ್ಲರೂ ಸಮಾನತೆಯಿಂದ ಬದುಕಬೇಕು ಎಂದು ತಿಳಿಸಿದರು.
ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಎಚ್ ಜೀವನ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮುದಾಯ ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯವಾಗುತ್ತದೆ.  ಒಬ್ಬ ವ್ಯಕ್ತಿ ಶಿಕ್ಷಣದ ಉನ್ನತೀಕರಿಸಿದ ನಂತರ ಅವನ ಏಳಿಗೆ ತಾನಾಗಿಯೇ ಬದಲಾವಣೆಯಾಗುತ್ತದೆ. ಹಾಗಾಗಿ ಹಿಂದುಳಿದ ವರ್ಗದವರಿಗೆ ಶಿಕ್ಷಣದ ಅಗತ್ಯತೆ ಇದೆ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ್ದರು ಎಂದು ಸ್ಮರಿಸಿದರು.
ವೆಂಕಟೇಶ್ ಉಪನ್ಯಾಸ ನೀಡಿ,  ಭಗವಂತನಿಗೆ ಎಲ್ಲರೂ ಒಂದೇ ಜಾತಿ ಧರ್ಮವರು, ಬಗೆ ಬಗೆಯ ಜಾತಿಗಳು ಗೊತ್ತಿಲ್ಲ ಅವನ ಅನುಸಾರದಲ್ಲಿ ಎಲ್ಲರೂ ಒಂದೇ ಎನ್ನುವಂತಹ  ಸಂಕಲ್ಪವನ್ನು ನಾರಾಯಣ ಗುರುಗಳು  ಹೊಂದಿದ್ದರು. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಶಿಕ್ಷಣದಲ್ಲಿ ಪಾಂಡಿತ್ಯ ಪಡೆದು ಜೊತೆಗೆ ಆಯುರ್ವೇದ ಚಿಕಿತ್ಸೆ ನೀಡುವುದನ್ನು ಕೂಡ ಕಲಿತಿದ್ದರು.  ದೇಶದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಲಗಿಸುವ ನಿಟ್ಟಿನಲ್ಲಿ ಎಲ್ಲರೂ ಸಮಾನರು ಎನ್ನುವ ಸಾರಾಂಶ  ಜನರಿಗೆ ತಿಳಿಸುವ ಕಾಯಕದಲ್ಲಿ ತೊಡಗಿದ್ದರು.  4ನೇ ಶತಮಾನದಿಂದ 18ನೇ ಶತಮಾನದ ನಡುವಿನ ಅಂತರದಲ್ಲಿ ಜಾತಿಯ ಸಾಮರಸ್ಯ ಹೆಚ್ಚಿನ ಪ್ರಮಾಣದಲ್ಲಿ ಉಂಟಾದಂತಹ ಸಂದರ್ಭದಲ್ಲಿ ಎಲ್ಲರೂ ಸಮಾನರು.  ಯಾರು ಮೇಲಲ್ಲ ಕೀಳಲ್ಲ ಎನ್ನುವ ಸಂದೇಶ ಸಾರುತ್ತ ಜನರನ್ನು ಸಂಘಟಿಸಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ ಧನಂಜಯ, ನಗರ ಸಭೆ ಸದಸ್ಯೆ ಅನುರಾಧ ರವಿಕುಮಾರ್ ,ಆರ್ಯ ಈಡಿಗ ಸಮಾಜದ ಜಿಲ್ಲಾ ಉಪಾಧ್ಯಕ್ಷ ಡಿ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಟಿ,  ಜಿಲ್ಲಾ ಯುವ ಘಟಕ ವೇದಿಕೆಯ ಅಧ್ಯಕ್ಷ ಎಸ್ ವೆಂಕಟೇಶ್ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours