ಗುಣಮಟ್ಟ ತರಬೇತಿಯಿಂದ  ಉದ್ಯೋಗ ಸೃಷ್ಠಿ-ಪ್ರಾಂಶುಪಾಲ ಸುರೇಶ್

 

ಚಿತ್ರದುರ್ಗ ಕನಾಟಕ ವಾರ್ತೆ ಸೆಪ್ಟಂಬರ್ 17:
ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ಉದ್ಯೋಗಕ್ಕೆ ಸೇರಿಕೊಳ್ಳುವಂತಹ ಸಂದರ್ಭದಲ್ಲಿ ಅವನ ಪ್ರಾಯೋಗಿಕ ಕಲಿಕೆಯ ಗುಣಮಟ್ಟತೆ ಅಳೆಯಲಾಗುತ್ತದೆ. ಗುಣಮಟ್ಟದ ತರಬೇತಿಯಿಂದ ಉದ್ಯೋಗ ಸೃಷ್ಠಿ ಸಾಧ್ಯವಾಗಲಿದೆ ಎಂದು ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶನಿವಾರ ಹಮ್ಮಿಕೊಂಡಿದ್ದ 2020-22ನೇ ಸಾಲಿನ ಕೈಗಾರಿಕಾ ತರಬೇತಿ ಸಂಸ್ಥೆಯ  ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿಯಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ತರಬೇತಿ ಮುಗಿದ ನಂತರ ಉತ್ತೀರ್ಣವಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ನೀಡಲಾಗುತ್ತದೆ ಆದರೆ ವಿದ್ಯಾರ್ಥಿಗಳಿಗೆ ಅದೇ ಅಂತಿಮವಲ್ಲ ಅದರ ಜೊತೆಗೆ ವಿದ್ಯಾರ್ಥಿಗಳು ಯಾವ ವರ್ಷದಿಂದ ತರಬೇತಿಯನ್ನು ಪಡೆದಿದ್ದಾರೆ  ಹಾಗೂ ಯಾವ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಅಂಶಗಳನ್ನು ಒಳಗೊಂಡ ಎನ್.ಟಿ.ಸಿ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪ್ರಮಾಣಪತ್ರ ಸಹ ಬೇಕಾಗುತ್ತದೆ ಎಂದು ಹೇಳಿದರು.
ತರಬೇತಿ ಪಡೆದ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕೆ ಹೋದಂತಹ ಸಂದರ್ಭದಲ್ಲಿ ಕೇವಲ ಅಂಕಪಟ್ಟಿ ತೆಗೆದುಕೊಂಡು ಹೋದರೆ ಸಾಲದು ಜೊತೆಗೆ  ಎನ್.ಟಿ.ಸಿ ಪ್ರಮಾಣ ಪತ್ರ  ಅತ್ಯಗತ್ಯ. ಎನ್.ಟಿ.ಸಿ ಪ್ರಮಾಣ ಪತ್ರದಿಂದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿಯೂ ಸಹ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಕೌಶಲ್ಯ ದಿನಾಚರಣೆ ಹಾಗೂ ವಿಶ್ವಕರ್ಮ ದಿನಾಚರಣೆಯಂದು ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಂತಹ ಎಲ್ಲಾರು ಸಹ ಕುಶಲಕರ್ಮಿಗಳು ಎಂದು ಈ ದಿನ ಘಟಿಕೋತ್ಸವ ಆಚರಣೆಯ ಮೂಲಕ ಪ್ರಮಾಣ ಪತ್ರ ನೀಡಲಾಗುವುದು. ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆಯುವುದರ ಮೂಲಕ ಉನ್ನತ ಮಟ್ಟದ ಹುದ್ದೆಗಳನ್ನು ಪಡೆದು ದೊಡ್ಡ ಉದ್ಯಮಿಗಳಾಗಿ ಎಂದು ಆಶಿಸಿದರು.
ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ತರಬೇತುದಾರ ಸತೀಶ್ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಕಪಟ್ಟಿಗಳನ್ನು ಪಡೆದರೂ ಎನ್.ಟಿ.ಸಿ ಪ್ರಮಾಣ ಪತ್ರ ಬಂದಿದೆಯೋ ಇಲ್ಲವೋ ಎಂದು ಕಚೇರಿಗೆ ಬಂದು ಕೇಳಬೇಕಾಗಿತು. ಆದರೆ ಇಂದು ಅದಕ್ಕೆ ಮುಕ್ತಿ ನೀಡಿ ಘಟಿಕೋತ್ಸವ ಮಾಡುವುದರ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಎನ್.ಟಿ.ಸಿ ಪ್ರಮಾಣಪತ್ರ ಸಿಗುವುದಕ್ಕೆ ಸಹಕಾರಿಯಾಗಿದೆ ಎಂದರು.
ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ತರಬೇತಿ ಅಧಿಕಾರಿ ಮಹಮ್ಮದ್ ತಾಜ್ ಹುಸೇನ್ ಮಾತನಾಡಿ ಘಟಿಕೋತ್ಸವ ಕೇವಲ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ಘಟಿಕೋತ್ಸವ ಕಾರ್ಯಕ್ರಮಗಳ ಮಾಡುವುದರ ಮೂಲಕ ಪದವಿ ಪ್ರಮಾಣ ಪತ್ರವನ್ನು  ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಐಟಿಐ ತರಬೇತಿ ಪಡೆದಂತಹ ವಿದ್ಯಾರ್ಥಿಗಳಿಗೂ ಸಹ ಘಟಿಕೋತ್ಸವದ ಮೂಲಕ ಎನ್.ಟಿ.ಸಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದು ಇದೇ ಮೊದಲು ಈ ರೀತಿಯಾದಂತಹ ಯೋಜನೆ ಇಡೀ ದೇಶದಲ್ಲಿಯೇ ಪ್ರಥಮ ಎಂದು ತಿಳಿಸಿದರು.
ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ತರಬೇತಿ ಅಧಿಕಾರಿ ಲೀಲಾವತಿ ಮಾತನಾಡಿ ಘಟಿಕೋತ್ಸವ ಮಾಡುವುದರ ಮೂಲಕ ಕೈಗಾರಿಕಾ ತರಬೇತಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುತ್ತಿರುವುದು ಖುಷಿಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ತರಬೇತುದಾರರಾದ  ವಾಣಿಶ್ರೀ, ಕಿರಿಯ ತರಬೇತಿದಾರರಾದ ಶಾಂತಕುಮಾರಿ, ಸೈಯದ್ ವಾಸಿಕ್ ಅಹಮ್ಮದ್, ಮುನಿ, ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours