ಬುಡಕಟ್ಟು ಸಂಸ್ಕೃತಿಯ ನಾಡು ಚಿತ್ರದುರ್ಗ: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಳ್ಳಕೆರೆ: ಭಾರತೀಯರ ಭವ್ಯ ಸಂಸ್ಕೃತಿಗೆ ಚಿತ್ರದುರ್ಗ ಜನತೆಯ ಕೊಡುಗೆ ಅಪಾರವಾಗಿದೆ. ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಮತ್ತು ಮ್ಯಾಸ  ನಾಯಕರ ಆಚಾರ ವಿಚಾರಗಳು ಉಡುಗೆ ತೊಡುಗೆಗಳು ಸಂಪ್ರದಾಯಗಳು ಪೂಜಾ ವಿಧಿ ವಿಧಾನಗಳು ದೇಶಿಯ ಸಂಸ್ಕೃತಿ ಯನ್ನು ಶ್ರೀಮಂತಗೊಳಿಸಿವೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ಇಂದು ಪುರ್ಲಹಳ್ಳಿ ಗ್ರಾಮದಲ್ಲಿ ಕ್ಯಾತಪ್ಪ ದೇವರ ಜಾತ್ರಾ ಸಂಬಂಧದಲ್ಲಿ ಕಳಸರೋಹಣ  ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು. ಇದೇ ತಿಂಗಳು 9 ರ ವರೆಗೆ ನಡೆಯುವ ಈ ಜಾತ್ರೆ ಅತ್ಯಂತ ವಿಶಿಷ್ಟ ಪೂರ್ಣವಾದದ್ದು ಎಲ್ಲ ಭಕ್ತಾದಿಗಳು ಕೂಡ ಮನಸ್ಸು   ಶುದ್ದಿ ಮಾಡಿಕೊಂಡು ನಿರಂತರ ಉಪವಾಸದಿಂದ ಮೈಲಿಗೆ ಸೋಕಿಸದೆ ಮಡಿಯಿಂದ ವ್ರತಗಳನ್ನಾಚಾರಿಸಿಕೊಂಡು ಈ ಪವಿತ್ರ ಕಾರ್ಯ ಮಾಡುತ್ತಾರೆ ತುಮಕೂರು ಚಿತ್ರದುರ್ಗ ಮತ್ತು ಬಳ್ಳಾರಿ ಹಾಗೂ ಆಂಧ್ರದ ಭಾಗದಿಂದಲೂ ಕೂಡ ಈ ದೇವಸ್ಥಾನದ ಗುಡೇಕಟ್ಟೆ ಯವರು ಬರುತ್ತಾರೆ. ಎಲ್ಲಾ ಭಕ್ತಾದಿಗಳು ಕೂಡ ಆದಷ್ಟು ಶುಚಿತ್ವ ಮತ್ತು ಆರೋಗ್ಯದ ಕಡೆ ಗಮನ ಕೊಡಬೇಕು.

ಕೋವಿಡ್ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸಂಸ್ಕೃತಿ ಉಳಿಸುವುದರ ಜೊತೆಗೆ ಶೈಕ್ಷಣಿಕ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಡುಗೊಲ್ಲ  ಸಮಾಜದ ಅಧ್ಯಕ್ಷರಾದ ಬೂದಿಹಳ್ಳಿ ರಾಜು ಹೊನ್ನೂರ್ , ಗೋವಿಂದಪ್ಪ ಖಜಾಂಚಿ ಕಾಂತರಾಜು ಸಾವಿರಾರು ಭಕ್ತಧಿಗಳು  ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours