ಚಿತ್ರದುರ್ಗ ನಗರದ ಡಿವೈಡರ್ ತೆರವಿಗೆ ಕ್ರಮ: ಕೆ.ಸಿ.ವೀರೇಂದ್ರ ಪಪ್ಪಿ

 

ಚಿತ್ರದುರ್ಗ:  ಶಾಸಕ ಕೆ.ಸಿ. ವೀರೇಂದ್ರ ಅವರು ಮಾತನಾಡಿ, ಚಿತ್ರದುರ್ಗ ನಗರದ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಡಿವೈಡರ್‍ಗಳದ್ದು, ಪ್ರಮುಖ ಸಮಸ್ಯೆಯಾಗಿದೆ.  ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ಏಕಮುಖ ಸಂಚಾರವಿರುವ ರಸ್ತೆಯಲ್ಲೂ ಡಿವೈಡರ್ ನಿರ್ಮಿಸಿದ್ದೀರಿ, ಸಾರ್ವಜನಿಕರು, ವಾಹನ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ, ಡಿವೈಡರ್‍ಗಳನ್ನು ಯಾವಾಗ ತೆರವುಗೊಳಿಸುತ್ತೀರಿ ಎಂದು ನಿತ್ಯ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.  ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಅವರು ಉತ್ತರಿಸಿ, ರಸ್ತೆ, ಡಿವೈಡರ್, ಡಿವೈಡರ್ ಮೇಲೆ ಅಲಂಕಾರಿಕ ಗಿಡ ಸೇರಿದಂತೆ ಒಟ್ಟು 32 ಕೋಟಿ ರೂ. ಅನುದಾನದಡಿ ನಿರ್ಮಿಸಲಾಗಿದೆ, ಡಿವೈಡರ್ ಬಗೆಗಿನ ಸಮಸ್ಯೆ ಬಗ್ಗೆ ಸಮೀಕ್ಷಾ ವರದಿ ಪಡೆಯಲಾಗುತ್ತಿದ್ದು, ಇದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.  ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಪ್ರತಿಕ್ರಿಯಿಸಿ, ಚಿತ್ರದುರ್ಗ ನಗರದಲ್ಲಿನ ಡಿವೈಡರ್‍ಗಳನ್ನು ನಾನು ಗಮನಿಸಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ,  ಅಧಿಕಾರಿಗಳು ಬ್ಲಾಕ್‍ಸ್ಪಾಟ್, ತಿರುವು ಪ್ರದೇಶಗಳು ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು, ಸೋಮವಾರದೊಳಗೆ ವರದಿಯನ್ನು ಸಲ್ಲಿಸಬೇಕು, ಸಮಸ್ಯೆ ಪರಿಹಾರ ಆಗುವವರೆಗೆ ಗುತ್ತಿಗೆದಾರರಿಗೆ ಹಣ ಪಾವತಿಸಬಾರದು ಎಂದು ತಾಕೀತು ಮಾಡಿದರು.

[t4b-ticker]

You May Also Like

More From Author

+ There are no comments

Add yours