ಚಿತ್ರದುರ್ಗ ಜೆಡಿಎಸ್ ವಿಧಾನಸಭೆ ಟಿಕೆಟ್ ಪಡೆಯಲು ಆ ಇಬ್ಬರು ನಾಯಕರು ಕಸರತ್ತು.ಯಾರಿಗೆ ಟಿಕೆಟ್ ಎಂಬುದು ನಿಗೂಢ?

 

ಚಿತ್ರದುರ್ಗ: ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಜಿಲ್ಲೆಯಲ್ಲಿ ಜನರಲ್ ಕ್ಷೇತ್ರವಾಗಿದೆ. ಇದು ಹಲವು  ವರ್ಷಗಳ  ಹಿಂದೆ   ಜನತಾದಳಕ್ಕೆ ಹೆಚ್ಚಿನ ಶಕ್ತಿ ಇತ್ತು .‌ಬದಲಾದ ರಾಜಕೀಯ ಮೇಲಾಟದಲ್ಲಿ ಶಕ್ತಿ ಕಳೆದುಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಸ್ಥಳೀಯ‌ ಮುಖಂಡರು ಸ್ವಲ್ಪ ಶಕ್ತಿ ತುಂಬುತ್ತ ಬಂದಿದ್ದಾರೆ.

 

ಒಂದು ಬಾರಿ ಜೆಡಿಎಸ್ ಶಾಸಕರಾಗಿ ಎಸ್.ಕೆ.ಬಸವರಾಜನ್ ಆಯ್ಕೆಯಾಗಿದ್ದರು. ನಂತರ ಸೋಲು ಅನುಭವಿಸಿದರು. ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಸಹ ಕಾಂಗ್ರೆಸ್ ಪಕ್ಷ ಸೇರಿಕೊಂಡರು.  ಇದಾದ ಬಳಿಕ ಜೆಡಿಎಸ್ ಶಕ್ತಿ ಕುಂದುತ್ತ ಬಂದಿತ್ತಾದರೂ ನಗರಸಭೆ ಜೆಡಿಎಸ್ ವಶದಲಿರುವಂತೆ ಬಿ.ಕಾಂತರಾಜ್ ನೋಡಿಕೊಂಡರು.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಿಧಾನಸಭೆಗೆ ಸ್ವರ್ಧೆ ಮಾಡಲು ಬಿ.ಕಾಂತರಾಜ್ ಎಲ್ಲಾ ಸಿದ್ದತೆ ನಡಸಿದ್ದರು ಸಹ ಕೊನೆಗಳಿಗೆಯಲ್ಲಿ ಉದ್ಯಮಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ಕೊಡಿಸಿ ಸ್ವರ್ಧೆ ಇಂದ ಹಿಂದೆ ಸರಿದರು.

 

ವೀರೇಂದ್ರ ಪಪ್ಪಿ ಸಹ ಸೋಲು ಅನುಭವಿಸಿದರು. ಪಸ್ತುತ ಒಂದು ವರ್ಷ ವಿಧಾನಸಭೆ ಚುನಾವಣೆ ಇರುವಾಗಲೇ ರಾಜಕೀಯ ಚಟುವಟಿಕೆ ಗರಿಗೇದರಿದೆ.

ಹೌದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕಟ್ಟಾಳು ಬಿ.ಕಾಂತರಾಜ್ ಈ‌ ಬಾರಿ ವಿಧಾನಸಭೆಗೆ ಸ್ವರ್ಧೆ ಮಾಡಬೇಕೆಂದು ಆಶಯಲ್ಲಿ ಸಿದ್ದತೆ ನಡೆಸುತ್ತಿದ್ದಾರೆ ಹಾಗೂ ಬೇರೆಯರಿಗೆ ಟಿಕೆಟ್ ಕೊಡವುದಿಲ್ಲ , ಪಕ್ಷ ಕಟ್ಟುವವರು ನಾವು  ಎಂಬ ಮಾತು ಜೆಡಿಎಸ್ ಮುಖಂಡರ ಬಾಯಲ್ಲಿ ಹರಿದಾಡುತ್ತಿದೆ.
ಇದರ ಜೊತೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿ ಅಧಿಕಾರ ಪಡೆದು ಒಡಂಬಡಿಕೆಯ ವಿಚಾರದಲ್ಲಿ ವರಿಷ್ಠರ ವಿರುದ್ದು ಸೆಡ್ಡುಹೊಡೆದಿದ್ದ  ಕಾಂಗ್ರೆಸ್ ಪಕ್ಷದಿಂದ ಶಿಸ್ತುಕ್ರಮ  ಕೈಗೊಂಡ ಹೊರಹಾಕಿದ್ದಂತಹ  ಎಸ್.ಕೆ.ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಜೆಡಿಎಸ್ ಟಿಕೆಟ್ ಗಾಗಿ ಲಾಭಿ‌ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಟೌಟ್ ಎಂಬ ಸುಳಿವು ಸ್ವಲ್ಪ ಸಿಕ್ಕಿದ ಕಾರಣ ಜೆಡಿಎಸ್ ಅಭ್ಯರ್ಥಿ ಆಗಲು ಸಿದ್ದರಿದ್ದಾರೆ ಎಂಬ ಮಾತು ಎಲ್ಲಾ ಜನರಲ್ಲಿ ಕೇಳಿ ಬರುತ್ತಿದೆ.
ಏನೇ ಆಗಲಿ ಸ್ವರ್ಧೆ ಮಾಡಬೇಕು ಎಂಬ ನಿಲುವಿನಲ್ಲಿ ಹಾಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಸಹ ಇದ್ದರೆ‌. ಈ ಎಲ್ಲಾ ಬೆಳವಣಿಗೆಗಳ ನಂತರ ಎಸ್ ಕೆಬಿ ಕುಟಂಬ ಮತ್ತೆ ಜೆಡಿಎಸ್ ರೀ ಎಂಟ್ರಿ ಕೊಟ್ಟು ಟಿಕೆಟ್ ಪಡೆಯುತ್ತ ಅಥವಾ ಸಂಘಟನಕಾರ ಕಷ್ಟ ಕಾಲದಲ್ಲಿ ಪಕ್ಷ ಮುನ್ನಡೆಸಿದ ಕಾರಣಕ್ಕೆ ಬಿ‌.ಕಾಂತರಾಜ್ ಗೆ ಟಿಕೆಟ್ ಕೊಡುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
[t4b-ticker]

You May Also Like

More From Author

+ There are no comments

Add yours