ಚನ್ನಬಸವಣ್ಣ ಅವಿರಳ ಜ್ಞಾನಿ. ಚಿನ್ಮಯಜ್ಞಾನಿಯಾಗಿದ್ದರು: ಪಂಡಿತಾರಾಧ್ಯ ಶ್ರೀ

 

Hosadurga: ಅನುಭವ ಮಂಟಪದ ಬಸವಾದಿ ಶಿವಶರಣರಲ್ಲಿ ಅತ್ಯಂತ ಕಿರಿಯರಾಗಿದ್ದ ಚನ್ನಬಸವಣ್ಣನರು ತನ್ನ ಅನುಭಾವದಲ್ಲಿ ಅತ್ಯಂತ ಹಿರಿಯ ಸ್ಥಾನ ಪಡೆದಿದ್ದರು. ಚನ್ನಬಸವಣ್ಣನವರು ಅವಿರಳ ಜ್ಞಾನಿ. ಚಿನ್ಮಯಜ್ಞಾನಿಯಾಗಿದ್ದರು ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾಮಠದ ಜಗದ್ಗುರು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ(Panditaradhya Shivacharya Swamy)ತಿಳಿಸಿದರು,

ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ನಡೆದ ಚನ್ನಬಸವಣ್ಣನವರ ಜಯಂತಿ ಹಾಗೂ ರಾಷ್ಟ್ರೀಯ ನಾಟಕೋತ್ಸವದ ಸಿಂಹಾವಲೋಕನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಲಿಂಗಾಯತ ಧರ್ಮದ ವಿಚಾರ ಬಂದಾಗ ಅಲ್ಲಿದ್ದ ಹಿರಿಯ ಶರಣರೆಲ್ಲರೂ ಚನ್ನಬಸವಣ್ಣನವರನ್ನು ಕೇಳ್ತಾ ಇದ್ದರು. ಬಸವಣ್ಣ, ಅಕ್ಕ ನಾಗಲಾಂಬಿಕೆ, ಅನುಭವ ಮಂಟಪದ ಸಂಪರ್ಕದಿಂದ ಸಂಸ್ಕಾರ ಪಡೆದು ಉನ್ನತ ಸ್ಥಾನ ಪಡೆದುಕೊಂಡರು.

ಇದನ್ನೂ ಓದಿ:ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಯಾರಾದರೂ ಒಳ್ಳೆಯ ಕಾರ್ಯ ಮಾಡಿದಾಗ ಮೆಚ್ಚುವವರು ಇದ್ದ ಹಾಗೆ ಚುಚ್ಚವರು ಇರುವರು. ಮೆಚ್ಚುವವರೂ ಮುಖ್ಯ. ಚುಚ್ಚುವವರೂ ಮುಖ್ಯ. ಹಂದಿಯಾಂಗ ನಿಂದಕರಿರಬೇಕು. ನಿಂದಕರು ನಮ್ಮ ದೋಷಗಳನ್ನು ಕಳೆದು ಮತ್ತಷ್ಟು ನಮ್ಮನ್ನು ಪಕ್ವಗೊಳಿಸುವರು. ಒಳ್ಳೆಯ ಕಾರ್ಯಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ತುಂಬ ವಿರಳ. ಪತ್ರಿಕೆಯವರು ಕಾರ್ಯಕ್ರಮದಲ್ಲಿ ಏನು ನಡೆಯುತ್ತೋ ಅದನ್ನು ಮಾತ್ರ ಪ್ರಕಟಪಡಿಸಿದಾಗ ಪತ್ರಿಕಾ ಧರ್ಮ ಉಳಿಲಿಕ್ಕೆ ಸಾಧ್ಯ. ಮಾಧ್ಯಮದವರು ಕೊಡುವ ಸಂಗತಿಂದ ಮನಸ್ಸು ಅರಳುವ ವಿಚಾರಗಳನ್ನು ಪ್ರಚಾರ ಮಾಡಿದಾಗ ಮಾತ್ರ ಲೋಕಕಲ್ಯಾಣ ಸಾಧ್ಯ.

” ಕಳೆದ ವರ್ಷಗಳಿಗಿಂತ ಈ ವರ್ಷ ತುಂಬ ಪರಿಣಾಮಕಾರಿಯಾಗಿ ನಾಟಕೋತ್ಸವ ನಡೆಯಿತು. ಆದರೆ ನಾಟಕಗಳ ಅಯ್ಕೆಯಲ್ಲಿ ಸ್ವಲ್ಪ ಎಡವಿದ್ದೇವೆ ಅಂತ ಅನಿಸಿತು. ಮುಂದಿನ ದಿನಮಾನಗಳಲ್ಲಿ ಸೂಕ್ತ ನಾಟಕಗಳನ್ನು ಆಯ್ಕೆ ಮಾಡುವಂಥ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ಅಧ್ಯಾಪಕರು, ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ತುಂಬ ಶ್ರಮವಹಿಸಿದ್ದರು. ನಮ್ಮ ರಾಷ್ಟ್ರೀಯ ನಾಟಕೋತ್ಸವ ಜಾತ್ಯಾತೀತ ಕಾರ್ಯಕ್ರಮ. ಇಲ್ಲಿ ಎಲ್ಲ ವರ್ಗದವರು ತನು, ಮನ, ಧನವನ್ನು ಅರ್ಪಿಸುವರು.
ಸಾರ್ವಜನಿಕ ಜೀವನದಲ್ಲಿ ಲೆಕ್ಕಪತ್ರಗಳು ತುಂಬಾ ಮುಖ್ಯ. ಸಾರ್ವಜನಿಕರಿಂದ ಏನೇ ಹಣ ಬಂದರೂ ನಮ್ಮಲ್ಲಿ ಎಲ್ಲದಕ್ಕೂ ಲೆಕ್ಕಪತ್ರ ಇರುತ್ತೆ. ಹಾಗೆಯೇ ನಿಮ್ಮ ನಿಮ್ಮ ಕುಟುಂಬದಲ್ಲಿ ಲೆಕ್ಕಪತ್ರಗಳನ್ನಿಟ್ಟರೆ ಯಾವ ಸಮಸ್ಯೆ ಬಾರದು ಎಂದರು.

ನಿವೃತ್ತ ಪ್ರಾಚಾರ್ಯ ಐ ಜಿ ಚಂದ್ರಶೇಖರಯ್ಯ ನವರು ಚನ್ನಬಸವಣ್ಣನವರ ಬಗ್ಗೆ ಮಾತನಾಡಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಶರಣರ ಜಯಂತಿಗಳನ್ನು ಆಚರಿಸುವುದರ ಮೂಲಕ ಹೊಸ ಪರಂಪರೆಯನ್ನು ಬಿತ್ತಿದರು. ಅರಿವು, ಆಚಾರ, ಅನುಭಾವ ಸಾಧಿಸಿದರೆ ಶರಣರಾಗುತ್ತೇವೆ. ಚನ್ನಬಸವಣ್ಣನವರು ಕಿರಿಯರಾಗಿದ್ದರು ಅನುಭಾವದಲ್ಲಿ ಹಿರಿಯರು. ಲಿಂಗಾಯತ ಧರ್ಮ ತತ್ವಗಳ ಬಗ್ಗೆ ಅಧಿಕೃತವಾಗಿ ಮಾತನಾಡುವ ಏಕೈಕ ವ್ಯಕ್ತಿ ಚನ್ನಬಸವಣ್ಣ.
ಸಾಣೇಹಳ್ಳಿ ನೆಲದಲ್ಲಿ ನಡೆಯುವ ನಾವು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿಗೆ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಶರಣರ ಜಯಂತಿಗಳನ್ನು ಆಚರಿಸುವುದರ ಮೂಲಕ ಅವರ ವಿಚಾರಗಳನ್ನು ತಿಳಿಸುವ ಕಾರ್ಯ ಸಾಣೇಹಳ್ಳಿಯ ಶ್ರೀಗಳು ವರ್ಷದುದ್ದಕ್ಕೂ ವಿಭಿನ್ನ ಆಯಾಮಗಳ ಮೂಲಕ ಕಾರ್ಯಕ್ರಮ ಹಮ್ಮಿಕೊಂಡು ಶರಣರ ವಿಚಾರಗಳನ್ನು ತಿಳಿಸುತ್ತಾ ಬಂದಿದ್ದಾರೆ ಎಂದರು.

ಕೋಟ್ 01

ದಾರವಾಹಿ ಮತ್ತು ಡಿಜೆ ಸಂಸ್ಕೃತಿಯ ಅಬ್ಬರದಿಂದ ಯುವ ಪೀಳಿಗೆ ಹೊರಬರಬೇಕು, ಶರಣರ, ದಾರ್ಶನಿಕರ ನಾಟಕ ನೋಡುವ ಸಂಸ್ಕೃತಿ ಬಳಸಿ ಕೊಂಡಾಗ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಯಾಗುವುದು, ನಮ್ಮ ಪೂರ್ವಜರು ಶನಿ ಮಹಾತ್ಮೆ, ದೇವಿ ಮಹಾತ್ಮೆಂತಹ ನಾಟಕಗಳನ್ನ ಮಾಡಿ ಸಮಾಜಕ್ಕೆ ಅತ್ಯುತ್ತಮ ಸಂದೇಶಗಳನ್ನು ನೀಡುತ್ತಿದ್ದರು. ಈ ಸಂಸ್ಕೃತಿಯನ್ನು ಈಗಿನ ಮಕ್ಕಳು ಮತ್ತು ಯುವಜನತೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಹೊರಬೇಕಿದೆ, ಈ ನಿಟ್ಟಿನಲ್ಲಿ ಸಾಣೆಹಳ್ಳಿ ಪಂಡಿತರಾಧ್ಯ ಶ್ರೀಗಳು ನಾಟಕೋತ್ಸವಗಳ ಮೂಲಕ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ

ರಘು ಚಂದನ್, ಬಿಜೆಪಿ ಮುಖಂಡ

ಕಾರ್ಯಕ್ರಮದಲ್ಲಿ ಶಿವ ಸಂಚಾರ ಕಲಾವಿದರಾದ ಜ್ಯೋತಿ ಕೆ, ನಾಗರಾಜ್ ಹೆಚ್ ಎಸ್, ತಬಲಸಾಥಿ ಶರಣಕುಮಾರ್ ವಚನಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಚೆನ್ನಗಿರಿ ಬಿಇಒ ಎಲ್ ಜಯಪ್ಪ,ಮಾಜ ಸೇವಕ ಹೆಬ್ಬಳ್ಳಿ ಮಲ್ಲಿಕಾರ್ಜುನ್, ಶ್ರೀಧರ್, ಶರತ್ ಪಾಟೀಲ್ , ಕೋಗುಂಡೆ ಮಂಜುನಾಥ್, ಮಾತನಾಡಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬನಸೀಹಳ್ಳಿ ಅಜ್ಜಪ್ಪ ಅಧ್ಯಾಪಕ ಮಲ್ಲಿಕಾರ್ಜುನ ಎನ್ ಸಿ ದೀಪ, ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು

[t4b-ticker]

You May Also Like

More From Author

+ There are no comments

Add yours