ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಮುಂದಾದ ತಹಶೀಲ್ದಾರ್ ಎನ್‌.ರಘುಮೂರ್ತಿಗೆ ದುಷ್ಕರ್ಮಿಗಳಿಂದ ಅಡ್ಡಿ, ಪೋಲಿಸ್ ಇಲಾಖೆ ಸಾಥ್ ಇಲ್ಲದೆ ಕಾದು ವಾಪಸ್

 

ಚಳ್ಳಕೆರೆ:  ತಾಲೂಕು ತಳುಕು ಹೋಬಳಿ ರೇಣುಕಾಪುರ ಗ್ರಾಮದ ಸರ್ಕಾರಿ ಸರ್ವೆ ನಂಬರ್ 94ರಲ್ಲಿ ಶ್ರೀ ತಿಪ್ಪೇಸ್ವಾಮಿ ವಿನ್ ಕುರಿ ಪಾಲಯ್ಯ ಇವರು ರಾತ್ರೋರಾತ್ರಿ ಒಂದೆಕರೆ 24 ಗುಂಟೆ ಜಮೀನನ್ನು ಒತ್ತುವರಿ ಮಾಡಿ ಗುಡಿಸಲುಗಳು ಮತ್ತು ಕಣ ಮನೆ ಮಾಡಿದ್ದು ಈ ಒತ್ತುವರಿ ಜಮೀನನ್ನು ತೆರವುಗೊಳಿಸಲು ಹೋದಂತ ತಾಸಿಲ್ದಾರ್ ಅವರಿಗೆ ಕೆಲವು ದುಷ್ಕರ್ಮಿಗಳು ಅಡ್ಡಿಪಡಿಸಿದ ಘಟನೆ ರೇಣುಕಾ ಪುರದಲ್ಲಿ ನಡೆದಿದೆ.

ರೇಣುಕಾಪುರ ಗ್ರಾಮದ ಒತ್ತವರಿ ಮಾಡಿರುವಂತಹ ಜಮೀನು ತೆರವು ಮಾಡಲು ಬೆಳಗ್ಗೆ ಬರುತ್ತಾರೆ ಎಂಬ ಮಾಹಿತಿಯಿಂದ  ರಾತ್ರೋರಾತ್ರಿ ಒತ್ತುವರಿ ಮಾಡಿದ್ದು ಇದು ಸರ್ಕಾರಿ ಮತ್ತು ಅರಣ್ಯ ಜಮೀನು ಆಗಿದ್ದು ಈ ಜಮೀನನ್ನು ಒತ್ತುವರಿ ತೆರವು ಮಾಡುವಂತೆ ರೇಣುಕಾ ಪುರದ ಗ್ರಾಮಸ್ಥರು  ತಹಶೀಲ್ದಾರ್  ಅವರಿಗೆ ಮನವಿ ಮಾಡಿದರು. ಅದರಂತೆ ತಹಶೀಲ್ದಾರ್  ಅವರು ಸಂಬಂಧಿಸಿದ ಒತ್ತುವರಿದಾರರಿಗೆ ನೋಟಿಸ್ ನೀಡಿ ಒತ್ತುವರಿ ತೆರವು ಆದೇಶ ಹೊರಡಿಸಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಸಾಕಷ್ಟು ಬಂದೋಬಸ್ತ್ ಒದಗಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿ ಈ  ದಿನ ಒತ್ತುವರಿ ತೆರವಿಗೆ ಮುಂದಾದಾಗ ಸುತ್ತಮುತ್ತಲ ಗ್ರಾಮದ ಕೆಲವು ದುಷ್ಕರ್ಮಿಗಳು ತಹಶೀಲ್ದಾರ್  ಮತ್ತು ಸಿಬ್ಬಂದಿಗಳಿಗೆ ವಿವಾದಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ.  ಕಳೆದ ಹಲವಾರು ದಿನಗಳಿಂದ ಈ ರೀತಿ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಮುಂದಾಗಿದ್ದು ಸರಕಾರಿ ಜಮೀನನ್ನು ವಾಪಸು ಪಡೆಯಲು ಯಶಸ್ವಿಯಾಗಿದ್ದು ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡ ಈ ಕಾರ್ಯದಲ್ಲಿ ತಹಶೀಲ್ದಾರ್  ಅವರು ಸರ್ಕಾರಿ ಜಮೀನನ್ನು ಉಳಿಸುವ ಕಾರ್ಯಕ್ಕೆ ಕೈಜೋಡಿಸಿದ್ದರು.

ಒತ್ತುವರಿ ತೆರವಿಗೆ ಮುಂದಾದ ಸಂದರ್ಭದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿಯೂ ನಿನ್ನೆ ಮಾಹಿತಿ ನೀಡಿದರು ಸಹ   ಹಾಜರಾಗದ ಕಾರಣ  ಒತ್ತುವರಿ ತೆರವು ಮಾಡುವುದನ್ನು ಇನ್ನೊಂದು ದಿನಾಂಕಕ್ಕೆ ನಿಗದಿಪಡಿಸಿ ವಾಪಸ್ ಬಂದ ಘಟನೆ ನಡೆದಿದೆ.

ತಹಶೀಲ್ದಾರ್ ಎನ್.ರಘುಮೂರ್ತಿ ಅವರನ್ನು ನ್ಯೂಸ್ 19 ಕನ್ನಡ ಸಂಪರರ್ಕಿಸಿದಾಗ ಮಾತನಾಡಿ ರೇಣುಕಾಪುರ ಗ್ರಾಮಸ್ಥರು ಒತ್ತುವರಿ ಜಮೀನು ಬಿಟ್ಟು ಕೊಡಲು ಒಪ್ಪಿದ್ದು 3-4 ದಿನ ಸಮಯ  ಕೇಳಿದ್ದಾರೆ. ಆದರೆ ಅಕ್ಕ ಪಕ್ಕದ ಹಳ್ಳಿಯ ಜನರು ಅವರದಲ್ಲದ ಸಮಸ್ಯೆಗೆ ಸುಖಸುಮ್ಮನೆ ಮಧ್ಯ ಪ್ರವೇಶ ಮಾಡಿದ್ದು  ಇದರ ಹಿಂದೆ ಬೇರೆಯದೆ ಕೈಗಳಿವೆ. ನಾನು ತಳುಕು ವ್ಯಾಪ್ತಿಯ ಪಿಎಸ್ಐ ಮತ್ತು  ಪೋಲಿಸ್ ಇಲಾಖೆ ಅವರಿಗೆ ತಿಳಿಸಿದರು ಸಹ ಒಬ್ಬರು ಸಹ ಆಗಮಿಸದಿರುವುದು ತುಂಬಾ ಬೇಸರದ ಸಂಗತಿ ಪೋಲಿಸ್ ಸಹಕಾರ ನೀಡಿದರೆ ತೆರವು ಕಾರ್ಯ ಪೂರ್ಣಗೊಳಿಸಲಾಗುವುದು ಇದರ ವಿಚಾರವಾಗಿ ಪೋಲಿಸ್ ಇಲಾಖೆ ಮೇಲಾಧಿಕಾರಿಗಳ  ಗಮನಕ್ಕರೆ ತರಲಾಗುವುದು ಪ್ರತಿಕ್ರಿಯೆ ನೀಡಿದರು.

 

[t4b-ticker]

You May Also Like

More From Author

+ There are no comments

Add yours