ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ:ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-12: ಭಾರತ್ ಜೋಡೋ ಕಾರ್ಯಕ್ರಮ ದೇಶವನ್ನು ಒಗ್ಗೂಡಿಸುವ ಕಾರ್ಯವಾಗಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಶಾಸಕ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತ್ ಜೋಡೋ ಪೂರ್ವಭಾವಿ ಸಭೆ ಮತ್ತು ತಂಡದೊಂದಿಗೆ ರಾಹುಲ್‌ಗಾಂಧಿಯವರು ಸಂಚಾರಿಸುವ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಸ್ಥಳಗಳ‌ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.
ರಾಹುಲ್‌ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು, ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎಐಸಿಸಿ‌ ಉಪಾಧ್ಯಕ್ಷರು ಚಳ್ಳಕೆರೆ ನಗರದಲ್ಲಿ ವಾಸ್ತವ್ಯ ಮಾಡುವ ಸಂಭವವಿದ್ದು ಈ ಬಗ್ಗೆ ಮುಂದಿನ ದಿನದಲ್ಲಿ ಸ್ಪಷ್ಟಪಡಿಸಲಾಗುವುದು ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಎ.ಐ.ಸಿ.ಸಿ.ಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ದೇಶದಲ್ಲಿ ಹೊಸ ಆಯಾಮ ಉಂಟು ಮಾಡಲಿದೆ. ಬಿಜೆಪಿ ಪಕ್ಷದ ಭ್ರಷ್ಟಾಚಾರ, ದುರಾಡಳಿತ ದೇಶದ ಜನರು ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ನಿರ್ಧಾರವನ್ನು ಮತದಾರರು ಮಾಡಿದ್ದು, ಇದಕ್ಕೆ‌ ಪೂರಕವಾಗಿ ಬಾರತ್ ಜೋಡೋ ನಡೆಸುವುದು ದೇಶದ ಹಿತಕ್ಕಾಗಿ ಎಂದರು.
ಈ ಸಂದರ್ಭದಲ್ಲಿ ಜಯಸಿಂಹ, ಮಾಜಿ ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್, ಮಾಜಿ ಶಾಸಕರುಗಳಾದ ತಿಪ್ಪೇಸ್ವಾಮಿ, ರಾಜೇಶ್, ಶಿವಮೂರ್ತಿನಾಯಕ್ ಮತ್ತು ಜಿಲ್ಲಾಧ್ಯಕ್ಷ ತಾಜ್ ಪೀರ್ , ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್ ಡಿ ಕುಮಾರ್, ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಶಿವು ಯಾದವ್, ಮೈಲಾರಪ್ಪ ,ಯೋಗೇಶ್ ಬಾಬು, ಮತ್ತು ಚಳ್ಳಕೆರೆ ಬ್ಲಾಕ್ ಅಧ್ಯಕ್ಷ ತಿಪ್ಪೇಸ್ವಾಮಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ಆರ್ ಕಿರಣ್ ಶಂಕರ್, ನಗರಸಭೆ ಸದಸ್ಯರುಗಳಾದ ವೀರಭದ್ರಪ್ಪ, ರಾಘವೇಂದ್ರ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಮೂರ್ತಿ, ವಿಶ್ವಕರ್ಮ ರಾಜ್ಯ ಅಧ್ಯಕ್ಷ ಪ್ರಸನ್ನ ಕುಮಾರ್ , ಮುಖಂಡರಾದ ಅನ್ವರ್ ಮಾಸ್ಟರ್, ಅಂಜನಪ್ಪ ,ಪ್ರಕಾಶ್ ,ಖಾದರ್, ಕಿಸಾನ್ ಜಿಲ್ಲಾಧ್ಯಕ್ಷರಾದ ನಾಗರಾಜ್, ದೊಡ್ ರಂಗಪ್ಪ, ಮುಖಂಡರುಗಳು, ಕಾರ್ಯಕರ್ತರುಗಳು ಮತ್ತು ನಾಯಕರಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours