ಗುಡ್ ನ್ಯೂಸ್: kSRTC ನಿಗಮದಲ್ಲಿ 34 ಹುದ್ದೆಗಳಿಗೆ ಅರ್ಜಿ‌ ಆಹ್ವಾನ

 

ರಾಜ್ಯ ಸುದ್ದಿ:  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ 3 ದರ್ಜೆಯ ಮೇಲ್ವಿಚಾರಕೇತರ ಸ್ಥಳಿಯ ವೃಂದ ವಿವಿಧ ಹಿಂಬಾಕಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ  ಮಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಹುದ್ದೆಗಳ ಸಂಪೂರ್ಣ  ವಿವರ ಕೆಳಗಿನಂತೆ ಇದೆ.
ಕುಶಲಕರ್ಮಿ- 17

ತಾಂತ್ರಿಕ ಸಹಾಯಕ- 3
ಸಹಾಯಕ ಸಂಚಾರ ನಿರೀಕ್ಷಕ- 6
ಕ.ರಾ.ಸಾ.ಪೇದೆ- 5, (ಮಿಕ್ಕುಳಿದ ವೃಂದ)- 2
ಸಹಾಯಕ ಲೆಕ್ಕಿಗ- 1

ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್​/ ಆಟೋಮೊಬೈಲ್​/ ವೆಲ್ಡಿಂಗ್​ ಮತ್ತು ಶೀಟ್​ ಮೆಟಲ್​ ಟೆಕ್ನಾಲಜಿಯಲ್ಲಿ 3 ವರ್ಷದ ಇಂಜಿನಿಯರಿಂಗ್​ ಡಿಪ್ಲೊಮಾ ಪದವಿ ಪಡೆದಿರಬೇಕು.ಹಾಲಿ     ಚಾಲ್ತಿಯಲ್ಲಿರುವ ಭಾರಿ ಪ್ರಯಾಣಿಕ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಆಯ್ಕೆಗೊಳ್ಳುವ ಅಭ್ಯರ್ಥಿಗಳು ನಿಯಮಾನುಸಾರ ಕಂಪ್ಯೂಟರ್​ ಸಾಕ್ಷರತಾ ಪರೀಕ್ಷೆಯಲ್ಲಿ ಶೇ.50 ಅಂಕಗಳಿಗೆ ಕಡಿಮೆ ಇಲ್ಲದಂತೆ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್​ ಜ್ಞಾನ ಇರಬೇಕು.

ವಯೋಮಿತಿ
ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇಲಾಖೆಯ ಅಭ್ಯರ್ಥಿಗಳಿಗೆ ಪ್ರತಿ ವರ್ಷಕ್ಕೆ 1 ವರ್ಷ ರಿಯಾಯಿತಿ ನೀಡಲಾಗುವುದು. ಅಂದರೆ ಅವರ ವಯೋಮಿತಿ 45 ವರ್ಷ ಮೀರಿರಬಾರದು.

ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ವರ್ಷ ಕೆಲಸದ ಮೇಲಿನ ತರಬೇತಿಗೆ ನಿಯೋಜಿಸಲಾಗುವುದು. ಸಹಾಯಕ ಸಂಚಾರ ನಿರೀಕ್ಷಕ ಮತ್ತು ಕುಶಲಕರ್ಮಿಗೆ 13,970 ರಿಂದ 20,740 ರೂ., ತಾಂತ್ರಿಕ ಸಹಾಯಕ ಮತ್ತು ಪೇದೆಗೆ 11,640 ರಿಂದ 15,700 ರೂ., ಸಹಾಯಕ ಲೆಕ್ಕಿಗರಿಗೆ 14,970 ರಿಂದ 26,670 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ತರಬೇತಿಯಲ್ಲಿ ತೃಪ್ತಿದಾಯಕ ಎನಿಸಿದರೆ ಎರಡು ವರ್ಷಗಳ ಅವಧಿಗೆ ಪರೀಕ್ಷಾರ್ಥ ಸೇವೆಯಲ್ಲಿ ನಿಯೋಜಿಸಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ
ಅರ್ಜಿಯನ್ನು ಕಡ್ಡಾಯವಾಗಿ ಆನ್​ಲೈನ್​ನಲ್ಲಿಯೇ ಸಲ್ಲಿಸಬೇಕು. ನಿಗದಿತ ಅವಧಿಯ ನಂತರದ ಅರ್ಜಿ ಸ್ವೀಕರಿಸುವುದಿಲ್ಲ. ಒಂದೇ ವಿದ್ಯಾರ್ಹತೆಯ ವಿವಿಧ ಹುದ್ದೆಗಳಿಗೆ ಪ್ರತ್ಯೇಕ/ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದಲ್ಲಿ ಮೊದಲು ಸಲ್ಲಿಸಿದ ಅರ್ಜಿಯ ನೋಂದಣಿ ಸಂಖ್ಯೆಯನ್ನು ನಂತರ ಸಲ್ಲಿಸುವ ಎಲ್ಲ ಅರ್ಜಿಯಲ್ಲಿ ನಮೂದಿಸಬೇಕು. ಪ್ರತಿ ಹುದ್ದೆಗೆ 300 ರೂ. ಶುಲ್ಕ ನಿಗದಿಯಾಗಿದೆ.

ನೇಮಕಾತಿಯ ಹಂತ
ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಬೇಕು. ಇದರಲ್ಲಿ ಕನಿಷ್ಠ 30 ಅಂಕ ಗಳಿಸಿದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಮೆರಿಟ್​ ಆಧಾರದಲ್ಲಿ ಅರ್ಹರನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು. ಈ ವೇಳೆ ಮೂಲ ದಾಖಲಾತಿ, ದೇಹದಾರ್ಢ್ಯತೆ ಪರಿಶೀಲನೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಇರಲಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 18.9.2022
ಅಧಿಸೂಚನೆಗೆ: https://bit.ly/3TLuxBC, https://bit.ly/3Bgy7ga

ಮಾಹಿತಿಗೆ: http://krtc.karnataka.gov.in

[t4b-ticker]

You May Also Like

More From Author

+ There are no comments

Add yours