ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಸಾಧ್ಯತೆ

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗಲು ಸರ್ಕಾರದ ತಪ್ಪು ನಿರ್ಧಾರ ಕಾರಣ ಎಂಬ ಮಾತು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಮೂಡಿದೆ. ಪ್ರತಿ ಹೊಸ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊರ ಜಿಲ್ಲೆಯವರನ್ನು ನೇಮಿಸುತ್ತಾರೆ. ಅವರು ಕೇವಲ ಜೆಡಿ ಸಭೆ ಮತ್ತು ಸಿಎಂ ಭೇಟಿ, ಸರ್ಕಾರಿ ಕಾರ್ಯಕ್ರಮಗಳಿಗೆ ಭಾಗವಹಿಸಲು ಸಿಮೀತವಾಗುತ್ತಾರೆ‌. ಆದ್ದರಿಂದ ಈ ಬಾರಿ ಚಿತ್ರದುರ್ಗ ಜಿಲ್ಲೆಯವರನ್ನೆ ಉಸ್ತುವಾರಿ ಸಚಿವರನ್ನು ಮಾಡಬೇಕು ಎಂಬ ಕೂಗು ಕೇಳುತ್ತಿದೆ‌.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ಆಗ್ರಹ ನಡೆಯುತ್ತಿದೆ. ಸದಾ ಅಭಿವೃದ್ಧಿ ಪರವಾದ ಚಿಂತನೆ ನಡೆಸುವ. ರಘುಮೂರ್ತಿ ಅವರು ಸಚಿವರಾದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂಬ ಮಾತು ಕೇಳುತ್ತಿದೆ. ಒಂದೇ ಬಾರಿಗೆ ಗೆಲುವು ಸಾಧಿಸಿದ ಸಂದರ್ಭದಲ್ಲಿ ಚಳ್ಳಕೆರೆ ಕ್ಷೇತ್ರದ ಚಿತ್ರಣವನ್ನು ಬದಲಿಸಿದ ಕೀರ್ತಿ ರಘುಮೂರ್ತಿ ಅವರಿಗೆ ಸಲ್ಲುತ್ತದೆ‌. ಜಿಲ್ಲೆಯ ಆಧುನಿಕತೆ ಮತ್ತು ಅಭಿವೃದ್ಧಿ , ದೂರದೃಷ್ಟಿ ಆಲೋಚನೆ ಹೊಂದಿರುವ ಇವರು ಸಚಿವರಾದರೇ ಎಲ್ಲಾ ಶಾಸಕರನ್ನು ಒಟ್ಟಿಗೆ ಕೊಂಡೊಯ್ದು ಅಭಿವೃದ್ಧಿ ರಥ ಎಳೆಯುತ್ತಾರೆ ಎಂಬ ನಂಬಿಕೆ ಜಿಲ್ಲೆಯ ಜನರಲ್ಲಿದೆ.

ಲೋಕಸಭೆ ದೃಷ್ಟಿಯಿಂದ ಪಕ್ಷಕ್ಕೆ ಅನುಕೂಲ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬರಲು ರಘುಮೂರ್ತಿ ಸಚಿವರಾಗಬೇಕು. ಜಿಲ್ಲೆಯಾದ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಾಯಕ ಸಮಾಜದ ಮತಗಳು ಇಡಿಯಾಗಿ ಕಾಂಗ್ರೆಸ್ ಬುಟ್ಟಿ ಸೇರಲಿವೆ. ಚುನಾವಣಾ ಗೆಲುವಿಗೆ ಸಹಕಾರಿಯಾಗಲಿದೆ.

ಕ್ಲಿನ್ ಹ್ಯಾಂಡ್ ಮತ್ತು ಸ್ವಚ್ಚ ಆಡಳಿತ. ಸಂಘಟನ ಚತುರ .

ಶಾಸಕ ಟಿ.ರಘುಮೂರ್ತಿ ಅವರು ಪಕ್ಷ ಸಂಘಟನೆಯಲ್ಲಿ ಎತ್ತಿದ ಕೈ ಅಂತ ಹೇಳಬಹುದು. ಯಾವುದೇ ಆರೋಪವಿಲ್ಲದೇ ಎರಡು ಬಾರಿ ಅಭಿವೃದ್ಧಿ ಕೆಲಸಗಳಿಂದ ಗೆಲುವು ಸಾಧಿಸಿದ್ದು ಇವರ ಹೆಗ್ಗಳಿಕೆಯಾಗಿದೆ. ಸ್ವಚ್ಚವಾದ ಆಡಳಿತಕ್ಕೆ ಹೆಸರಾಗಿದ್ದಾರೆ. ಹಿಡಿದ ಕೆಲಸವನ್ನು ಬಿಡದೇ ಸಾಧಿಸುವ ಮೂಲಕ ಅಭಿವೃದ್ಧಿ ಎಂದರೆ ಏನು ಎಂಬುದನ್ನು ರಾಜ್ಯವೇ ಚಳ್ಳಕೆರೆ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ.

ಈ ಎಲ್ಲಾ ದೃಷ್ಟಿಯಿಂದ ಜಿಲ್ಲೆಯ ಅಭಿವೃದ್ಧಿಗಾಗಿ ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ಅಭಿಪ್ರಾಯ ಜಿಲ್ಲೆಯ ಜನರಲ್ಲಿದೆ. ಹೈಕಮಾಂಡ್ ನಲ್ಲಿ ಸಹ ಉತ್ತಮ ಅಭಿಪ್ರಾಯ ಮತ್ತು ಪಕ್ಷಕ್ಕೆ ನಿಷ್ಠೆ ಹೊಂದಿರುವುದು ಸಹ ಹಲವು ಬಾರಿ ಸಾಬೀತಾಗಿದೆ. ಈ ಎಲ್ಲಾ ನಡುವೆ ಚಿತ್ರದುರ್ಗ ಜಿಲ್ಲೆಗೆ ರಘುಮೂರ್ತಿ ಹೆಸರು ಪರಿಗಣಿಸುತ್ತಾರೆ ಎಂಬ ನಂಬಿಕೆ ನಾಯಕ ಸಮಾಜಕ್ಕೆ ಮತ್ತು ಕೋಟೆ ನಾಡಿನ‌ಜನತೆಯಲ್ಲಿ ಮೂಡಿದ್ದು ಎಲ್ಲಾವನ್ನು ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours