ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಧನೆಯನ್ನು ಜನರಿಗೆ ಮುಟ್ಟಿಸಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಮತ್ತು  ಸಾಧನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕೆಲಸ ಬಿಜೆಪಿ ಪಕ್ಷದ ಪ್ರತಿಯೊಬ್ಬರು ಮಾಡಬೇಕಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ  ಬಿಜೆಪಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರಗತಿ ರಥ ಯಾತ್ರೆಯ ಎಲ್ ಇಡಿ  ವಾಹನಕ್ಕೆ  ಚಾಲನೆ ನೀಡಿ ಮಾತನಾಡಿದರು.
ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ, ಮಹಿಳೆಯರಿಗೆ, ವೃದ್ದರಿಗೆ, ಯುವಕ ಯುವತಿಯರಿಗೆ  ಸೌಲಭ್ಯಗಳನ್ನು ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಪಿಎಂಇಜಿಪಿ ಮತ್ತು ಸಿಎಂಇಜಿಪಿ, ಮುದ್ರ ಮತ್ತು ನಿಗಮಗಳ ಮೂಲಕ ಸೌಲಭ್ಯ ಒದಗಿಸಿ ಸ್ವಯಂ ಉದ್ಯೋಗಕ್ಕೆ ಒತ್ತು ನೀಡುತ್ತಿದ್ದೇವೆ. ರೈತರಿಗೆ ಪ್ರತಿ ವರ್ಷ ಸಹಾಯ ಧನ,  ಸಣ್ಣ ಹಿಡುವಳಿದಾರರಿಗೆ ಗಂಗ ಕಲ್ಯಾಣ , ಯೋಜನೆ, ಚಕ್ ಡ್ಯಾಂ ನಿರ್ಮಾಣ, ಕೃಷಿ ಹೊಂಡಕ್ಕೆ ಸಹಾಧನ, ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಇಂತಹ ನೂರಾರು ಕಾರ್ಯಕ್ರಮಗಳನ್ನು ಜನರಿಗೆ ನೀಡಿದ್ದು ಇದನ್ನು ರಾಜ್ಯ  ಘಟಕದಿಂದ ಪ್ರಗತಿ ರಥ ಯಾತ್ರೆ  ಮೂಲಕ ನಗರ ಮತ್ತು ಪ್ರತಿ ಹಳ್ಳಿಯಲ್ಲಿ ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಧನೆಗಳನ್ನು  ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ.
ದೇಶ ಮತ್ತು ರಾಜ್ಯದಲ್ಲಿ  ಪ್ರತಿ ಮನೆಗೆ ಒಂದಲ್ಲ ಒಂದು  ಸೌಲಭ್ಯವನ್ನು ನೀಡಿದ ಏಕೈಕ ಸರ್ಕಾರ ಬಿಜೆಪಿ ಆಗಿದೆ. 2014 ಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರ ಈ ದೇಶವನ್ನು  ಹಳ್ಳ ಹಿಡಿಸಿತ್ತು. ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಕ್ರಮ ವಹಿಸಿರಲಿಲ್ಲ.ಆದರೆ  2014 ರಲ್ಲಿ ಭಾರತ ದೇಶಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ನಮಗೆ ಸುವರ್ಣಯುಗ ಪ್ರಾರಂಭವಾಯಿತು. ನಮ್ಮ ಎದುರಾಳಿ ದೇಶಗಳು ನಮಗೆ ಶರಣಾದವು. ಬದಲಾವಣೆ ಗಾಳಿ ಬೀಸಿ ದೇಶದ ಚಿತ್ರಣವನ್ನು ಬದಲಿಸುವ ಕೆಲಸ ಮೋದಿ ಅವರು ಮಾಡಿದರು.
ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ  60 ವರ್ಷಗಳ  ಆಡಳಿತ ಸಂದರ್ಭದಲ್ಲಿ  ನಡೆದ ದೊಡ್ಡ ಹಗರಣಗಳ ಬಗ್ಗೆ ಜನರಿಗೆ ಮಾಡಿದ ಮೋಸದ ಕುರಿತು ಜನರಿಗೆ  ಬಿಚ್ಚಿಡುವ ಕೆಲಸ ಆಗಬೇಕಿದೆ. ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಹಣ ಲೂಟಿ ಮಾಡುವ ಕೆಲಸ ಕಾಂಗ್ರೆಸ್ ಮಾಡಿದ್ದು  ಅದನ್ನು ತನಿಖೆಗಳನ್ನು ಎದುರಿಸುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ದಲ್ಲಿ  ಭಾರೀ ಪ್ರಮಾಣದ ಹಗರಣ ಆಗಿದೆ.ಅದು ತನಿಖೆ ಸಹ ಆಗುತ್ತಿದೆ.ಹೀಗೆ ಸಾಕಷ್ಟು ಹಗರಣಗಳು ಇದ್ದು ಕಾಂಗ್ರೆಸ್ ಹಗರಣ ಮತ್ತು ಬಿಜೆಪಿ ಸಾಧನೆ ಎರಡನ್ನು ಜನರಿಗೆ ತಿಳಿಸಿ ಎಂದು ಕರೆ ನೀಡಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಾಲಯ್ಯ ಮಾತನಾಡಿ ಪ್ರಗತಿ ರಥ ಪ್ರತಿ ಬೂತ್ ಮಟ್ಟದಲ್ಲಿ ಸಂಚರಿಸಲಾಗಿದೆ. ಕ್ಯೂರ್ ಕೋಡ್ ಮೂಲಕ  ಬಿಜೆಪಿ ಸರ್ಕಾರದ ಪ್ರಾಣಾಳಿಕೆ ಸಲಹೆ ಸೂಚನೆ ನೀಡಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು  ವೀಡಿಯೋ ಮುಖಾಂತರ ಸಾರ್ವಜನಿಕರಿಗೆ ತಿಳಿಸುವಂತಹ ಕೆಲಸ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ  ಜಿಲ್ಲಾ ಪ್ರಗತಿ ರಥ ಸಂಚಾಲಕ ಚಂದ್ರು ವಿಎಸ್ ಹಳ್ಳಿ,ಜಿಲ್ಲಾ ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್, ಯುವ ಮೋರ್ಚಾ ನಗರ   ಅಧ್ಯಕ್ಷ ಶ್ರೀರಾಮ್,  ನಗರ ಪ್ರಧಾನ ಕಾರ್ಯದರ್ಶಿಗಳಾದ ವರುಣ್, ಮಲ್ಲಿಕಾರ್ಜುನ್ , ಜಿಲ್ಲಾ ವಕ್ತಾರರು ನಾಗರಾಜ್ ಬೇಂದ್ರೆ, ದಗ್ಗೆ ಶಿವಪ್ರಕಾಶ್ , ಖಜಾಂಚಿ ಉಮೇಶ್ ಮತ್ತು ಪಧಾಧಿಕಾರಿಗಳು, ಕಾರ್ಯಕರ್ತರು ಭಾಗವಹಿದ್ದರು.
[t4b-ticker]

You May Also Like

More From Author

+ There are no comments

Add yours