ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ (Karnataka) ಅಕ್ಟೋಬರ್ 15:
ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬಂಧಿಸಿದಂತೆ, ಮತದಾರರ ಶಿಕ್ಷಣ ಮತ್ತು ಅರಿವು ಮೂಡಿಸುವಲ್ಲಿ ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡ ಮಾಧ್ಯಮಗಳಾದ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ರೇಡಿಯೋ ಮಾಧ್ಯಮ, ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದಂತೆ ‘ನ್ಯಾಷನಲ್ ಮೀಡಿಯಾ ಅವಾರ್ಡ್ 2022’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ. application call for
ಚುನಾವಣೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಚುನಾವಣಾ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮಾಧ್ಯಮ ಸಂಸ್ಥೆಗಳ ಉತ್ತಮ ಕೊಡುಗೆಯನ್ನು ಗುರುತಿಸುವುದು, ಚುನಾವಣಾ ಪ್ರಕ್ರಿಯೆ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು, ಮತದಾನ, ನೊಂದಣಿಯ ಪ್ರಸ್ತುತತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿಸಿದ ಮಾಧ್ಯಮಗಳಿಗೆ ‘ನ್ಯಾಷನಲ್ ಮೀಡಿಯಾ ಅವಾರ್ಡ್ 2022’ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ.  ಆಯ್ಕೆಯಾದ ಮಾಧ್ಯಮ ಸಂಸ್ಥೆಗಳಿಗೆ 2023ರ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನದಂದು ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಆಸಕ್ತರು ಪ್ರಶಸ್ತಿಗಾಗಿ ತಮ್ಮ ಪತ್ರಿಕಾ ವರದಿಯ ಭಾಗಗಳು ಪಿಡಿಎಫ್ ಮೂಲಕ ಅಥವಾ ಡಿಜಿಟಲ್ ಮಾಧ್ಯಮಗಳು ವೆಬ್‍ಲಿಂಕ್ ವಿಳಾಸ, ಫೋಟೋಗಳು, ಸಿಡಿ ಮತ್ತಿತರ ವರದಿಗಳನ್ನು ಶ್ರೀ ಲವ್‍ಕುಶ್ ಯಾದವ್,  Under Secretary (Communication), Election Commission Of India, Nirvachan Sadan, Ashoka Road, News Delhi-110001 ಇವರಿಗೆ. ಇಮೇಲ್-  media-division@eci.gov.in ಗೆ ಸಲ್ಲಿಸಬಹುದು.  ಮತದಾರರ ಜಾಗೃತಿ ಅಭಿಯಾನದ ಗುಣಮಟ್ಟ, ವ್ಯಾಪ್ತಿ ಮತ್ತು ಪ್ರಮಾಣದ ವಿಸ್ತಾರ, ಸಾರ್ವಜನಿಕರ ಮೇಲೆ ಪ್ರಭಾವ ಬೀರಿರುವ ದಾಖಲೆ, ಮುಂಬರುವ ಚುನಾವಣೆಗಳ ಬಗ್ಗೆ ಅರಿವಿನ ವ್ಯಾಪ್ತಿ, ಇತರೆ ಸಂಬಂಧಿಸಿದ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುವ ಮೂಲಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು ಎಂದು ರಾಜ್ಯದ ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭು ಭಟ್ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours