ಚಳ್ಳಕೆರೆ ಬಿಜೆಪಿ ಟಿಕೆಟ್ ಗೆ ಏಳು ಜನರ ಪೈಪೋಟಿ, ಅಭ್ಯರ್ಥಿಗಳ ಗುಂಪುಗಾರಿಕೆ ಬಿಸಿಗೆ ಬಾಡುತ್ತಿದೆ ಕಮಲ

 

ವಿಶೇಷ ವರದಿ

ಚಿತ್ರದುರ್ಗ:ಡಿ:10: ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಿಜೆಪಿಗರೇ  ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.
ಬಿಜೆಪಿ ಟಿಕೆಟ್ ಗಾಗಿ ಕಮಲದ ಸ್ಥಳೀಯ ನಾಯಕರು ಮತ್ತು ವಲಸೆ ನಾಯಕರ ನಡುವೆ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ನಾಯಕರುಗಳು ಒಳಗೊಳಗೆ ಬಿಜೆಪಿ ಅಭ್ಯರ್ಥಿ ನಾನೇ ಎಂಬ ರೀತಿಯಲ್ಲಿ  ತಮ್ಮ ತಮ್ಮ ಬೆಂಬಲಿಗರ ಜೊತೆ ಸುತ್ತಾಡಿ  ಬಿಂಬಿಸಿಕೊಳ್ಳುತ್ತಿದ್ದಾರೆ. ಒಂದು ಕಡೆ ಬಿಜೆಪಿ ಪಕ್ಷದ ರಾಜ್ಯ ನಾಯಕರಿಗೆ ಸೂಕ್ತ ಅಭ್ಯರ್ಥಿ ಇಲ್ಲದೆ ಎಣಗಾಡುತ್ತಿದ್ದಾರೆ. ಜೊತೆಗೆ ಸಿಎಂ ಸಹ ಮೊನ್ನೆ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಒಂದಿಷ್ಟು ಜನರಿಂದ ಬ್ಯಾನರ್ ಶಕ್ತಿ ಪ್ರದರ್ಶನ ಮಾಡಲು ಹೋಗಿ  ಸಿಎಂ ಮುಂದೆ ಮುಜುಗರಕ್ಕಿಡಾಗಿದ್ದು ಜನ ಗಮನಿಸಿದ್ದು ಯಾರೇ ಅಭ್ಯರ್ಥಿ ಆದರು ಸದ್ಯದ ಪರಿಸ್ಥಿತಿ ಅವಲೋಕಿಸಿದರೆ  ಎಲ್ಲಾರೂ ಒಟ್ಟಾಗಿ ಕೆಲಸ ಮಾಡುವುದು ಕಷ್ಟ ಸಾಧ್ಯವಾಗಿದೆ.
ಚಳ್ಳಕೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಸಂಘಟನೆಯ ಅಭ್ಯರ್ಥಿ ಕೊರತೆ ಎದ್ದು ಕಾಣುತ್ತಿದೆ. ಈಗ ಸಹ ಅರ್ಧ ಡಜನ್ ಅಭ್ಯರ್ಥಿಗಳು ಕಣಕ್ಕಿಳಿಯಲು ಯತ್ನ ನಡೆಸುತ್ತಿದ್ದಾರೆ. ಆದರೆ ಯಾರಿಗೂ ಸಹ ಗೆಲ್ಲುವಂತಹ ವರ್ಚಸ್ಸು ಇಲ್ಲ ಎಂಬಂತೆ ರಾಜ್ಯ ನಾಯಕರ ನಡೆ ಇದೆ ಎಂದರೆ ತಪ್ಪಾಗಲಾರದು.
ಸ್ಥಳೀಯ ಅಭ್ಯರ್ಥಿ ಕೋಟಾದಲ್ಲಿ ಬಾಳೆಕಾಯಿ ರಾಮದಾಸ್, ಜಯರಾಂ, ಜಯಪಾಲಯ್ಯ ಇದ್ದಾರೆ. ಇವರನ್ನು ಬಿಟ್ಟು ತುಮಕೂರು ಜೆಡಿಎಸ್  ಎಂಎಲ್ಸಿ ಅಭ್ಯರ್ಥಿ ಆಗಿ ಸ್ವರ್ಧೆ ಮಾಡಿ ಸೋಲುಂಡಿರುವ ಅನಿಲ್ ಕುಮಾರ್ ಎಂಬುವರು ಬಿಜೆಪಿ ಸೇರ್ಪಡೆ ಆಗಿ ಚಳ್ಳಕೆರೆ ಬಿಜೆಪಿ ಯತ್ನ ನಡೆಸಿ ಕ್ಷೇತ್ರದಲ್ಲಿ ನೆಲಯೂರಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಚಿತ್ರದುರ್ಗ ಮಾಜಿ ಸಂಸದ ಚಿತ್ರನಟ ಶಶಿಕುಮಾರ್ ಸಹ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಆಗಿ ಚಳ್ಳಕೆರೆ ಟಿಕೆಟ್ ಬಯಸಿದ್ದು ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಗಾಗಿ ಲಾಭಿ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿ ಒಬ್ಬರು ಸಹ ಜನವರಿ ತಿಂಗಳಲ್ಲಿ ವಿಆರ್ ಎಸ್ ಪಡೆದು ಚಳ್ಳಕೆರೆ ಬಿಜೆಪಿ ಪಕ್ಷದಿಂದ ಟಿಕೆಟ್ ನನಗೆ ಎಂಬ ನಿರೀಕ್ಷೆಯಲ್ಲಿ ಬೆಂಗಳೂರಿನ ಅನೇಕ ಸಚಿವರ ಜೊತೆ ನಿಕಟ ಸಂಪರ್ಕದಲ್ಲಿ ಇದ್ದಾರೆ. ಇದರಲ್ಲಿ ಯಾರಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂಬುದು‌ ಮಿಲಿಯನ್ ಡಲಾರ್ ಪ್ರಶ್ನೆಯಾಗಿದೆ.
ಸ್ಥಳೀಯ ಅಭ್ಯರ್ಥಿ ಮತ್ತು ವಲಸೆ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು ಎಲ್ಲಾರೂ ಸಹ ಒಂದಲ್ಲ ಒಂದು ರೀತಿ ಕೆಲಸ ಆರಂಭಿಸಿದ್ದಾರೆ. ಆದರೆ ಜನ ಮಾತ್ರ ಯಾರ ಜೊತೆಯಲ್ಲೂ ಸಹ ಹೆಚ್ಚು ಗುರುತಿಸಿಕೊಳ್ಳದೇ ಎಲ್ಲಾವನ್ನು  ಸುಮ್ಮನೆ ಕಾದು ನೋಡುತ್ತಿದ್ದು ಯಾರು ಸಹ ಇಂತಹ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆ ಎಂದು ಯಾರಿಗೂ ಹೇಳಲಾಗುತ್ತಿಲ್ಲ. ಸಿಎಂ ಮಾತ್ರ ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿ ಜವಬ್ದಾರಿ ನನ್ನದು ಅದರೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಗೆಲುವು ನಮ್ಮದು ಒಳಜಗಳ ಇದ್ದರೆ ನಮಗೆ ಗೆಲ್ಲಿ ಸಾಧ್ಯವಿಲ್ಲ ಎಂದು ನೇರವಾಗಿ ಸಂದೇಶ ಸಾರಿದ್ದರು ಗುಂಪು ಗುಂಪುಗಳು ಮಾಡಿಕೊಂಡು ಚಳ್ಳಕೆರೆ ಬಿಜೆಪಿ ಒಡೆದ ಮನೆಯಾಗಿದೆ.
 ಈ ಕ್ಷೇತ್ರದ ಮತ್ತೊಂದು ಟ್ವಿಸ್ಟ್ ಏನೆಂದರೆ ಈ‌ ಎಲ್ಲಾ ಅಭ್ಯರ್ಥಿಗಳ ನಡುವೆ ರಾಜ್ಯದ  ಸಂಸದರೊಬ್ಬರು ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಮಗ ಕೆ.ಟಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ಕರೆತಂದು ಬಿಜೆಪಿ ಅಭ್ಯರ್ಥಿ ಮಾಡಬೇಕೆಂದು ಮಾತುಕತೆ ನಡೆಸುತ್ತಿದ್ದಾರೆ.ಆದರೆ ಇನ್ನು ಫೈನಲ್ ಆಗಿಲ್ಲ ಎನ್ನುತ್ತಿದೆ ಬಲ್ಲ ಮೂಲಗಳು. ಆದರೆ ಚಳ್ಳಕೆರೆ ಭಾರಿ ಸರ್ಕಸ್ ಒಡೆಯಬೇಕು. ಇಷ್ಟೆಲ್ಲಾವನ್ನು ಮುಂದಿನ ದಿನದಲ್ಲಿ ಬಿಜೆಪಿ ಪಕ್ಷ ಹೇಗೆ ಎದುರಿಸುತ್ತದೆ. ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಊಹಿಸಲು ಸಾಧ್ಯವಿಲ್ಲ
ಇನ್ನು ಇದರಲ್ಲಿ ಕೇಲ ಅಭ್ಯರ್ಥಿಗಳು ಹೆಸರಿಗೆ  ಮರಳು  ಮಾಫಿಯಾ ಅಂಟಿಕೊಂಡಿದ್ದು  ಪಕ್ಷಕ್ಕೆ ಡ್ಯಾಮೇಜ್ ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಹೀಗೆ ಒಂದಲ್ಲ ಎರಡಲ್ಲ ಸಮಸ್ಯೆಗಳ ಸರಮಾಲೆಯ ಮಧ್ಯೆ ವಿಜಯಮಾಲೆ ಹಾಕಿಕೊಳ್ಳುವುದೇ ಬಿಜೆಪಿ? ಸ್ವಲ್ಪ ಸ್ವರ್ಧೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಯಾವ ರೀತಿ ಸೆಡ್ಡು ಹೊಡೆಯುವುದೇ ಎಂದು ಸ್ವಲ್ಪ ಚಿತ್ರಣ ತಿಳಿಸಲು ಮಾರ್ಚ್ ತಿಂಗಳ ಅಂತ್ಯದವರೆಗೂ ನೋಡಿ ಅಭ್ಯರ್ಥಿ ಯಾರು ಎಂಬ ಆಧಾರದ ಮೇಲೆ ಬಿಜೆಪಿ ಭವಿಷ್ಯ ನಿಂತಿದ್ದು ಎಲ್ಲಾರೂ ಕಾದು ನೋಡುವ ತಂತ್ರಕ್ಕೆ ಜಾರಿದ್ದಾರೆ.
[t4b-ticker]

You May Also Like

More From Author

+ There are no comments

Add yours