ದೀನ ದಯಾಳ್ ಉಪಾಧ್ಯ ಅವರು ವಿಶ್ವಕೋಶ ಇದ್ದಂತೆ: ಎಂಎಲ್ಸಿ ಕೆ.ಎಸ್.ನವೀನ್

 

ಚಿತ್ರದುರ್ಗ ಸೆ. ೨೫; ಬಿಜೆಪಿ ರಾಜಕೀಯ ಪಕ್ಷವಾಗಿ ಬೆಳೆಯಲು ಕಾರಣ ದೀನ ದಯಾಳ್ ಉಪಾಧ್ಯ ಕಾರಣರಾಗಿದ್ದಾರೆ.ಅವರೊಂದು ವಿಶ್ವಕೋಶ ಇದ್ದಂತೆ ಎಂದು ವಿಧಾನ ಪರಿಷತ್ ಕೆ.ಎಸ್.ನವೀನ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿಂದು ಪಂಡಿತ್ ದೀನ್ ದಯಾಳ್ ಉಪಾಧ್ಯರವರ ೧೦೮ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇಶದ ಪ್ರತಿಯೊಂದು ಬೂತ್‌ನಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯಲಿದೆ. ಅವರ ಸಾರ್ಥಕ ಜೀವನದಲ್ಲಿ ರಾಷ್ಟç ಭಕ್ತಿಯನ್ನು ಮೂಡಿಸಿದೆ. ಬಡತನವನ್ನು ನೀಗಿಸುವ ಬೇಖಾದ ಹಲವಾರು ಮಾರ್ಗಗಳ ಬಗ್ಗೆ ಅಲೋಚನೆ ಮಾಡಿದ್ದಾರೆ. ಆಗಿನ ಕಾಲದಲ್ಲಿಯೇ ದೇಶ ಮುಂದಿನ ೬೦-೭೦ ವರ್ಷಗಳ ಮುಂದೆ ತೆಗೆದುಕೊಂಡು ಹೋಗುವ ತತ್ವಗಳನ್ನು ಹಾಕಿಕೊಟ್ಟಿದ್ದಾರೆ ಎಂದರು.
ಪಕ್ಷದ ಕಾರ್ಯಕರ್ತರು ಅವರ ಆಲೋಚನೆಯನ್ನು ಮನವರಿಕೆ ಮಾಡಿಕೊಡಬೇಕಿದೆ. ಸಾಮಾನ್ಯ ಜನರನ್ನು ಮೇಲೆತ್ತುವ ಶಕ್ತಿ ಸಮಾಜದಲ್ಲಿದೆ. ಅದನ್ನು ಬಳಿಸಿಕೊಳ್ಳಬೇಕಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಿದೆ.ದೇಶ ಭಕ್ತಿ ರಾಷ್ಟçಕಟ್ಟುವ ಶಕ್ತಿಯನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ದೀನದಯಾಳರ ಜೀವನ ಭಾರತ ದರ್ಶನದಂತೆ ಕಾಣುತ್ತದೆ. ಅವರೊಬ್ಬ ಅಪ್ರತಿಮ ಸಂಘಟಕ, ಪ್ರಬುದ್ಧ ಲೇಖಕ, ಭಾರತಕ್ಕೆ ಮುನ್ನೋಟ ನೀಡಿದ ದಿಗ್ದರ್ಶಕ. ಒಬ್ಬ ವ್ಯಕ್ತಿಯನ್ನು ಕೇವಲ ಒಂದು ದೃಷ್ಟಿಕೋನದಿಂದ ನೋಡಬಾರದು. ಒಬ್ಬ ವ್ಯಕ್ತಿ ಶರೀರ ಮಾತ್ರವಲ್ಲ. ಆತನನ್ನು ಮನಸ್ಸು, ಬುದ್ಧಿ, ಆತ್ಮವನ್ನು ಒಳಗೊಂಡAತೆ ಸಮಗ್ರವಾಗಿ ನೋಡಬೇಕು ಎಂಬ ಚಿಂತನೆಯನ್ನು ದೀನದಯಾಳರು ನೀಡಿದರು.
ಒಬ್ಬ ವ್ಯಕ್ತಿಯ ಜೀವನ ಸಂಪೂರ್ಣ ಆಗಬೇಕೆಂದರೆ ಸುಖ, ಸಮೃದ್ದಿ, ಸಂಸ್ಕಾರ ಹಾಗೂ ಶಿಕ್ಷಣ ಇರಬೇಕು ಎಂಬ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು ಎಂದು ದೀನದಯಾಳರು ಪ್ರತಿಪಾದಿಸಿದರು. ಆಗ ಮಾತ್ರ ಸಮಗ್ರ ಸ್ವರೂಪದ ಸಮಾಜ ಕಟ್ಟಬಹುದು ಎಂದು ಅವರು ನಂಬಿದ್ದರು. ಏಕಾತ್ಮ ಮಾನವತಾವಾದ ಎನ್ನುವುದು ಭಾರತದ ಅಸ್ಮಿತೆ, ವಿಚಾರಧಾರೆಗೆ ಹೊಂದಿಕೊAಡಿದೆ. ಹಾಗಾಗಿ ಬಂಡವಾಳವಾದ ಅಥವಾ ಸಮಾಜವಾದ ಈ ದೇಶಕ್ಕೆ ಪ್ರಸ್ತುತ ಅಲ್ಲ. ಏಕಾತ್ಮ ಮಾನವತಾವಾದದಿಂದ ಮಾತ್ರವೇ ಈ ದೇಶವನ್ನು ಅಖಂಡವಾಗಿ ಕಟ್ಟಲು ಸಾಧ್ಯ ಎಂಬ ಸಂದೇಶವನ್ನು ದೀನದಯಾಳ್‌ ಜೀ ನೀಡಿದ್ದಾರೆ.
ಡಾ.ಸಿದ್ಧಾರ್ಥ ಗುಡಾರ್ಪಿ ಮಾತನಾಡಿ, ದೀನದಯಾಳರು ಈರಾಷ್ಟ್ರದ  ಅಖಂಡತೆಯ ಕುರಿತು ಬಲವಾದ ಪ್ರತಿಪಾದನೆ ಮಾಡುತ್ತಿದ್ದರು. ಅವರ ವಿಚಾರ ಸ್ಪಷ್ಟತೆಯು ವಜ್ರದಷ್ಟು ಕಠಿಣವಾಗಿದ್ದರೂ ಅದನ್ನು ನೀರಿನಂತೆ, ಯಾರಿಗೂ ನೋವಾಗದಂತೆ ಮೃದುವಾಗಿ ಹೇಳುತ್ತಿದ್ದರು. ಅಂತ್ಯೋದಯ ಪರಿಕಲ್ಪನೆ ನೀಡಿದವರು ದೀನದಯಾಳ್ ಉಪಾಧ್ಯಾಯರು. ರೋಗಗ್ರಸ್ಥ ವ್ಯಕ್ತಿಗಳನ್ನು ಇಟ್ಟುಕೊಂಡು ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಿಲ್ಲ. ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ರೂಪಿಸುವಾಗ, ಕಟ್ಟಕಡೆಯ ವ್ಯಕ್ತಿಯನ್ನು ಕಣ್ಣಮುಂದೆ ಇರಿಸಿಕೊಂಡು ಯೋಜನೆಗಳು ಅನುಷ್ಠಾನವಾಗಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಪಠಿಸುವ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎನ್ನುವ ಮಂತ್ರಕ್ಕೆ ದೀನದಯಾಳರ ಜೀವನವೇ ಪ್ರೇರಣೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸದೃಢನನ್ನಾಗಿ ಮಾಡಲು ವ್ಯಕ್ತಿಯಾಗಿ, ಕುಟುಂಬವಾಗಿ, ಸಮಾಜವಾಗಿ ಹಾಗೂ ರಾಷ್ಟçವಾಗಿ ಏನೆಲ್ಲ ಕೆಲಸಗಳನ್ನು ಮಾಡಬೇಕಾಗಿದೆ ಎಂಬ ಚಿಂತನೆಯನ್ನು ದೀನದಯಾಳರು ಈ ದೇಶಕ್ಕೆ ಕೊಟ್ಟರು. ದೀನದಯಾಳರು ಉದಾತ್ತ ವಿಚಾರಧಾರೆಯನ್ನು ಇಟ್ಟುಕೊಂಡು ದೇಶವನ್ನು ಕಟ್ಟಲು ಅವಿರತ ಶ್ರಮ ಹಾಕಿದರು. ದೇಶವನ್ನು ಮುನ್ನಡೆಸುವ ದೊಡ್ಡ ಯುವ ಪಡೆಯನ್ನು ಕಟ್ಟಲು, ಒಗ್ಗೂಡಿಸಲು ಅಪ್ರತಿಮ ಸಂಘಟನಾ ಕೆಲಸ ಮಾಡಿದರು. ಆದರೆ ಈ ಎಲ್ಲ ಚಟುವಟಿಕೆಗಳ ಸಂದರ್ಭದಲ್ಲಿ ಅವರ ವೈಯಕ್ತಿಕ ಕಷ್ಟಗಳನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ದೀನದಯಾಳರ ಆದರ್ಶ, ದೀನದಯಾಳರ ಪ್ರೇರಣೆ ಇಂದಿಗೂ ನಮ್ಮೆಲ್ಲರನ್ನೂ ಸ್ಫೂರ್ತಿಗೊಳಿಸಿದೆ. ಈ ದೇಶಕ್ಕೆ ಮುನ್ನೋಟದ ಅಡಿಪಾಯವನ್ನು ಹಾಕಿಕೊಟ್ಟಿದ್ದು ದೀನದಯಾಳರು. ಜನಸಂಘ ಈಗ ಭಾರತೀಯ ಜನತಾ ಪಕ್ಷವಾಗಿ ಬದಲಾವಣೆ ಆಗಿದೆ. ಆದರೆ ಜನಸಂಘ ಹುಟ್ಟಿದಾಗ ಇದ್ದ ವಿಚಾರಧಾರೆಗಳನ್ನೇ ಇಟ್ಟುಕೊಂಡು ಬಿಜೆಪಿ ಸಾಗುತ್ತಿರುವುದಕ್ಕೆ ದೀನದಯಾಳರು ಹಾಕಿಕೊಟ್ಟ ಮಾರ್ಗದರ್ಶಕ ಸೂತ್ರಗಳು ಕಾರಣ. ಏಕಾತ್ಮ ಮಾನವತಾವಾದ ಹಾಗೂ ಅಂತ್ಯೋದಯ ಪರಿಕಲ್ಪನೆಗಳು ಬಿಜೆಪಿಯ ವಿಚಾರಧಾರೆಗಳೇ ಆಗಿವೆ. ಅವಕಾಶ ಸಿಕ್ಕಾಗೆಲ್ಲ ಅವುಗಳ ಅನುಷ್ಠಾನ ಮಾಡುವ ಬದ್ಧತೆಯನ್ನು ಬಿಜೆಪಿ ನಮ್ಮೆಲ್ಲರಿಗೂ ತೋರಿಸಿಕೊಟ್ಟಿದೆ.
ಒಬಿಸಿ ಸಮುದಾಯಗಳನ್ನು ಗುರುತಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವೇ ಹೊಂದಿದ್ದನ್ನು ಬದಲಾವಣೆ ಮಾಡಿದ್ದು ಮೋದಿ ಸರ್ಕಾರ. ಇದೇ ವರ್ಷ ಫೆಬ್ರವರಿಯಲ್ಲಿ ಸಂವಿಧಾನದ ೧೨೭ನೇ ತಿದ್ದುಪಡಿಯ ಮೂಲಕ, ಸಮುದಾಯಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಯಿತು. ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ ಎಂದು ಬೊಬ್ಬೆ ಇಡುವ ಅನೇಕರು ಆ ಸಮಯದಲ್ಲಿ ಮಾತೇ ಆಡಲಿಲ್ಲ ಎನ್ನುವುದು ಬೇರೆಯ ವಿಷಯ. ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು ಹಿಂದಿನಿAದಲೂ ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ಏಳಿಗೆ ಕುರಿತು ಮಾತನಾಡಿವೆ. ಆದರೆ, ಅವರ ನಡೆಗಳು ದಲಿತರನ್ನು ಸ್ವಾವಲಂಬಿಗಳಾಗಿಸುವ ಬದಲಿಗೆ, ತಮ್ಮ ಮೇಲೆ ಹೆಚ್ಚು ಅವಲಂಬಿತರನ್ನಾಗಿಸಿ, ವೋಟ್ ಬ್ಯಾಂಕ್ ಮಾಡಿಕೊಳ್ಳುವ ಹುನ್ನಾರವಿತ್ತು. ಹಸಿದ ವ್ಯಕ್ತಿಗೆ ಮೀನು ಹಿಡಿಯುವುದನ್ನು ಕಲಿಸಿದರೆ ಆತ ಮುಂದೆಯೂ ಮೀನನ್ನು ಹಿಡಿದು ಜೀವನ ನಡೆಸುತ್ತಾನೆ. ಆದರೆ, ನೇರವಾಗಿ ಮೀನನ್ನು ನೀಡಿ, ನೀನೇನೂ ಕಷ್ಟಪಡಬೇಡ ನಾನೇ ನಿನಗೆ ಮುಂದೆಯೂ ಮೀನು ನೀಡುತ್ತೇನೆ ಎಂದರೆ ಆತ ಸ್ವಾವಲಂಬಿ ಆಗುವುದಿಲ್ಲ. ಇದೇ ರೀತಿ ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು ಹಿಂದುಳಿದ, ದಲಿತ ವರ್ಗಗಳನ್ನು ತಮ್ಮ ಮತಬ್ಯಾಂಕ್ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದವು. ದಲಿತರ ಮೂಗಿಗೆ ತುಪ್ಪ ಸವರಿ, ಒಳಗಿಂದೊಳಗೆ ಸ್ವಹಿತವನ್ನಷ್ಟೆ ಸಾಧಿಸಿಕೊಂಡವು.
ಮಾಜಿ ಅಧ್ಯಕ್ಷ ನರೇಂದ್ರನಾಥ್ ಮಾತನಾಡಿ, ದೀನದಯಾಳರ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಬಾಲ್ಯದಲ್ಲಿಯೇ ತಂದೆಯನ್ನು, ನಂತರ ತಾಯಿಯನ್ನು, ಆನಂತರ ಮಾವನನ್ನು, ಕೊನೆಗೆ ತಮ್ಮನನ್ನೂ ಕಳೆದುಕೊಳ್ಳುತ್ತಾರೆ. ಹಾಗೂ ಹೀಗೂ ಕಷ್ಟಗಳ ನಡುವೆಯೇ ಡಿಗ್ರಿ ಮುಗಿಸುತ್ತಾರೆ, ಆದರೆ ಸ್ನಾತಕೋತ್ತರ ಸಾಧ್ಯವಾಗುವುದಿಲ್ಲ. ತಮ್ಮ ಜೀವನದಲ್ಲಿ ಕಂಡ ಎಲ್ಲ ಕಷ್ಟ, ನೋವುಗಳು, ಅವರು ಮುಂದೆ ಕೈಗೊಳ್ಳುವ ಸಾಮಾಜಿಕ ಸೇವೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ. ಸಮಾಜದ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಇವು ಸಹಾಯಕವಾಗುತ್ತವೆ.ಈ ಮೂಲಕ ದೀನದಯಾಳರು ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕಂಡ ಮಹಾನ್ ದಾರ್ಶನಿಕರಾದರು.
ದೀನದಯಾಳರು ಸಂಘದ ಸ್ವಯಂಸೇವಕರು. ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವ ಮೂಲಕ ದೀನದಯಾಳರು ತಮ್ಮ ಸಾಮಾಜಿಕ ಸೇವೆಯನ್ನು ಸಲ್ಲಿಸಬೇಕು ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾದ ಗುರೂಜಿ ಅವರು ಅಪೇಕ್ಷಿಸಿದರು. ದೀನದಯಾಳರನ್ನು, ಜನಸಂಘದ ಕಾರ್ಯದರ್ಶಿಯಾಗಿ ಕಳಿಸಿಕೊಟ್ಟರು. ದೀನದಯಾಳರು ಭಾಷಣ ಮಾಡುತ್ತಿದ್ದಾರೆ, ವಿಚಾರವನ್ನು ಮಂಡನೆ ಮಾಡುತ್ತಿದ್ದಾರೆ ಎಂದರೆ ಹಿರಿಯರೂ ಬಂದು ಕೇಳುತ್ತಿದ್ದರು. ಶ್ರೀಮಂತರು, ಬಡವರು, ಹೋರಾಟಗಾರರೆಂಬ ಭೇದವಿಲ್ಲದೆ ಅವರ ಮಾತನ್ನು ಆಲಿಸುತ್ತಿದ್ದರು. ಎದುರು ಸಿಕ್ಕಾಗ ದೀನದಯಾಳರಿಗೆ ಶ್ರೀಮಂತರು ಹಾಗೂ ಬಡವರು ಎಂಬ ಭೇದ ಇರುತ್ತಿರಲಿಲ್ಲ.ತಮ್ಮ ವೈಯಕ್ತಿಕ ಜೀವನವನ್ನು ಕಟ್ಟಿಕೊಂಡು ಅವರು ಸುಖವಾಗಿ ಇರಬಹುದಿತ್ತು. ಆದರೆ ಅಂದಿನ ಸಾಮಾಜಿಕ ಸ್ಥಿತಿ, ಅಂದಿನ ನೆಹರೂ ಸರ್ಕಾರ ಕೈಗೊಳ್ಳುತ್ತಿದ್ದ ತೀರ್ಮಾನಗಳು ಅವರನ್ನು ವೈಯಕ್ತಿಕ ಜೀವನದ ಕಡೆಗೆ ನೋಡಲು ಬಿಡಲಿಲ್ಲ. ಈ ದೇಶದ ಸ್ವಾತಂತ್ರ÷್ಯ ಹೋರಾಟಗಾರರ ತ್ಯಾಗ, ಪರಿಶ್ರಮಗಳು ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಅವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದವು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ನರೆಂದ್ರ, ನವೀನ್ ಚಾಲುಕ್ಯ, ಶಿವಣ್ಣಚಾರ್, ಚಂದ್ರಿಕಾ ಲೋಕನಾಥ್, ನಗರಸಭಾ ಸದಸ್ಯರಾದ ವೆಂಕಟೇಶ್, ಸ್ವಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳ ವೇದ, ನಗರಾಭೀವೃಧ್ದಿ ಅಧ್ಯಕ್ಷರಾದ ಸುರೇಶ್, ಗಿರೀಶ್,ನಾಗರಾಜ್ ಬೇದ್ರೇ ಸೇರಿದಂತೆ ಇತರರು ಭಾಗವಹಿಸಿದ್ದರು.
[t4b-ticker]

You May Also Like

More From Author

+ There are no comments

Add yours