ಮತದಾರರಿಗೆ ನೀಡಿದ ಭರವಸೆಯನ್ನು ಬಿಜೆಪಿ ಹಿಡೇರಿಸಿದೆ:ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ

 

ಚಿತ್ರದುರ್ಗ ಜ. ೦೩
ಚುನಾವಣೆಯಲ್ಲಿ ಮತದಾರರಿಗೆ ಪ್ರಣಾಳಿಕೆಯಂತೆ ನೀಡಿದ ವಿವಿಧ ರೀತಿಯ ಭರವಸೆಗಳನ್ನು ಈಡೇರಿಸಿದ ಪಕ್ಷ ಬಿಜೆಪಿಯಾಗಿದೆ ಎಂದು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿವತಿಯಿಂದ ನಗರದ ಹೂರವಲಯದ ಜೋಗಿಮಟ್ಟಿ ಅರಣ್ಯ ಗಿರಿಧಾಮದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಮಂಡಲ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣೆಯಲ್ಲಿ ಮತದಾರರಿಗೆ ಬಿಜೆಪಿ ವಿವಿಧ ರೀತಿಯ ಭರವಸೆಗಳನ್ನು ನೀಡಿತ್ತು ಅದನ್ನು ಈ ಅವಧಿಯಲ್ಲಿ ಶೇ.೧೦೦ರಷ್ಟು ಪೂರ್ಣ ಮಾಡಿದೆ. ಪ್ರಧಾನಿ ಮೋದಿಯವರ ವೈಖರಿಯನ್ನು ಇಡಿ ದೇಶದ ಜನತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿಯವರು ವಿಶ್ವನಾಯಕರಾಗಿ ಜಿ.೨೦ ಅಧ್ಯಕ್ಷತೆ ನಾಯಕರಾಗಿ ಹೂರ ಹೊಮ್ಮಿದ್ದಾರೆ. ವಿಶ್ವದ ಅಗ್ರ ಗಣ್ಯ ನಾಯಕರಲ್ಲಿ ಮೋದಿಯವರು ಮೊದಲ ಸ್ಥಾನವನ್ನು ಪಡೆದಿದ್ದಾರೆ ಎಂಧರು.
ಕರೋನ ಸಮಯದಲ್ಲಿ ದೇಶದ ೧೩೦ ಕೋಟಿ ಜನರಿಗೆ ಉಚಿತವಾಗಿ ಲಸಿಕೆಯನ್ನು ನೀಡುವುದಲ್ಲದೆ ೮೧ ಕೋಟಿ ಜನರಿಗೆ ಉಚಿತವಾಗಿ ಪಡಿತರ ಆಹಾರವನ್ನು ನೀಡುವುದರ ಮೂಲಕ ಆಹಾರ ಸಮಸ್ಯೆಯನ್ನು ನಿವಾರಿಸಿದ್ದಾರೆ ಕೇಂದ್ರ ಸರ್ಕಾರ ತನ್ನ ಯೋಜನೆಯನ್ನು ನೇರವಾಗಿ ಡಿಜಿಟಲ್ ಕರಣ ಮಾಡುವುದರ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ನೇರವಾಗಿ ಫಲಾನುಭವಿಗಳ ಅಕೌಂಟಿಗೆ ಹಣ ಸಂದಾಯವಾಗುವAತೆ ಮಾಡಲಾಗಿದೆ. ಈ ರೀತಿಯ ಸಂಗತಿಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಬೂತ್ ಮಟ್ಟದಲ್ಲಿ ಮತದಾರರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಶಾಸಕ ತಿಪ್ಪಾರೆಡ್ಡಿ ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರುಳಿರವರು ಮಾತನಾಡಿ, ಬಿಜೆಪಿ ಪಕ್ಷ ಬೇರೆ ಪಕ್ಷಗಳಿಂತ ವಿಭಿನ್ನವಾಗಿದೆ. ದೇಶ ಮೊದಲು ಎನ್ನುವ ಸಿದಾಂ್ಧತ ನಮ್ಮದಾಗಿದೆ. ದೇಶವನ್ನು ಬಲಿಷ್ಠ ಮಾಡಲು ಮೋದಿಯವರು ಹೊರಟಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಇಂದಿನ ಎಲ್ಲಾ ಬಿಜೆಪಿ ನಾಯಕರ ಪರಿಶ್ರಮೇ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭೀವೃದ್ದಿ ಕಾರ್ಯದ ಜೊತೆಯಲ್ಲಿ ನಮ್ಮ ಶಾಸಕರ ಅಭೀವೃದ್ದಿ ಕಾರ್ಯಗಳು ಎಲ್ಲಾ ವಾರ್ಡ ಬೂತ್ ಗ್ರಾಮ ಪಂಚಾಯಿತಿಗಳ ಮನೆ ಮನೆಗೆ ತಿಳಿಸುವ ಕಾರ್ಯ ಆಗಬೇಕಿದೆ, ಬಿಜೆಪಿಯ ಬೂತ್ ವಿಜಯ ಕಾರ್ಯಕ್ರಮ ಜ.೨ ರಿಂದ ೧೨ರವರೆಗೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಯಶಸ್ವಿ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಮುಖಂಡರಾದ ಡಾ.ಸಿದ್ದಾರ್ಥ ಮಾತನಾಡಿ ಎಲ್ಲಾ ಬೂತ್ ಮಟ್ಟದಲ್ಲಿ ಯುವಜನತೆಯನ್ನು ಸೇರಿಸಿಕೊಂಡು ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಮಾಡಬೇಕಿದೆ. ಮೋದಿಯವರಂತೆ ನಾವು ಸಹಾ ದಿನದ ೧೮ ಗಂಟೆ ಕೆಲಸವನ್ನು ಮಾಡುವುದರ ಮೂಲಕ ಮೋದಿಯವರ ಕೈಯನ್ನು ಬಲಪಡಿಸಬೇಕಿದೆ ಮೋದಿಯವರು ವಿಶ್ವದಲ್ಲಿ ಭಾರತ ದೇಶವನ್ನು ವಿಶ್ವ ಗುರುವನ್ನಾಗಿ ಮಾಡಲು ಹೂರಟಿದ್ದಾರೆ ಅದಕ್ಕೆ ಎಲ್ಲರು ಸಾಥ್ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ತಿಮ್ಮಪ್ಪ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೋನ್ನಾಳಿ, ಶ್ರೀಮತಿ ಚಂದ್ರಿಕಾ ಲೋಕನಾಥ್, ಮಲ್ಲಿಕಾರ್ಜನ್ ಶಿವಣ್ಣಾಚಾರ್ ಜಿ.ಎಂ.ಅನಿತ್ ನಾಗರಾಜ್ ಬೇದ್ರೇ ಭಾಗವಹಿಸಿದ್ದರು ಸಮಾರಂಭದ ಅಧ್ಯಕ್ಷತೆಯನ್ನು ನಗರಾಧ್ಯಕ್ಷರಾದ ಚಾಲುಕ್ಯ ನವೀನ್ ಗ್ರಾಮಾಂತರ ಅಧ್ಯಕ್ಷರಾದ ಕಲ್ಲೇಶಯ್ಯ ವಹಿಸಿದ್ದರು. ಪ್ರಸ್ತಾವಿಕವಾಗಿ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಟಿ.ಸುರೇಶ್ ನಿರ್ವಹಿಸಿದದರು. ಕವನ ಸ್ವಾಗತಿಸಿದರೆ ವಿರೇಶ್ ಕಾರ್ಯಕ್ರಮ ನಿರೂಪಿಸಿದರು. ನಗರ ಮತ್ತು ಗ್ರಾಮಾಂತರ ಮಂಡಲದ ಪದಾಧಿಕಾರಿಗಳು, ನಗರಸಭಾ ಸದಸ್ಯರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours