ಬಿಜೆಪಿ ಸರ್ಕಾರದ ನಾಲ್ಕು ಸಚಿವರು ಔಟ್ ಸಾಧ್ಯತೆ ?

 

 

 

 

ವಿಶೇಷ ವರದಿ:  ರಾಜ್ಯ ಸರ್ಕಾರದಲ್ಲಿ  ಮಹತ್ವದ ಬದಲಾವಣೆಗೆ ವೇದಿಕೆ ಸಜ್ಜಾಗಿದೆ.ಆದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಅಂತ ಪಕ್ಕ ಆಗಿಲ್ಲ.  
ರಾಜ್ಯ ರಾಜಕಾರದಲ್ಲಿ ಸಚಿವಗಿರಿಗೆ ಬಿಜೆಪಿ ಕಲಿಗಳು ಸಾಕಷ್ಟು ಸರ್ಕಸ್ ಒಡೆಯುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಸಂಪುಟದಿಂದ ಹಾಲಿ ನಾಲ್ಕು ಸಚಿವರನ್ನು ಕೈ ಬಿಡುವುದಕ್ಕೆ ಬಹುತೇಕ ಸಜ್ಜಾಗಿದ್ದಾರೆ.  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುವ ಸಚಿವ ಸಿ.ಟಿ.ರವಿ, ಮಹಿಳಾ ಕೋಟದಲ್ಲಿರುವ ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ್ ಪೂಜಾರಿ, ಸಿ.ಸಿ. ಪಾಟೀಲ್ ಅವರಿಗೆ ಸಂಪುಟದಿಂದ ಕೈ ಬಿಡುವ ಮೂಲಕ ಖಾಲಿ ಇರುವ ಸಚಿವ  ಸ್ಥಾನಗಳ ಜೊತೆಗೆ  ಮೂಲ ಮತ್ತು ವಲಸಿಗ ಬಿಜೆಪಿ ಅವರಿಗೆ ಸಚಿವ ಸ್ಥಾನ ನೀಡುವ ಉದ್ದೇಶ ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ. ಈಗಾಗಲೇ 1 ಬಾರಿ ದೆಹಲಿ ಯಾತ್ರೆ ಮುಗಿಸಿರುವ ಯಡಿಯೂರಪ್ಪ ಮತ್ತೊಮ್ಮೆ ದೆಹಲಿ ಯಾತ್ರೆ ಮುಗಿಸಿ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಮಾಡುತ್ತಾರೆ ಎಂಬ ಮಾತು ರಾಜಕೀಯ ವಲಯಲ್ಲಿ ಕೇಳಿ ಬರುತ್ತಿದೆ. ಆದರೆ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿದ ಎಂ.ಟಿ.ಬಿ ಮತ್ತು ಆರ್ ಶಂಕರ್ ಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಆದರೆ ಉಳಿದ ಸ್ಥಾನಗಳಿಗೆ ಯಡಿಯೂರಪ್ಪ ಯಾವ ತಂತ್ರ ಅನುಸರಿಸಿತ್ತಾರೆ, ಸಚಿವ ಆಕಾಂಕ್ಷಿಗಳಿಗೆ ಯಾವ ರೀತಿ ಸಮಾಧಾನಪಡಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

 

 

[t4b-ticker]

You May Also Like

More From Author

+ There are no comments

Add yours