ಬೆಸ್ಕಾಂ ನೇಮಕಾತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ದೊಡ್ಡ ಆಕ್ರಮ, 8 ಮಂದಿ ಅರೆಸ್ಟ್

 

ಚಿತ್ರದುರ್ಗದಲ್ಲಿ ಬೆಸ್ಕಾಂ ನೇಮಕಾತಿಯಲ್ಲೂ ಅವ್ಯವಹಾರ, ಅಕ್ರಮ ನಡೆದಿದ್ದು PSI ಅಕ್ರಮ ನೇಮಕಾತಿ ಮೀರಿಸುವಂತಿದೆ.


ಚಿತ್ರದುರ್ಗದ ಬೆಸ್ಕಾಂ ಇಲಾಖೆ ಹಗರಣ ಬಹುದೊಡ್ಡದಿದ್ದು ಬೆಸ್ಕಾಂ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ 6 ಮಂದಿ ನಕಲಿಗಳಿಗೆ ಹುದ್ದೆ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಕೋಟೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಮಾಡಲಾಗಿದ್ದು 1 ವರ್ಷದಿಂದ ಬೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ನಕಲಿ ಜಾಲ ಸೃಷ್ಟಿ ಮಾಡಿದ್ದ 4 ಮಂದಿ ಸರ್ಕಾರಿ ನೌಕರರು ಸತ್ತಿಲ್ಲದವರ ಹೆಸರಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿ ಮಾಡಿದ್ದ ಗ್ಯಾಂಗ್ ಈಗ ಜೈಲುಪಾಲಾಗಿದೆ. ಬೆಸ್ಕಾಂ ಅಧಿಕ್ಷಕ ಇಂಜಿನಿಯರ್ ಶಾಂತ ಮಲ್ಲಪ್ಪಸಹಾಯಕ ಬೆಸ್ಕಾಂ ಅಧಿಕಾರಿ ರವಿ ಕುಮಾರ್ ಸೇರಿ 8 ಮಂದಿ ಅರೆಸ್ಟ್ ಮಾಡಲಾಗಿದೆ. ಆರೋಪಿಗಳಾದ ಪೈಜಾನ್ ಮುಜಾಹಿದ್ಪ್ರೇಮ್ ಕುಮಾರ್ ಕೂಡಾ ಅರೆಸ್ಟ್ ಆಗಿದ್ದಾರೆ. ಅನುಕಂಪ ಆಧಾರದಲ್ಲಿ ಸರ್ಕಾರಿ ಕೆಲಸ ಪಡೆದಿದ್ದ ವಿರೇಶ್, ರಘು ಕಿರಣ್ಹರೀಶ್, ಶಿ ವ ಪ್ರಸಾದ್ ಇವರುಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಇತರೆ ಆರೋಪಿಗಳಾದ ರಕ್ಷಿತ್ಕಾರ್ತಿಕ್  ತಲೆ ಮರೆಸಿಕೊಂಡಿದ್ದು ಅವರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಲಾಗಿದೆ.
ಚಿತ್ರದುರ್ಗದ ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ನಾಗರಾಜ್ ಈ ಕುರಿತು ದೂರು ನೀಡಿದ್ದರಿಂದ ಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. IPC 420465468,471 ಅಡಿ ಪೊಲೀಸರು ಕೇಸ್ ದಾಖಲಿಸಿದ್ದರು.

[t4b-ticker]

You May Also Like

More From Author

+ There are no comments

Add yours