ತೆರೆಮರೆಯಲ್ಲಿ ವಾಲ್ಮೀಕಿ ಸಂಘದ ಅಧ್ಯಕ್ಷರ ಆಯ್ಕೆ ಸಮಾಜ ಮುಖಂಡರಿಂದ ಆಕ್ರೋಶ

 

 

ಸಬ್ ಹೆಡ್ ಲೈನ್:-ವಾಲ್ಮೀಕಿ ಸಂಘವು ರಾಜಕೀಯ ನಾಯಕರ ಕಪಿಮುಷ್ಠಿಯಿಂದ ದೂರವಿರಲಿ:-ಸಭೆಯಲ್ಲಿ ಮುಖಂಡರ ಒತ್ತಾಯ.

ಮೊಳಕಾಲ್ಮುರು🙁Molakalmuru)ವಾಲ್ಮೀಕಿ ಸಮುದಾಯವನ್ನು ಬೇರು ಮಟ್ಟದಲ್ಲಿ ಸಂಘಟನೆ ಮಾಡುವ ಉದ್ದೇಶದಿಂದ ಗ್ರಾಮದಿಂದ ತಾಲೂಕು ಮಟ್ಟದವರೆಗೂ ಸಮುದಾಯದವನ್ನು ಸಂಘಟನೆ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ನಾಯಕ ಸಮಾಜದ ಮುಖಂಡರಾದ ಜಿಪಿ ಸುರೇಶ್ ಹೇಳಿದರು.

ಪಟ್ಟಣದ ಹೊರವಲಯದ ವಾಲ್ಮೀಕಿ ಭವನದ ಮುಂಭಾಗದಲ್ಲಿ ಗುರುವಾರದಂದು ನಡೆದ ತಾಲೂಕು ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದು,ರಾಜಕೀಯವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುನ್ನಲೆಗೆ ಬರಲು ಸಮುದಾಯದ ಸಂಘಟನೆ ಬಹಳಷ್ಟು ಮುಖ್ಯವಾಗಿದೆ. ಗ್ರಾಮಮಟ್ಟದಲ್ಲಿ ವಾಲ್ಮೀಕಿ ಸಮುದಾಯದ ಸಮಿತಿಗಳನ್ನು ರಚಿಸಿ ತಾಲೂಕು ಮಟ್ಟಕ್ಕೆ ವಿಸ್ತರಣೆ ಮಾಡುವ ಮೂಲಕ ಸಮುದಾಯವನ್ನು ಬಲಿಷ್ಠವಾಗಿ ಭದ್ರಪಡಿಸಬೇಕು,ಈ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ಕರಪತ್ರ ಹಂಚಿಕೆ ಮಾಡಿ ಯುವಕರು ಮತ್ತು ಸಮುದಾಯದ ಹಿರಿಯ ಮುಖಂಡರನ್ನು ಅಧ್ಯಕ್ಷರ ಆಯ್ಕೆಯ ಸಭೆಗೆ ಆಹ್ವಾನಿಸಿ ಸಮುದಾಯದವರ ಸಮ್ಮುಖದಲ್ಲಿ ಒಮ್ಮತದ ಅಭಿಪ್ರಾಯದ ಮೇರೆಗೆ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿ ಎಂದರು.

ವಾಲ್ಮೀಕಿ ಸಮಾಜದ ಮುಖಂಡರಾದ ಹಾನಗಲ್ ತಿಪ್ಪಯ್ಯ ಮಾತನಾಡಿ ಮಹರ್ಷಿ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಯು ತೆರೆಮರೆಯಲ್ಲಿ ನಡೆದಿದ್ದು ಈ ನೂತನ ಸಂಘವು ಕಾಂಗ್ರೆಸ್ ಮಯವಾಗಿದೆ.ಸಂಘ ಎಂಬುದು ಪಕ್ಷಾತೀತವಾಗಿ ರಚನೆಯಾಗಲಿ,ಇದರಲ್ಲಿ ರಾಜಕೀಯ ಹಿತಾಸಕ್ತಿಗಳು ಇರಬಾರದು ಆದರೆ ಸಮಾಜದ ಮುಖಂಡರ ಸಭೆ ಕರೆಯದೆ ಯಾರ ಗಮನಕ್ಕೂ ತಾರದೇ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಸಮಾಜಕ್ಕೆ ಮಾಡಿದ ದ್ರೋಹವಾಗಿದೆ.ಈಗಾಗಲೇ ರಚನೆಯಾಗಿರುವ ಸಂಘವನ್ನು ಅಮಾನ್ಯ ಮಾಡಿ ಸಮಾಜದವರ ಸಭೆ ಕರೆಯಿಸಿ ಎಲ್ಲರೂ ಸಮ್ಮುಖದಲ್ಲಿ ಅಧ್ಯಕ್ಷರ ಆಯ್ಕೆಯನ್ನು ಮಾಡಬೇಕು. ಸಮುದಾಯದವರಲ್ಲಿ ಒಡುಕು ಉಂಟು ಮಾಡದೇ ಒಗ್ಗಟ್ಟಿನಲ್ಲಿ ಸಂಘ ರಚನೆ ಮಾಡಬೇಕು ಇದರಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.

ಇದನ್ನೂ ಓದಿ: ಕೋವಿಡ್ ಸಂಖ್ಯೆ ಭಾರೀ ಹೆಚ್ಚಳ ಎಂದ ತಜ್ಞರು

ಸಭೆಯಲ್ಲಿ ನಾಯಕ ಸಮುದಾಯದ ಮುಖಂಡರಾದ ಹಾನಗಲ್ ಸೂರಯ್ಯ,ಎಲ್ ಐಸಿ ನಾಗರಾಜ್,ಸಣ್ಣ ಪಾಪಣ್ಣ,ತುಮುಕೂರ್ಲಹಳ್ಳಿ ಮಂಜು,ಮುರುಳಿ,ಆರ್ ತಿಪ್ಪೇಸ್ವಾಮಿ,ಕೋನಸಾಗರ ಪಾಲಯ್ಯ ಕರಿಬಸಣ್ಣ,ಬೋಸಯ್ಯ,ಮಂಜಣ್ಣ,ರಾಂಪುರ ತಿಪ್ಪೇಶ್,ದಳವಾಯಿ ರಮೇಶ್,ಮಲ್ಲಿಕಾರ್ಜುನ, ಕುಮಾರಸ್ವಾಮಿ, ಮಾರುತಿ,ಓಬಣ್ಣ,ಸಿದ್ದೇಶ್, ಕೆಳಗಳಹಟ್ಟಿ ಸಿದ್ದು,ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

[t4b-ticker]

You May Also Like

More From Author

+ There are no comments

Add yours