“ಸೇವಾ ಭೂಷಣ ಪ್ರಶಸ್ತಿ” ಗೆ ರಾಜೇಶ್ ನಾಯಕ ಆಯ್ಕೆ.

 

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ. ರಾಜ್ಯ ಮಟ್ಟದ “ಸೇವಾ ಭೂಷಣ ಪ್ರಶಸ್ತಿ” ಗೆ ಸಾಮಾಜಿಕ ಕಾರ್ಯಕರ್ತ ರಾಜೇಶ್ ನಾಯಕ ಜಿ ಆರ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಾರ್ಚ್ 21 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಯಮುನಾ ತಿಳಿಸಿದ್ದಾರೆ.

ಗುಂಡ್ಲುಪೇಟೆಯ ಶ್ರೀಯುತ
ಆರ್ ರಾಜೇಶ್ ನಾಯಕ ಇವರು ಸಮಾಜಿಕ ಕಾರ್ಯಕರ್ತ ಮತ್ತು ಸಾಮಾಜಿಕ ಜಾಲತಾಣಗಳ‌ ತಜ್ಞರು ಆಗಿದ್ದು 3000 ಕ್ಕೂ ಹೆಚ್ಚು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಶ್ರೀ ಬದರಿ ದಿವ್ಯ ಭೂಷಣ್ ಮತ್ತು ಡಾ ಅಂಜನ ಭೂಷಣ್ ರವರ ಭೂಷಣ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯಪ್ರಸ್ತುತಿ ಕೇಂದ್ರ ರೂಪಿಸಿದ ನೃತ್ಯ ಬಲೆಯೊಂದು “ಶ್ರೀ ರಾಮಾನುಜ ಧನುರ್ ದಾಸ ವೈಭವಂ” ನೃತ್ಯ ರೂಪದಲ್ಲಿ ಶ್ರೀ ರಾಮಾನುಜರ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು. ಈ ನೃತ್ಯ ರೂಪಕವು ದೇಶದ ನಾನಾ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಪ್ರಸ್ತುತಗೊಂಡಿದೆ. ಹಾಗೂ ತಿರುಪತಿಯ ನಾದ ನಿರಜನಂ ವೇದಿಕೆಯಲ್ಲಿ ಟಿಟಿಡಿ ಚಾನಲ್ ಮುಖಾಂತರ 170 ದೇಶಗಳಲ್ಲಿ ನೇರ ಪ್ರಸಾರಗೊಂಡಿದೆ. ಹಾಗೂ ಮಹಿಳಾ ಸಬಲೀಕರಣ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ನಾಡು ನುಡಿ ಜಲ ಭಾಷೆ ಸಾಹಿತ್ಯ ಸಂಸ್ಕೃತಿ ಪರಂಪರೆಗೆ ಶ್ರಮಿಸಿದ ಸೇವೆಯನ್ನು ಪರಿಗಣಿಸಿ ಸಮಾಜ ಸೇವೆಯೆಂದು ಪರಿಗಣಿಸಿ ಪ್ರತಿಷ್ಟಿತ “ಬಸವರತ್ನ ರಾಷ್ಟ್ರ ಪ್ರಶಸ್ತಿ” ಇವರಿಗೆ ಲಭಿಸಿದೆ.

[t4b-ticker]

You May Also Like

More From Author

+ There are no comments

Add yours