ತಾಳಿ ಕಟ್ಟುವ ಶುಭ ವೇಳೆಗೆ ತಾಳಿಯನ್ನು ದಬ್ಬಿ ಮದುವೆ ಬೇಡವೆಂದ ಹುಡುಗಿ

 

 

 

 

ಹೊಸದುರ್ಗ : ಶಾಸ್ತ್ರೋಕ್ತವಾಗಿ ಮದುವೆ ನಡೆಯಲು ಹಿರಿಯರೆಲ್ಲಾ ನಿರ್ಧರಿಸಿದ್ದರು. ಅದರಂತೆ ವಧು, ವಾರ, ಬಂದು, ಭಾಂದವರು ಎಲ್ಲಾ ಸೇರಿ ಅದ್ದೂರಿಯಾಗಿ ಮದುವೆ ಆಯೋಜನೆ ಮಾಡಲಾಗಿತ್ತು. ಹಲವು ಶಾಸ್ತ್ರಗಳು ನಿಯಮವಾಗಿಯೇ ನಡೆದವು. ಇನ್ನೇನು ತಾಳಿ ಕಟ್ಟಬೇಕೆಂಬ ಸಂದರ್ಭದಲ್ಲಿ ವಧು ಮದುವೆ ನಿರಾಕರಿಸಿರುವ ಘಟನೆ ಹೊಸದುರ್ಗ  (Hosadurga) ತಾಲ್ಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗುರುವಾರ ನಡೆದಿದೆ.
ಘಟನೆ : ಚಳ್ಳಕೆರೆ ಸುಕನ್ಯಾ ಹಾಗೂ ಜಿ.ಟಿ. ಮಧು ಅವರ
ಮಗಳು ಯಮುನಾ ಜಿ.ಎಂ ಹಾಗೂ ಚಿಕ್ಕಬ್ಯಾಲದಕೆರೆ  ನಾಗರತ್ನಮ್ಮ ಹಾಗೂ ಸಿ.ಬಿ. ಲಕ್ಷ್ಮಣ್ಣ ಇವರ ಮಗ ಮಂಜುನಾಥ್ ಅವರೊಂದಿಗೆ ಗುರುವಾರ ಚಿಕ್ಕಬ್ಯಾಲದಕೆರೆಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು‌. ಕಳೆದ ಒಂದು ವರ್ಷದಿಂದ ವಧು ಹಾಗೂ ವರನ ನಡುವೆ ಉತ್ತಮ ಒಡನಾಟ ವಿತ್ತು.  ಪೋಷಕರು ಆಗಲೇ ಮದುವೆ ನಿಶ್ಚಯ ಮಾಡುವ ತವಕದಲ್ಲಿದ್ದರು, ಯಮುನಾ ಓದುವ ಕಾರಣವೊಡ್ಡಿ ಮದುವೆಯನ್ನು ಒಂದು ವರ್ಷ ಮುಂದೂಡಿದ್ದರು. ನಂತರ ಎಲ್ಲರ ಒಪ್ಪಿಗೆಯಂತೆ ಬುಧವಾರ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಗುರುವಾರ ಮುಹೂರ್ತದ ಸಮಯ ಬೆಳ್ಳಿಗ್ಗೆ 9.30 ಕ್ಕೆ ತಾಳಿ ಕಟ್ಟುವ ಸಮಯದಲ್ಲಿ ವಧು ಬಲಗೈಯಲ್ಲಿ ತಾಳಿ ತಳ್ಳಿದ್ದಾರೆ. ಹಿರಿಯರು ಮತ್ತು ಕುಟುಂಬಸ್ಥರು ಎಷ್ಟೇ ಒತ್ತಾಯ ಮಾಡಿದರೂ, ವಧು ತಾಳಿ ಕಟ್ಟಿಸಿಕೊಳ್ಳಲು ಒಪ್ಪಲಿಲ್ಲವೆಂದು ಮದುವೆಯಲ್ಲಿ ಭಾಗಿಯಾಗಿದ್ದ ಒಬ್ಬರು ಮಾಹಿತಿ ನೀಡಿದರು. ವಧುವಿನ ನಡೆ ಮತ್ತು ತಾಳಿ ಕಟ್ಟಿಸಿಕೊಳ್ಳಲು ತಿರಸ್ಕರಿಸಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಯಾಗುತ್ತಿದ್ದು, ಈ ಘಟನೆ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
[t4b-ticker]

You May Also Like

More From Author

+ There are no comments

Add yours