ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಶೇ.81.18 ರಷ್ಟು ಮತದಾನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಮೇ.11:
ರಾಜ್ಯದ ಸಾರ್ವತ್ರಿಕ ವಿದಾನಸಭೆ ಚುನಾವಣೆಗೆ ಮೇ.10 ಬುಧವಾರ ಜರುಗಿದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು ಶೇ.81.18 ರಷ್ಟು ಮತದಾನವಾಗಿದೆ. *ಜಿಲ್ಲೆಯ ಒಟ್ಟು 14,03,585 ಮತದಾರರಲ್ಲಿ 11,39,749 ಜನರು  ಮತಗಟ್ಟೆಯಲ್ಲಿ ಮತಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಹೊಸದುರ್ಗ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಚಲಾವಣೆಯಾಗಿದೆ. ಶೇ.83.72 ರಷ್ಟು ಮತದಾನವಾಗಿದೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 99,418 ಪುರುಷ, 98236 ಮಹಿಳೆ ಒಟ್ಟು 1,97,654 ಮತದಾರರು ಇದ್ದಾರೆ. ಇದರಲ್ಲಿ 84,533 ಪುರುಷ, 80,947 ಮಹಿಳೆ ಸೇರಿ 1,65,480 ಮತದಾರರು ಮತಚಲಾಯಿಸಿದ್ದಾರೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.83.04 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,17,964ಪುರುಷ, 1,17,288 ಮಹಿಳೆ ಹಾಗೂ 8 ಇತರೆ ಸೇರಿ ಒಟ್ಟು 2,35,260 ಮತದಾರರು ಇದ್ದಾರೆ. ಇದರಲ್ಲಿ 1,00,066 ಪುರುಷ, 95,295 ಮಹಿಳೆ ಹಾಗೂ 3 ಇತರೆ ಮತದಾರರು ಸೇರಿ ಒಟ್ಟು 1,95,364 ಮತದಾರರು ಮತಚಲಾಯಿಸಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.82.90 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,22,927 ಪುರುಷ, 1,20,788 ಮಹಿಳೆ ಹಾಗೂ 12 ಇತರೆ ಸೇರಿ ಒಟ್ಟು 2,43,727 ಮತದಾರರು ಇದ್ದಾರೆ. ಇದರಲ್ಲಿ 1,02,665 ಪುರುಷ, 99,380 ಮಹಿಳೆ ಹಾಗೂ 7 ಇತರರು ಸೇರಿ 2,02,052 ಮತದಾರರು ಮತಚಲಾಯಿಸಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.81.32 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,20,884 ಪುರುಷ, 1,22,642 ಮಹಿಳೆ ಹಾಗೂ 15 ಇತರೆ ಸೇರಿ ಒಟ್ಟು 2,43,541 ಮತದಾರರು ಇದ್ದಾರೆ. ಇದರಲ್ಲಿ 99,798 ಪುರುಷ, 98,251 ಮಹಿಳೆ ಹಾಗೂ 5 ಇತರೆ ಸೇರಿ ಒಟ್ಟು 1,98,054 ಮತದಾರರು ಮತಚಲಾಯಿಸಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.80.04 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,09,992 ಪುರುಷ, 1,10,917 ಮಹಿಳೆ ಹಾಗೂ 3 ಇತರೆ ಸೇರಿ ಒಟ್ಟು 2,20,912 ಮತದಾರರು ಇದ್ದಾರೆ. ಇದರಲ್ಲಿ 88,974 ಪುರುಷ, 87,839 ಮಹಿಳೆ ಹಾಗೂ 3 ಇತರೆ ಸೇರಿ 1,76,816 ಮತದಾರರು ಮತಚಲಾಯಿಸಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.76.85 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 1,29,626 ಪುರುಷ, 1,32,831 ಮಹಿಳೆ ಹಾಗೂ 34 ಇತರೆ ಸೇರಿ ಒಟ್ಟು 2,62,419 ಮತದಾರರು ಇದ್ದಾರೆ. ಇದರಲ್ಲಿ 1,00,545 ಪುರುಷ, 1,01,184 ಮಹಿಳೆ ಹಾಗೂ 4 ಇತರೆ ಸೇರಿ ಒಟ್ಟು 2,01,733 ಮತದಾರರು ಮತಚಲಾಯಿಸಿದ್ದಾರೆ.
ಮೇ.2 ರಿಂದ 4 ವರೆಗೆ ಜಿಲ್ಲೆಯಲ್ಲಿ ಅಗತ್ಯ ಸೇವೆಗಳಲ್ಲಿ ಇರುವ  219 ನೌಕರ ಮತದಾರರು ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿರುವ ಅಂಚೆ ಮತದಾನ ಕೇಂದ್ರಗಳಲ್ಲಿ ಮತಚಲಾಯಿಸಿದ್ದಾರೆ.
ಮೇ.3 ಹಾಗೂ ಮೇ.5 ರಂದು ಜರುಗಿದ ಮನೆಯಿಂದ ಮತದಾನದಲ್ಲಿ ಜಿಲ್ಲೆಯಲ್ಲಿ 80 ವರ್ಷ ದಾಟಿದ 1096 ಹಾಗೂ 395 ವಿಕಲಚೇತನರು ಸೇರಿ 1491 ಮತದಾರರು ಮನೆಯಿಂದ ಮತಚಲಾಯಿಸಿದ್ದಾರೆ.
ಮತ ಎಣಿಕೆ ಮಾಹಿತಿ: ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ಇದೇ ಮೇ.13ರಂದು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದ ನೆಲಮಹಡಿಯಲ್ಲಿ ಹಿರಿಯೂರು ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮೊದಲ ಮಹಡಿಯಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ  ನಡೆಯಲಿದೆ. ಎರಡನೇ ಮಹಡಿಯಲ್ಲಿ ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ವಿಧಾನಸಭಾ ಕ್ಷೇತ್ರವಾರು ಒಟ್ಟು 14 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆ ಸಿಬ್ಬಂದಿ ವಿವರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ 102 ಮೇಲ್ವಿಚಾರಕರು, 102 ಸಹಾಯಕರು ಹಾಗೂ 114 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು 17 ಮೇಲ್ವಿಚಾರಕರು, 17 ಸಹಾಯಕರು ಹಾಗೂ 19 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.
ಬಂದೋಬಸ್ತ್ ವಿವರ: ಮತ ಎಣಿಕೆ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಂದೋಬಸ್ತ್ ಕರ್ತವ್ಯಕ್ಕೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದ್ದು, ಪ್ರತಿ ಸರದಿಗೆ 1 ಡಿಎಸ್‍ಪಿ, 1 ಸಿಪಿಐ, 4 ಪಿಎಸ್‍ಐ, 9 ಎಎಸ್‍ಐ, 17 ಹೆಚ್.ಸಿ, 20 ಪಿಸಿ, 2 ಸಿಎಪಿಎಫ್, 1 ಕೆಎಸ್‍ಆರ್‍ಪಿ, 2 ಡಿಎಆರ್ ತುಕಡಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours