ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ನಿಮ್ಮ ಜಿಲ್ಲೆಗೆ ಯಾರು ಉಸ್ತವಾರಿ ನೋಡಿ

 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಹಂತ ಹಂತವಾಗಿ ತನ್ನ ಆಡಳಿತ ಚುರುಕುಗೊಳಿಸುವ ಕೆಲಸ ಆರಂಭಿಸಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ, ಖಾತೆಗಳ ಹಂಚಿಕೆ ನಡೆಸಿದ ಬಳಿಕ ಈಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನೂ ಪೂರ್ಣಗೊಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪ್ರಕ್ರಿಯೆಯನ್ನು ಸಿದ್ದರಾಮಯ್ಯ ಸರ್ಕಾರ ಶುಕ್ರವಾರ (ಜೂ.2) ಪೂರ್ಣಗೊಳಿಸಿದೆ.

ಇದರಂತೆ, ರಾಜ್ಯ ರಾಜಧಾನಿ ಬೆಂಗಳೂರಿನ ಉಸ್ತುವಾರಿ ಸಚಿವರ ಹೊಣೆಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಹೆಗಲೇರಿದೆ. ಇದೇ ರೀತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ನೇಮಕ ಮಾಡಲಾಗಿದೆ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರು?

ಬೆಂಗಳೂರು ನಗರ ಕೆ ಜೆ ಜಾರ್ಜ್

ಬೆಂಗಳೂರು ಗ್ರಾಮಾಂತರ ರಾಮಲಿಂಗಾ ರೆಡ್ಡಿ

ಕೋಲಾರ ಕೆ ಎಚ್ ಮುನಿಯಪ್ಪ

ಚಿಕ್ಕಬಳ್ಳಾಪುರ ಡಾ.ಎಂ.ಸಿ.ಸುಧಾಕರ

ರಾಮನಗರ ಡಿ ಕೆ ಶಿವಕುಮಾರ

ಮಂಡ್ಯ ಚೆಲುವರಾಯ ಸ್ವಾಮಿ

ಮೈಸೂರು ಡಾ.ಎಚ್ ಸಿ ಮಹದೇವಪ್ಪ

ಚಾಮರಾಜನಗರ ದಿನೇಶ್ ಗುಂಡೂರಾವ್

ಕೊಡಗು ವೆಂಕಟೇಶ್

ದಕ್ಷಿಣಕನ್ನಡ ಕೃಷ್ಣ ಬೈರೇಗೌಡ

ಉಡುಪಿ ಡಾ ಜಿ ಪರಮೇಶ್ವರ

ಉತ್ತರ ಕನ್ನಡ ಮಂಕಾಲ್ ವೈದ್ಯ

ಧಾರವಾಡ ಸಂತೋಷ್ ಲಾಡ್

ಬೆಳಗಾವಿ ಸತೀಶ್ ಜಾರಕಿಹೊಳಿ

ಬೀದರ್ರ ಹೀಮ್ ಖಾನ್

ಕಲಬುರಗಿ ಶರಣ ಪ್ರಕಾಶ್ ಪಾಟೀಲ್

ವಿಜಯಪುರ ಎಮ್ ಬಿ ಪಾಟೀಲ್

ಬಳ್ಳಾರಿ ನಾಗೇಂದ್ರ

ಗದಗ ಎಚ್ ಕೆ ಪಾಟೀಲ್

ಹಾವೇರಿ ಬಿ ಝಡ್ ಝಮೀರ್ ಅಹ್ಮದ್ ಖಾನ್

ಕೊಪ್ಪಳ ಶಿವರಾಜ್ ತಂಗಡಗಿ

ಯಾದಗಿರಿ ಶರಣಪ್ಪಬಸಪ್ಪ ದರ್ಶನಾಪುರ

ಬಾಗಲಕೋಟೆ ಶಿವಾನಂದ ಪಾಟೀಲ್

ವಿಜಯನಗರ ಲಕ್ಷ್ಮೀ ಹೆಬ್ಬಾಳ್ಕರ್

ತುಮಕೂರು ಕೆ ಎನ್ ರಾಜಣ್ಣ

ಚಿತ್ರದುರ್ಗ ಡಿ ಸುಧಾಕರ

ಶಿವಮೊಗ್ಗ ಮಧು ಬಂಗಾರಪ್ಪ

ಹಾಸನ ಈಶ್ವರ್ ಖಂಡ್ರೆ

ಚಿಕ್ಕಮಗಳೂರು ಪ್ರಿಯಾಂಕ್ ಖರ್ಗೆ

ದಾವಣಗೆರೆ ಎಸ್ ಎಸ್ ಮಲ್ಲಿಕಾರ್ಜುನ

ರಾಯಚೂರು ಎನ್ ಎಸ್ ಬೋಸ್ ರಾಜು

[t4b-ticker]

You May Also Like

More From Author

+ There are no comments

Add yours