NEET/JEE  ಪ್ರವೇಶ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.31:
2022-23ನೇ ಸಾಲಿಗೆ 2021-22ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಅಂತ್ಯಗೊಳಿಸಿದ 200 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 10 ತಿಂಗಳ ಅಥವಾ 2022-23ನೇ ಸಾಲಿನ NEET ಪ್ರವೇಶ ಪರೀಕ್ಷೆ ಪ್ರಾರಂಭವಾಗುವವರೆಗೂ ವಸತಿಯುತ ವಿದ್ಯಾರ್ಥಿಗಳಿಗೆ Long Term  ತರಬೇತಿಯನ್ನು ಬೆಂಗಳೂರು ಅಥವಾ ಮಂಗಳೂರು ನಗರದಲ್ಲಿ ತರಬೇತಿ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 9 ಅರ್ಜಿ ಸಲ್ಲಿಸಲು ಕೊನೆಯ ದಿನ.
ಸಮಾಜ ಕಲ್ಯಾಣ ಇಲಾಖೆ ವೆಬ್‍ಸೈಟ್ sw.kar.nic.in  ರಲ್ಲಿ ಡಿಸೆಂಬರ್ 31 ರಿಂದ ಜನವರಿ 9 ರವರೆಗೆ ನಿಗಧಿತ ಅರ್ಜಿ ನಮೂನೆಯಲ್ಲಿ ಆಸಕ್ತ ಅಭ್ಯರ್ಥಿಗಳು ಲಿಂಕ್ ಮೂಲಕ ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, NEET/JEE  ನಲ್ಲಿ 300 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ ಬಗ್ಗೆ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ 080-22353759, 9482300400 ಗೆ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
======

[t4b-ticker]

You May Also Like

More From Author

+ There are no comments

Add yours