ವೋಟರ್ ಐಡಿ ಕಾರ್ಡ್‍ಗೆ ಆಧಾರ್ ಸಂಖ್ಯೆ ಜೋಡಣೆಗೆ ಅವಕಾಶ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 17
ರಾಷ್ಟ್ರೀಯ ಮತದಾರರ ಜಾಗೃತಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಮತ್ತು ಅವಲಂಬಿತರು ವೋಟರ್ ಐಡಿ ಕಾರ್ಡ್‍ಗಳಿಗೆ ತಮ್ಮ ಆಧಾರ್ ಸಂಖ್ಯೆಯನ್ನು VHA App  ಅಥವಾ www.nvsp.in ಮೂಲಕ ಆನ್‍ಲೈನ್ ಮುಖಾಂತರ ನಮೂನೆ-6ಬಿ ನಲ್ಲಿ ಭರ್ತಿ ಮಾಡಲು ಮತದಾರರಿಗೆ ಅವಕಾಶ ನೀಡಲಾಗಿದೆ.
ಕಾಲೇಜು ಪ್ರವೇಶ ಪಟ್ಟಿ ಮಾತ್ರವಲ್ಲ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿ. 18 ವರ್ಷ ವಯಸ್ಸಿನವರಾಗಿದ್ದರೆ ಜನವರಿ -01, ಏಪ್ರಿಲ್ -01, ಜುಲೈ-01, ಅಕ್ಟೋಬರ್-01 ರಂದು ಈ ಯಾವುದೇ ಅರ್ಹತಾ ದಿನಾಂಕದಂದು ಅಥವಾ ಅದಕ್ಕೂ ಮೊದಲು ನೀವು 18 ವರ್ಷ ಪೂರೈಸಿದ್ದರೆ VHA App ಅಥವಾ www.nvsp.in ನಲ್ಲಿ ನಮೂನೆ-6ಬಿ ನಲ್ಲಿ ಭರ್ತಿ ಮಾಡಿ ಮತ್ತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಅರ್ಹತಾ ದಿನಾಂಕದ ನಂತರ ಇPIಅ ಅನ್ನು ಸ್ವಯಂಚಾಲಿತವಾಗಿ ಒದಗಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ.ಕೆ.ನಂದಿನಿದೇವಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours