ಸರ್ಕಾರಿ ಭೂಮಿ ಒತ್ತುವರಿ ಮಾಡಿದರೆ ಭೂ ಕಬಳಿಕೆಯಡಿ ಕೇಸ್: ತಹಶೀಲ್ದಾರ್ ಎನ್‌.ರಘುಮೂರ್ತಿ ಎಚ್ಚರಿಕೆ

 

ಚಳ್ಳಕೆರೆ: ಕಳೆದ 20 ವರ್ಷಗಳಿಂದ ಕುರುಡಿಹಳ್ಳಿ ಗ್ರಾಮದ ಸರ್ವೆ ನಂಬರ್ 118 ರಲ್ಲಿ ಗೋಮಾಳದ ಜಮೀನನ್ನು ಬೇಲಿ ಹಾಕಿಕೊಂಡು ಕುರಿ ಪಾಲಯ್ಯ ಸಾರ್ವಜನಿಕರಿಗೆ ಓಡಾಡಲು ಅಡ್ಡಿ ಮಾಡಿದ್ದು ಸಾರ್ವಜನಿಕರು ಈ ರಸ್ತೆಯನ್ನು ಬಿಡಿಸಿಕೊಡುವಂತೆ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್  ಮತ್ತು ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಕೂಡ ತೆರವುಗೊಳಿಸದೆ ಇರುವುದರಿಂದ ಗ್ರಾಮಸ್ಥರುಗಳು ತಹಶೀಲ್ದಾರ್ ಅವರಿಗೆ ಒಂದು ವೇಳೆ  ತೆರವುಗೊಳಿಸದೇ ಇದ್ದರೆ  ಉಪವಾಸ ಸತ್ಯಾಗ್ರಹ  ಕೈಗೊಳ್ಳುವುದಾಗಿ ನಿನ್ನೆ ತಾಲೂಕು  ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಕಚೇರಿಯಲ್ಲಿ  ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ  ತಹಶೀಲ್ದಾರ್ ಎನ್. ರಘುಮೂರ್ತಿ ಇಂದು ಬೆಳಗ್ಗೆ ಬೆಳಗ್ಗೆ 8:00 ಗಂಟೆಗೆ ಕಂದಾಯ ಮತ್ತು ಸರ್ವೆ ಅಧಿಕಾರಿಗಳೊಂದಿಗೆ ಜೆಸಿಬಿ ಮುಖಾಂತರ ಒತ್ತುವರಿ ಮಾಡಿಕೊಂಡಿದ್ದಂತಹ  ದಾರಿಯನ್ನು ತೆರವುಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ  ಸಾರ್ವಜನಿಕರು ಉದ್ದೇಶಿ ಮಾತನಾಡಿದ ತಹಶೀಲ್ದಾರ್ ಎನ್‌. ರಘುಮೂರ್ತಿ ಮಾತನಾಡಿ ಸರ್ಕಾರಿ ಸ್ವಾಮ್ಯದ ಗೋಮಾಳ ,ಕೆರೆ, ಕಾಲುದಾರಿ ಸ್ಮಶಾನ ಮುಂತಾದವುಗಳನ್ನು ಅತಿಕ್ರಮಿಸಿಕೊಳ್ಳಬಾರು ಎಂದು ಮನವಿ ಮಾಡಿದರು.

ಸಾರ್ವಜನಿಕರು ಈ ರೀತಿ ಒತ್ತುವರಿ ಮಾಡುತ್ತಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇದರಿಂದ ಅದೆಷ್ಟೋ ಕುಟುಂಬಗಳು ಅದೆಷ್ಟು ಅಸಹಾಕರು ಪರಿತಪಿಸುತ್ತಿದ್ದಾರೆ.  ಭೂ ಕಬಳಿಕೆ ಆರೋಪದಡಿ ಮುಂದಿನ ದಿನಗಳಲ್ಲಿ ಇಂಥ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿ ಸರ್ಕಾರಿ ಸ್ವಾಮ್ಯದ ಒಂದಿಂಚು ಭೂಮಿಯನ್ನು ಬಿಡದೆ ವಶಪಡಿಸಿ ಕೊಳ್ಳುವುದಾಗಿ ಒತ್ತುವರಿದಾರರಿಗೆ  ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ರಾಜೇಶ್ವ ನಿರೀಕ್ಷಕ  ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಮತ್ತು ಸರ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.ಟ

[t4b-ticker]

You May Also Like

More From Author

+ There are no comments

Add yours