ಒಂದೇ ರಾತ್ರಿ ಮೂರು ಮನೆಗಳಲ್ಲಿ ಸರಣಿ ಕಳ್ಳತನ

 

ಹಿರಿಯೂರು ಡಿಸೆಂಬರ್.11 : ಚಿತ್ರದುರ್ಗ ಜಿಲ್ಲೆಯ ಹಿರಿಯೂರು  ತಾಲೂಕಿನ ಬಬ್ಬೂರು  (Babbur)  ಗ್ರಾಮದಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ.

 ಬಬ್ಬೂರು  ಗ್ರಾಮದ ಮೂರು ಮನೆಗಳಲ್ಲಿ ಕಳ್ಳರು ಕೈಚಳಕ ಭರ್ಜರಿಯಾಗಿ ಮಾಡಿದ್ದಾರೆ. ಗ್ರಾಮದ ಅಭಿನಂದನ್, ಶ್ರೀರಂಗ ಬೇಕರಿ ಪುನೀತ್, ಹನುಮಂತಪ್ಪ ಅವರಿಗೆ ಸೇರಿದ ಮನೆಗಳಾಗಿದ್ದು, ಮನೆಗಳಲ್ಲಿ ಇದ್ದಂತಹ  ಚಿನ್ನಾಭರಣ ಸೇರಿದಂತೆ ನಗದು ದೋಚಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರ

ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

[t4b-ticker]

You May Also Like

More From Author

+ There are no comments

Add yours