ಕ್ಯಾತೇದೇವರ ಜಾತ್ರಾ ಆಚರಣೆಗೆ ಜಾಗ ಮೀಸಲಿರಿಸಲು ಮನವಿ

 

ಚಳ್ಳಕೆರೆ : ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ‍್ಲೆಹಳ್ಳಿ ಗ್ರಾಮದ ಬಳಿ ವಸತಿದಿಬ್ಬದ ಜಾಗವನ್ನು ಕ್ಯಾತೇದೇವರ ಜಾತ್ರಾ ಆಚರಣೆಗೆ ಮೀಸಲಿರಿಸಬೇಕು ಎಂದು ಆಗ್ರಹಿಸಿ ಕ್ಯಾತೇದೇವರ ಗುಡಿಕಟ್ಟಿನ ಬೊಮ್ಮನಗೌಡ ಮತ್ತು ಕೋಣನ ಗೌಡರು ಸೋಮವಾರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ನೇತೃತ್ವವಹಿಸಿದ್ದ ಬೊಮ್ಮನಗೌಡರ ಮುಖಂಡ ಬಿ.ಕೆ.ತಿಪ್ಪೇಸ್ವಾಮಿ, ಕಾಡುಗೊಲ್ಲ ಬುಡಕಟ್ಟು ಸಮುದಾಯದ ಆರಾಧ್ಯ ಕ್ಯಾತಪ್ಪ ದೈವದ ಮೂಲ ನೆಲೆಯಾದ ಪುರ‍್ಲೆಹಳ್ಳಿ ಗ್ರಾಮದ ಬಳಿ ವಸತಿದಿಬ್ಬದಲ್ಲಿ ನೂರಾರು ವರ್ಷ ದೇವರ ಜಾತ್ರಾ ಆಚರಣೆ ನಡೆಸುತ್ತಾ ಬಂದಿದ್ದೇವೆ.
ವಸತಿದಿಬ್ಬದ ಅಕ್ಕಳಬಾವಿ ಬಳಿ ಪ್ರತಿ ಶನಿವಾರ ಮತ್ತು ಸೋಮವಾರ ವಿಶೇಷ ಆಚರಣೆ ಸೇರಿದಂತೆ ವರ್ಷವಿಡಿ ದೇವರ ಕಾರ್ಯಗಳು ನಡೆಯುತ್ತವೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಜರುಗುತ್ತದೆ.
ನೈಜ ಬುಡಕಟ್ಟು ಸಂಸ್ಕೃತಿಯನ್ನು ಕಟ್ಟಿಕೊಡುವ ಬಂಜಗೆರೆ (ಬತವಿನ) ವೀರಣ್ಣ, ಕ್ಯಾತಗೊಂಡನಹಳ್ಳಿ ಕದರಿನರಸಿಂಹ, ಆಂಧ್ರಪ್ರದೇಶದ ಐಗಾರನಹಳ್ಳಿ ತಾಳೆದೇವರು, ಟಿ.ಎನ್.ಕೋಟೆ ವೀರಬಡಕ್ಕ, ಚನ್ನಮ್ಮನಾಗತಿ ಕ್ಯಾತೇದೇವರು, ಕೋಣನದೇವರು ಹೀಗೆ ೫-೬ ದೇವರುಗಳನ್ನು ಸೇರಿಸಿ ಜನವರಿ ತಿಂಗಳಲ್ಲಿ ಈ ವಸತಿದಿಬ್ಬದಲ್ಲಿ ವಿಶೇಷ ಜಾತ್ರಾ ಆಚರಣೆ ನಡೆಸಿಕೊಂಡು ಬಂದಿದ್ದೇವೆ.
ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ವಿವಿಧ ಸಮುದಾಯದ ೨೦.ಸಾವಿರಕ್ಕೂ ಹೆಚ್ಚು ಜನರು ಈ ಜಾತ್ರೆ-ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.
ಕಾಟಪ್ಪನಹಟ್ಟಿ ಮಹಾಲಿಂಗಪ್ಪ, ನಮ್ಮ ಪೂರ್ವಿಕರು ಪರಂಪರೆಯಿಂದ ನಡೆಸಿಕೊಂಡು ಬಂದಿರುವ ದೈವದ ಜಾತ್ರಾ ಜಾಗ ದಿನ ದಿನಕ್ಕೂ ಒತ್ತುವರಿಯಾಗುತ್ತಿದೆ. ಜಾತ್ರಾ ಆಚರಣೆಗೆ ಅಡ್ಡಿಪಡಿಸುವ ಸಲುವಾಗಿ ಕೆಲವರು ಬೇಕಂತಲೆ ಸಾಗುವಳಿ ಮಾಡಿಕೊಂಡಿದ್ದಾರೆ. ಇದರಿಂದ ದೇವರ ಕರ‍್ಯ ಹಾಗೂ ಜಾತ್ರಾ ಆಚರಣೆಗೆ ತೀವ್ರ ತೊಂದರೆಯಾಗುತ್ತಿದೆ.
ಹೀಗಾಗಿ ಒತ್ತುವರಿಯಾದ ಜಾಗವನ್ನು ಕೂಡಲೆ ತೆರವುಗೊಳಿಸುವ ಮೂಲಕ ಕಾಡುಗೊಲ್ಲ ಬುಡಕಟ್ಟು ಪರಂಪರೆ ಮತ್ತು ಸಂಸ್ಕೃತಿ ಉಳುವಿಗೆ ಜಾತ್ರಾ ಜಾಗವನ್ನು ದೇವರ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮನವಿ ಮಾಡಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಒತ್ತುವರಿ ತೆರವು ಹಾಗೂ ಜಾತ್ರಾ ಜಾಗ ಮೀಸಲಿಗೆ ಕ್ರಮ ಕೈಗೊಳ್ಳುವುದಾಗಿ . ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಒತ್ತುವರಿಯಾಗದಂತೆ ತಡೆಯಲಾಗುವುದು.ಹಾಗೂ ಜಾತ್ರೆಗೆ ಎಲ್ಲಾ ತಯಾರಿ ಮಾಡಿಕೊಂಡ ಜಾತ್ರೆ ಪೂಜೆ ಕೈಂಕಾರ್ಯಗಳನ್ನು ಮಾಡಿ ಇಲಾಖೆಯಿಂದ ಹಾಗುವಂತಹ ಅನುಕೂಲ ಮಾಡಿಕೊಡುತ್ತೆ ಎಂದು ಭರವಸೆ ನೀಡಿದರು.
ಡಿ.ಉಪ್ಪಾರಹಟ್ಟಿ ತಿಪ್ಪಣ್ಣ, ಮರವಾಯಿ ಅಜ್ಜಪ್ಪ, ವೆಂಕಟೇಶ್, ಕ್ಯಾತಗೊಂಡನಹಳ್ಳಿ ರಾಮಣ್ಣ, ಕೆಂಜಡಿಯಪ್ಪ, ಕ್ಯಾತಣ್ಣ, ತಿಪ್ಪೇಸ್ವಾಮಿ, ಸಿರಿಯಣ್ಣ, ಚಿಕ್ಕಣ್ಣ, ದೊಡ್ಡ ಕ್ಯಾತಪ್ಪ ಇದ್ದರು.

[t4b-ticker]

You May Also Like

More From Author

+ There are no comments

Add yours