ಸರ್ಕಾರಿ ಶಾಲೆಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಹೊಸ ರೂಪ

 

ಚಳ್ಳಕೆರೆ:ಖಾಸಗಿ ಸಹಭಾಗಿತ್ವದಲ್ಲಿ ಹೊಸ ರೂಪ ಪಡೆದ  ಸರ್ಕಾರಿ ಶಾಲೆಗಳು ಚಳ್ಳಕೆರೆ ತಾಲೂಕಿನಲ್ಲಿ ಕಾಣುತ್ತಿವೆ.  ಹೌದು ಚಳ್ಳಕೆರೆ ತಾಲೂಕು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಎರಡನೇ ದೊಡ್ಡ ತಾಲೂಕು ಸಹ ಆಗಿದೆ. ಈ ತಾಲೂಕಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ಹಲವಾರು ಶಾಲೆಗಳು ದುರಸ್ತಿಗೊಂಡಿವೆ.  ಆದರೆ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ಅನುದಾನದಿಂದಲೇ ಎಲ್ಲ ಶಾಲೆಗಳನ್ನು  ಸ್ವಲ್ಪ ಕಷ್ಟವಾಗುತ್ತದೆ.  ಸರ್ಕಾರದ ಅನುದಾನವನ್ನು ಹೊರತುಪಡಿಸಿ  ಹಲವು ಶಾಲೆಗಳ ದುರಸ್ತಿ ನವಿಕೃತ ವಿನ್ಯಾಸದ ಪೇಂಟ್ ಮಾಡುವುದು ಮತ್ತು ಉನ್ನತ ಶಿಕ್ಷಣದ ಪರಿಕಲ್ಪನೆಯ  ಸ್ಮಾರ್ಟ್  ಕ್ಲಾಸ್ ಮಾಡುವುದು ಇಂತಹ ಸಾಮಾಜಿಕ ಮತ್ತು ವಿನೂತನ ಕಲ್ಪನೆಯ ಅಧಿಕಾರಿಗಳಿಗೆ ಬರುವುದು ಬಹಳ ಕಡಿಮೆ ಇಂತಹ ಶಾಲೆಗಳಿಗೆ ಹೊಸ ರೂಪ ನೀಡಲು  ಚಳ್ಳಕೆರೆಯಲ್ಲಿ ಹಿಂದಿನ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿದ್ದ  ರಘುಮೂರ್ತಿ ಅವರು  ಸಾರಿಗೆ ಸಚಿವ  ಶ್ರೀರಾಮುಲು ಇವರ ಗಮನಕ್ಕೆ ತೆಗೆದುಕೊಂಡು ಬಂದು ತಾಲೂಕಿನಲ್ಲಿ ನಾಯಕನಹಟ್ಟಿ ಮತ್ತು ತಳುಕು ಹೋಬಳಿಯ 11 ಗ್ರಾಮಗಳ ಶಾಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸುರೇಶ್ ಇವರೊಂದಿಗೆ ದತ್ತು ತೆಗೆದುಕೊಂಡು ಕುವೈತ್ ಕನ್ನಡಿಗ ಪ್ರತಿಷ್ಠಾನದಿಂದ 11 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪೀಠೋಪಕರಣಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಒಳಗೊಂಡಂತ ಪರಿಕಲ್ಪನೆಯ ಯೋಜನೆಯನ್ನು ರೂಪಿಸಿ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿ ಹಿರೇಹಳ್ಳಿ ಗೌರಸಮುದ್ರ ಮುಂತಾದ 11 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಇಲ್ಲಿನ ಶಾಲೆಗಳ ಮಕ್ಕಳು ಉನ್ನತ ಶಿಕ್ಷಣದ ಪರಿಕಲ್ಪನೆಯ ಬೋಧನೆಯನ್ನು ಪಡೆಯುವಂತಾಗಿದೆ ಇನ್ನು ಚೌಳೂರು ಕುರುಡಿಹಳ್ಳಿ ಬಾಲೇನಹಳ್ಳಿ ಹುಲಿಕುಂಟೆ ಯಲಗಟ್ಟೆ ಗೊಲ್ಲರಟ್ಟಿ ಸೇರಿದಂತೆ ಹತ್ತು ಸರ್ಕಾರಿ ಶಾಲೆಗಳನ್ನು ನವಿಕೃತ ಮಾದರಿಯ ವಿಜಯನಗರ ಸಾಮ್ರಾಜ್ಯದ ಪರಿಕಲ್ಪನೆ ದುರ್ಗಾ ಕೋಟೆಯ ಪರಿಕಲ್ಪನೆ ಮತ್ತು ವಿಮಾನ ನಿಲ್ದಾಣ ಪರಿಕಲ್ಪನೆಯ ಪೇಯಿಂಟ್ಗಳನ್ನು ಬಳಸಿ ಶಾಲೆಗಳನ್ನು ನವೀಕೃತಗೊಳಿಸಲಾಗಿದೆ.  ಇದಲ್ಲದೆ ಮ್ಯಾಸಬ್ಯಾಡರ ಬುಡಕಟ್ಟು ಸಂಸ್ಕೃತಿಯ ಪ್ರತಿಕವಾದಂತ ನನ್ನಿವಾಳ  ಬಂಗಾರ ದೇವರೆಡ್ಡಿ, ಚನ್ನಮ್ಮನ ನಾಗತಿ ಹಳ್ಳಿ  ಮುಂತಾದ ಆರು ಗ್ರಾಮಗಳನ್ನು ಗುರಿತಿಸಿ ಸ ಸ್ಮಾರ್ಟ್ ಕ್ಲಾಸ್ ಒಳಗೊಂಡಂತೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ರಘುಮೂರ್ತಿ ಅವರ ಕಾರ್ಯಗತವಗಾಲು ಶ್ರಮಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours