ಆರೋಗ್ಯವಂತ ಮಹಿಳೆ ಆರೋಗ್ಯಕರ ಕುಟುಂಬ : ಡಾ.ಆರ್.ರಂಗನಾಥ್

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಮಾ.8: ಮಹಿಳೆ ಅಬಲೆಯಲ್ಲಾ ಸಾಮರ್ಥ್ಯ ಉಳ್ಳವಳು, ಸ್ವಾಸ್ಥö್ಯಳು, ಮಹಿಳೆಯ ಆರೋಗ್ಯ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ಆರೋಗ್ಯವಂತ ಮಹಿಳೆ ಆರೋಗ್ಯಕರ ಕುಟುಂಬ ನಾಂದಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.
ಅಂತರ್ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬುಧವಾರ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿ ತಲುಪಿ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಟುಂಬದ ಅಸ್ತಿತ್ವ, ಸಶಕ್ತ ಸಾಮಾಜದ ಆಧಾರ , ಬಲಿಷ್ಠ ರಾಷ್ಟ್ರದ ನಿರ್ಮಾಣದ ಅಡಿಪಾಯವೇ ಮಹಿಳೆ, ಜೀವನ ಶೈಲಿ ಬದಲಾಗಿ ಆರೋಗ್ಯಕರ ಅಭ್ಯಾಸಗಳು ನಿಮ್ಮದಾಗಲಿ ದಿನನಿತ್ಯ ವ್ಯಾಯಾಮ, ನಡಿಗೆ ಸೈಕಲ್ ತುಳಿಯುವ ಅಭ್ಯಾಸಗಳಿಂದ ಆರೋಗ್ಯ ವೃದ್ಧಿಸಲು ಸಹಕಾರಿ, ಒಳ್ಳೆಯ ಪೌಷ್ಟಿಕಾಂಶ ಯುಕ್ತ ಆಹಾರದ ಅಭ್ಯಾಸ ಮಾಡಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕಾಶಿ, ಡಾ.ರೇಣುಪ್ರಸಾದ್, ಡಾ.ಚಂದ್ರಶೇಖರ್ ಕಾಂಬ್ಳಿಮಠ್, ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಬಿ.ಮೂಗಪ್ಪ, ಜಾನಕಿ, ಆರೋಗ್ಯ ಇಲಾಖೆಯ  ರಂಗಾರೆಡ್ಡಿ, ಶ್ರೀ ನಿವಾಸ, ಆಂಜನೇಯ, ಶ್ರೀ ಧರ್, ನಂದಿನಿ, ಶಾಂತಲಾ, ನಾಗವೇಣಿ ,ಪೂರ್ಣಿಮ, ಶಾಂತಮ್ಮ ,ಸಣ್ಣ ರಂಗಮ್ಮ, ಆಶಾ ಕಾರ್ಯಕರ್ತೆಯರು ಇತರರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನಾ ಮಹಿಳೆಯರಿಂದ ಸೈಕಲ್ ಜಾಥ ಜರುಗಿತು.

[t4b-ticker]

You May Also Like

More From Author

+ There are no comments

Add yours