ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

 

 

 

 

ಬೆಂಗಳೂರು : ರಾಜ್ಯ ಸರ್ಕಾರ   (State Govt)ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್   ನೀಡಿದ್ದು, ಶುಚಿ ಯೋಜನೆಯಡಿ 10 ರಿಂದ 18 ವಯಸ್ಸಿನ  ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸಲಿದೆ ಎಂದು  ಹೇಳಲಾಗಿದೆ‌ .

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಶುಚಿ ಯೋಜನೆಯಡಿ 10 ರಿಂದ 18 ವಯಸ್ಸಿಮನ  19 ಲಕ್ಷದ 27 ಸಾವಿರ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ  ಮಾಡಲು ಪ್ರಸಕ್ತ ಸಾಲಿನಲ್ಲಿ ರೂ.47 ಕೋಟಿ ಅನುದಾನ ನೀಡಿದ್ದು, ವೈಯಕ್ತಿಕ ಸ್ವಚ್ಚತೆಯ ಮೂಲಕ ದೈಹಿಕ ಆರೋಗ್ಯ ವೃದ್ಧಿಸಿ, ಶೈಕ್ಷಣಿಕ ಸಾಧನೆಗೆ ಈ ಯೋಜನೆಯು ನೆರವಾಗಲಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನ ಮಹತ್ವ ನಮಗೆ ತಿಳಿದಿದೆ, ನಾಡಿನ ಪ್ರತಿ ಹೆಣ್ಣುಮಕ್ಕಳು ಗರಿಷ್ಠ ಶಿಕ್ಷಣ ಪಡೆದು ಕುಟುಂಬದ ಮತ್ತು ಸಮಾಜದ ಆಸ್ತಿಯಾಗಬೇಕೆಂಬ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ ಎಂದರು.

 

 

ಇದನ್ನೂ ಓದಿ: ಜಿಲ್ಲೆಯಲ್ಲಿ 514 ಗ್ರಾಮ ಪೋಡಿ ಮುಕ್ತ, ನೀವು ನೊಂದಯಿಸಿಕೊಳ್ಳಿ

ಸ್ತ್ರೀ ಶಕ್ತಿ ಆರಾಧನೆಯ ಈ ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದ್ದು, ಮಹಿಳೆಯರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದಿದ್ದಾರೆ.

[t4b-ticker]

You May Also Like

More From Author

+ There are no comments

Add yours