ಜನರ ಸಮಸ್ಯೆಗಳ ಪರಿಹಾರಕ್ಕೆ 20 ಕಡೆ ಜನಸಂಪರ್ಕ ಸಭೆ: ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ: ಚಳ್ಳಕೆರೆ ವಿಧಾನಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಸುಮಾರು ಮೂರು ತಿಂಗಳಿನಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ಸರ್ಕಾರಿ ಸೌಲಭ್ಯ ತಲುಪಿಸುವ ಹಾಗೂ ಜನರ ಸಮಸ್ಯೆಗೆ ಸಕರಾತ್ಮಕವಾಗಿ ಸ್ಪಂದಿಸಲು ಒಟ್ಟು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೧೫, ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ೧೫ ಒಟ್ಟು ೨೦ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳ ಸ್ಪಂದನೆಯಾಗುತ್ತಿಲ್ಲವೆಂದು ಶಾಸಕ ಟಿ.ರಘುಮೂರ್ತಿ( T. Raghumurthy)ತಮ್ಮ ಅಸಮಧಾನವನ್ನು ಹೊರಹಾಕಿದರು.

ಅವರು, ಶನಿವಾರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳ ವಿಲೇವಾರಿ ಕುರಿತಂತೆ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಕ್ಷೇತ್ರದ ಶಾಸಕನಾಗಿ ಮತ್ತೊಮ್ಮೆ ಜನ ನನಗೆ ಮೂರನೇ ಬಾರಿಗೆ ಅಧಿಕಾರ ಕೊಟ್ಟಿದ್ದಾರೆ. ಮತದಾರರ ಋಣವನ್ನು ನಾನು ತೀರಿಸಲೇಬೇಕು. ಆದರೆ, ಅಧಿಕಾರಿ ವರ್ಗ ಮಾತ್ರ ಸಮಸ್ಯೆಗಳ ಪರಿಹಾರಕ್ಕೆ ಗಂಬೀರವಾಗಿ ಚಿಂತನೆ ನಡೆಸುತ್ತಿಲ್ಲ, ಸಮಸ್ಯೆಗಳ ಆಳವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದ್ಧಾರೆ, ಕೆಲವರು ಮೇಲಾಧಿಕಾರಿಗಳಿಗೆ ಪತ್ರ ಬರೆದು ಸುಮ್ಮನೆ ಕೂತಿದ್ದಾರೆ ಹೀಗಾದರೆ ಜನ ನಮ್ಮ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಅಧಿಕಾರಿ ವರ್ಗದವರನ್ನೂ ಸಹ ನಂಬುವ ಸ್ಥಿತಿಯಲ್ಲಿ ಜನರಿಲ್ಲ, ಅದ್ದರಿಂದ ನೀವು ನಿಮ್ಮ ಕೆಲಸ ಕಾರ್ಯಗಳ ಮೂಲಕ ಜನರ ವಿಶ್ವಾಸವನ್ನು ಗಳಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಮಾತ್ರ ನಿಮಗೂ ಗೌರವ, ಸರ್ಕಾರಕ್ಕೂ ಗೌರವ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಡಿ.೧೫ರಂದು ಸಭೆ ನಡೆಸಿ ಅಂದು ಕೂಲಂಕುಷವಾಗಿ ಪ್ರತಿಯೊಂದು ಅರ್ಜಿಯ ವಿಲೇವಾರಿ ಹಾಗೂ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸುವೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸುವೆ: ಪೂರ್ಣಿಮಾ ಶ್ರೀನಿವಾಸ್
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ, ಬೆಳೆ ವೈಪಲ್ಯದ ಹಿನ್ನೆಲೆಯಲ್ಲಿ ಗೋಶಾಲೆ ತೆರೆಯುವಂತೆ ಈಗಾಗಲೇ ಸಂಬAಧಪಟ್ಟ ಸಚಿವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಗೋಶಾಲೆ ಆರಂಭಕ್ಕೆ ಈಗ ಪಶುವೈದ್ಯ ಇಲಾಖೆಗೆ ಅನುಮತಿ ಲಭ್ಯವಾಗಿದೆ. ಗೋಶಾಲೆಗೆ ಮೇವು ಖರೀದಿಸಲು ಇಲಾಖೆಗೆ ಸರ್ಕಾರ ೧೦ ಲಕ್ಷ ಹಣವನ್ನು ಬಿಡುಗಡೆಗೊಳಿಸಿದ್ದು, ಅಧಿಕಾರಿಗಳು ಕಾನೂನು ಪ್ರಕಾರ ಟೆಂಡರ್ ಕರೆದು ಜಾನುವಾರುಗಳಿಗೆ ಮೇವು ಸಬರಾಜು ಮಾಡುವಂತೆ ಸೂಚನೆ ನೀಡಿದರು..

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೃಹ ಲಕ್ಷ ಪಲಾನುಭವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಶೇ. ೯೫ ಸಾಧನೆಯತ್ತ ನಾವು ಹೆಜ್ಜೆ ಇಟ್ಟಿದ್ದೇವೆಂದರು. ಸಿಡಿಪಿಒ ಹರಿಪ್ರಸಾದ್ ಮಾಹಿತಿ ನೀಡಿ, ಪ್ರಸ್ತುತ ನವೆಂಬರ್ ಅಂತ್ಯಕ್ಕೆ ೩೩೧೬ ಹೊಸ ಅರ್ಜಿದಾರರಿಗೆ ಹಣ ಲಭಿಸಲಿದೆ, ೧೯೮೪ ಅರ್ಜಿಗಳು ಇನ್ನೂ ನೊಂದಾವಣೆಯಾಗಬೇಕಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಹಿತಿ ನೀಡಿ, ಇತ್ತೀಚೆಗೆ ಹೊಸದಾಗಿ ೮೪ ಹೊಸ ಶಿಕ್ಷಕರನ್ನು ನೇಮಿಸಿ ಆದೇಶ ನೀಡಿದೆ ಆ ಪೈಕಿ ೭೪ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ಧಾರೆ. ೧೦ ಶಿಕ್ಷಕರ ಸಿಂಧುತ್ವ ಪರಿಶೀಲನೆಯಲ್ಲಿದೆ, ೪೬ ಅತಿಥಿ ಶಿಕ್ಷಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದು, ಸಧ್ಯದ ಸ್ಥಿತಿಯಲ್ಲಿ ಶಿಕ್ಷಕರ ಸಮಸ್ಯೆ ನಿವಾರಣೆಯಾಗಿದೆ ಎಂದರು. ಆಹಾರ ಶಿರಸ್ಥೇದಾರ್ ವೀರಣ್ಣ ಮಾಹಿತಿ ನೀಡಿ, ೪೬೮೨೨ ಅರ್ಜಿಗಳು ನೊಂದಾವಣೆಯಾಗಿದ್ದು ೪೪೫೪೩ ಅರ್ಜಿಗಳನ್ನು ವಿಲೇ ಪಡಿಸಲಾಗಿದ್ದು ೨೨೭೯ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಡಿ.೨೦ರ ತನಕ ತಿದ್ದುಪಡಿ ಮತ್ತು ಕೈವೈಸಿಕೆ ಅನುಮತಿ ನೀಡಲಾಗಿದೆ ಎಂದರು.
ಪರಶುರಾಮಪುರ ವಿಭಾಗದಲ್ಲಿ ರೈತರಿಂದ ದಾರಿ ಸಮಸ್ಯೆಯ ಬಗ್ಗೆ ೬೦ ಅರ್ಜಿಗಳು ಬಂದಿದ್ದು, ದಾರಿ ವಿಚಾರದಲ್ಲಿ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾರವರಿಗೆ ಸೂಚನೆ ನೀಡಿದ ಶಾಸಕರು ತಹಶೀಲ್ಧಾರ್‌ರೊಡನೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಡುವಂತೆ ಸೂಚಿಸಿದರು. ಠಾಣಾ ವೃತ್ತ ನಿರೀಕ್ಷಕ ಫಕೃದ್ದೀನ್ ದೇಸಾಯಿಯವರಿಗೆ ಕಸಬಾ ಹೋಬಳಿ ಮಟ್ಟದಲ್ಲಿ ರೈತರಿಗೆ ಜಮೀನಿಗೆ ಓಡಾಡಲು ದಾರಿ ಸಮಸ್ಯೆಗೆ ತಹಶೀಲ್ಧಾರ್‌ರೊಡನೆ ತಾವು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಪ್ರಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಶಿಧರ ಸ್ವಾಗತಿಸಿದರು, ತಹಶೀಲ್ಧಾರ್ ರೇಹಾನ್ ಪಾಷ, ಎಇಇ ಎನ್.ಕಾವ್ಯ, ವಿಜಯಭಾಸ್ಕರ್, ದಯಾನಂದ, ಕೃಷಿ ಇಲಾಖೆ ಜೆ.ಅಶೋಕ್, ತೋಟಗಾರಿಕೆ ವಿರೂಪಾಕ್ಷಪ್ಪ, ಪಶುವೈದ್ಯ ಇಲಾಖೆ ರೇವಣ್ಣ, ಬೆಸ್ಕಾಂ ಇಲಾಖೆ ರಾಜು, ಬಿಸಿಎಂ ಅಧಿಕಾರಿ ದಿವಾಕರ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ಶಿವರಾಜು, ಸಣ್ಣ ನೀರಾವರಿ ಇಲಾಖೆ ಅಣ್ಣಪ್ಪ, ರವಿಕುಮಾರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours