ಹೊಳಲ್ಕೆರೆ ತಾಲ್ಲೂಕು ಕಚೇರಿ ಮುಂಭಾಗ ಅಪರಿಚಿತ ಶವ ಪತ್ತೆ

 

ವರದಿ: ಅಮಿತ್ ಸೊಂಡೇಕೆರೆ

ಹೊಳಲ್ಕೆರೆ ತಾಲ್ಲೂಕು ಕಚೇರಿ ಮುಂಭಾಗ ಅಪರಿಚಿತ ಶವ ಪತ್ತೆ : ಪ್ರಕರಣ ದಾಖಲು

ಹೊಳಲ್ಕೆರೆ ತಾಲ್ಲೂಕು ಕಚೇರಿ ಮುಂಭಾಗ 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

ಇನ್ನೂ ಹೊಳಲ್ಕೆರೆ ತಾಲ್ಲೂಕು ಕಚೇರಿ ಮುಂಬಾಗ ವ್ಯಕ್ತಿಯೊಬ್ಬ ಪೆಬ್ರವರಿ 23 ರಂದು ಬೆಳಿಗ್ಗೆ ಮದ್ಯಪಾನ‌ ಮಾಡಿಕೊಂಡು ತೂರಾಡುತ್ತ ಬೀಳುವುದು‌ ಏಳುವುದು ಮಾಡುತ್ತಿದ್ದನು..ಆದರೆ ಸಂಜೆಯೊಳಗೆ ಆವ್ಯಕ್ತಿ ಸಾವನ್ನಪಿದ್ದಾನೆ ಮೃತ ವ್ಯಕ್ತಿ ಯಾರೇಂಬುದು ತಿಳಿದು ಬಂದಿಲ್ಲ ಆದರೆ ಮೃತ ವ್ಯಕ್ತಿಯ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ಪ್ರೇಮ್ ಜಿತ್ ದೇಶ್ ಮುಖ್ ರಜಪೂತ್ ಎಂಬ ಹಚ್ಚೆಯ ಗುರುತು ಇದ್ದು ಮೃತ ದೇಹದ ಮೇಲೆ ಬಿಳಿ ಗೀರಿನ ಆಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸುತ್ತಾರೆ… ಇನ್ನೂ ಈ ಮೃತ ವ್ಯಕ್ತಿಯ ವಾರಸುದಾರರು ಇದ್ದರೆ ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಪರ್ಕಿಸಲು ತಿಳಿಸಿದ್ದಾರೆ….ಇನ್ನೂ ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

[t4b-ticker]

You May Also Like

More From Author

+ There are no comments

Add yours