ಹೊನ್ನಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ

 

ಕೊಠಡಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಗುರುವಾರ ರಾತ್ರಿ ವಾಸ್ತವ್ಯ ಹೂಡಿದರು

ಹೊನ್ನಾಳಿ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪತ್ನಿ ಸುಮಾ ಅವರೊಂದಿಗೆ ಕೋವಿಡ್‌ ಕೇಂದ್ರದಲ್ಲಿ ವಾಸ್ತವ್ಯ ಮಾಡುವ ಮೂಲಕ ಸೋಂಕಿತರ ಆತ್ಮ  ವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ

ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇಂದ್ರದಲ್ಲಿ ಗುರುವಾರ ರಾತ್ರಿ ವಾಸ್ತವ್ಯ ಹೂಡಿರುವ ಶಾಸಕರು, ಶನಿವಾರದವರೆಗೂ ಇಲ್ಲಿಯೇ ಇರಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸ್ತವ್ಯ ಮಾಡಿದ್ದು, ಇದೊಂದು ವಿಶೇಷ ಅನುಭವವಾಗಿದೆ. ಇಲ್ಲಿ ವಾಸ್ತವ್ಯ ಮಾಡುವುದರಿಂದ ಸೋಂಕಿತರು ಸೇವಿಸುವ ಆಹಾರದ ಗುಣಮಟ್ಟದ ಜೊತೆಗೆ, ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಾರೆ ಎಂಬುದೂ ತಿಳಿಯಿತು. ಸೋಂಕಿತರಿಗೆ ಮನರಂಜನೆ ನೀಡುವ ಮೂಲಕ ಆತ್ಮಸ್ಥೈರ್ಯ ತುಂಬಲು ಮತ್ತು ಸೋಂಕಿತರ ನೋವು ಕಡಿಮೆ ಮಾಡುವ ಉದ್ದೇಶಕ್ಕಾಗಿ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಬೆಳಿಗ್ಗೆ ಯೋಗಾಭ್ಯಾಸ ಮಾಡಿದ ಶಾಸಕರು, ಅಡುಗೆ ಸಿಬ್ಬಂದಿಯೊಂದಿಗೆ ಸೇರಿ ತಿಂಡಿ ತಯಾರಿಸಿದರು. ಸೋಂಕಿತರಿಗೆ ಉಪಾಹಾರ ಬಡಿಸಿದರು.

[t4b-ticker]

You May Also Like

More From Author

+ There are no comments

Add yours