ಸಚಿವ ಸಂಪುಟ ಸರ್ಕಸ್ 10 ಶಾಸಕರು ಇನ್ , 6 ಸಚಿವರು ಔಟ್ ಸಾಧ್ಯತೆ?

 

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಆರೇಳು ತಿಂಗಳುಳಿಂದ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಸದ್ದು ಮಾಡುತ್ತಲೇ ಇದೆ. ಆದರೆ ಯಾವುದು ಸಹ ಟೇಕಫ್ ಆಗುತ್ತಿಲ್ಲ. ಶಾಸಕರು ಸಚಿವ ಸ್ಥಾನಕ್ಕೆ ತನ್ನದೇ ರೀತಿಯಲ್ಲಿ ಲಾಭಿ ಮಾಡುವುದು ಹಾಗೇ ಸುಮ್ಮನೆ ಆಗುವುದು ಆಗಿದೆ. ಇದರಿಂದ ಎಂದು ಆಗುತ್ತದೆಯೋ ಆಗಲಿ ಎಂಬ ಹಂತಕ್ಕೆ ಕೇಲ ಶಾಸಕರು ಬಂದು ನಿಂತಿದ್ದಾರೆ. ಇಂತಹ ಹೊತ್ತಲ್ಲಿ ಕೇಂದ್ರದ ಗೃಹ ಸಚಿವ ಚುನಾವಣಾ ಚಾಣಕ್ಯರಾದ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಗರಿಗೆದರಿದೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಸರ್ಜರಿ ಮಾಡುವ  ಉದ್ದೇಶವನ್ನು ಸಿಎಂ ಬೊಮ್ಮಾಯಿ ಹೊಂದಿದ್ದಾರೆ.ಸದ್ಯ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ನಾಲ್ಕರಿಂದ ಆರು ಮಂದಿ ಹಾಲಿ ಸಚಿವರನ್ನು ಕೈಬಿಡುವ ಮೂಲಕ ಹೆಚ್ಚೂ ಕಡಿಮೆ ಹತ್ತು ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಂ ಬೊಮ್ಮಾಯಿ ದೆಹಲಿಗೆ ಹಾರಿದ್ದಾರೆ ಎಂಬ ಮಾತು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೊಮ್ಮಾಯಿ ದೆಹಲಿ ಫ್ಲೈಟ್ ಇಳಿದ ಮೇಲೆ ಎಲ್ಲಾವೂ ನಿರ್ಧರವಾಗಲಿದೆ. ಅಲ್ಲಿಯವರೆಗೂ ಎಲ್ಲಾವನ್ನು ಕಾದುನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours