ಆಮ್ಮ‌ಆದ್ಮಿ ಪಾರ್ಟಿಯ ಸಿಎಂ ಅಭ್ಯರ್ಥಿ ಆಗುತ್ತಾರ ಆ ಐಪಿಎಸ್ ಅಧಿಕಾರಿ.?

 

ರಾಜ್ಯದ ಯುವಕರು ಮತ್ತು ಮಹಿಳೆಯರು ಬದಲಾವಣೆಯನ್ನು ಬಯಸಿದ್ದಾರೆ. ಶುದ್ಧ ಆಡಳಿತ ಕರ್ನಾಟಕಕ್ಕೆ ಅಗತ್ಯ ಇದ್ದು, ದೆಹಲಿಯು ಸಿದ್ಧ ಮಾದರಿಯನ್ನೇ ಅಲ್ಲಿ ಕೂಡ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದು ಎಎಪಿ ಪಕ್ಷ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಬಾಸ್ಕರ್ ರಾವ್  ಹೇಳಿದರು.

ಇದು ಸೋಮವಾರ ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿ  ದೆಹಲಿಯಲ್ಲಿ ಆಪ್​ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸಮ್ಮುಖದಲ್ಲಿ ಅವರು ಆಮ್​ ಆದ್ಮಿ ಪಕ್ಷ​ ಸೇರಿದರು.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿದ ಆರೋಗ್ಯ, ಶಾಲೆ ಮತ್ತು ಸಾರಿಗೆ ಇತ್ಯಾದಿ ಸುಧಾರಿತ ಕೆಲಸಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ದೆಹಲಿಯಂತೆ ಕರ್ನಾಟಕದಲ್ಲೂ ಪ್ರತಿ ಹಂತದಲ್ಲೂ ಸುಧಾರಣೆ ಆಗಬೇಕಾದ ಅನಿವಾರ್ಯತೆ ಇದೆ. ಈ ಕೆಲಸ ಮಾಡಲು ದೆಹಲಿಯೇ ಸಿದ್ಧ ಮಾದರಿಯಾಗಿದ್ದು, ಅದರಲ್ಲಿ ಸ್ವಲ್ಪವನ್ನು ಅನುಷ್ಠಾನ ಮಾಡಿದರೆ ಕರ್ನಾಟಕ ಮತ್ತಷ್ಟು ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟರು.

ಸಿಎಂ ಅಭ್ಯರ್ಥಿಯೇ?: ಕರ್ನಾಟಕದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂಬ ಪ್ರಶ್ನೆಗೆ ಭಾಸ್ಕರ್ ರಾವ್, ಆಡಳಿತಾತ್ಮಕ ಮಟ್ಟದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುವ ಅಗತ್ಯವಿದೆ. ಕರ್ನಾಟಕದ ಯುವಕರು ಬದಲಾವಣೆ ಬಯಸಿದ್ದಾರೆ. ದೆಹಲಿಯ ಮಾದರಿಯಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕಿದೆ ಎಂದರು. ಇದೇ ವೇಳೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತೀರಾ ಎಂಬ ಪ್ರಶ್ನೆಗೆ ಇದನ್ನು ಪಕ್ಷ ನಿರ್ಧರಿಸುತ್ತದೆ. ಈಗಲೇ ಎಲ್ಲ ಹೇಳುವುದು ಕಷ್ಟ ಎಂದು ಪ್ರತಿಕ್ರಿಯಿಸಿದರು.

 

[t4b-ticker]

You May Also Like

More From Author

+ There are no comments

Add yours