ಶ್ರಾವಣ ಮಾಸಕ್ಕೆ ಮಡಿವಾಳ ಮಾಚಿದೇವ ಪೀಠದಿಂದ ‘ಮನ ಮನೆ ಮಾಚಿದೇವ ಕಾರ್ಯಕ್ರಮ.

 

ಚಳ್ಳಕೆರೆ-14: ಪ್ರತಿವರ್ಷದ ಶ್ರಾವಣ ಮಾಸದಲ್ಲಿ ಮಡಿವಾಳ ಮಾಚಿದೇವ ಪೀಠದಿಂದ ‘ಮನ ಮನೆ ಮಾಚಿದೇವ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಮುದಾಯದ ಸಂಘಟನೆ ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ವರ್ಷದ ಶ್ರಾವಣ ಮಾಸದ ಕಾರ್ಯಕ್ರಮ ಚಳ್ಳಕೆರೆ ತಾಲ್ಲೂಕಿನಿಂದಲೇ ಪ್ರಾರಂಭಿಸಲಾಗುವುದು ಎಂದು ಚಿತ್ರದುರ್ಗ ಮಡಿವಾಳ ಪೀಠದ ಬಸವ ಮಾಚಿದೇವ ಸ್ವಾಮೀಜಿ ತಿಳಿಸಿದರು.
ಅವರು, ಕಾರ್ಯಕ್ರಮದ ನಿಮಿತ್ತ ಇಲ್ಲಿನ ಸಂಘದ ಜಿಲ್ಲಾ Sಜಾಂಚಿ ನಾಗರಾಜರವರ ಮನೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊರೋನಾ ಮರೆಯಾಗುತ್ತಿದ್ದು, ಜನರಲ್ಲಿ ಎಂದಿನಂತೆ ಲವಲವಿಕೆ ಪ್ರಾರಂಭವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರಕಿದ್ದು, ಮಡಿವಾಳ ಮಾಚಿದೇವ ಪೀಠದ ಸಹ ಸಮುದಾಯ ಭಕ್ತರ ಹಿತಕ್ಕಾಗಿ ಶ್ರಾವಣ ಮಾಸದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಗಸ್ಟ್ 9ರ ಸೋಮವಾರ ತಾಲ್ಲೂಕಿನ ನಗರಂಗೆರೆ ಗ್ರಾಮದಲ್ಲಿ ಪ್ರಾರಂಭಿಸಿ ಐದು ದಿನಗಳ ಕಾಲ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ಭಕ್ತರ ಸಹಕಾರದಿಂದ ನಡೆಸಲಾಗುವುದು. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಅಂತಿಮಗೊಳಿಸಿದ ನಂತರ ಜಿಲ್ಲಾ ಕೇಂದ್ರದಲ್ಲೂ ಸಹ ಜಿಲ್ಲಾ ಮಟ್ಟದ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ತಾಲ್ಲೂಕು ಅಧ್ಯಕ್ಷ ಎನ್.ಮಂಜುನಾಥ ಮಾತನಾಡಿ, ಸ್ವಾಮೀಜಿಯವರ ಸೂಚನೆಯಂತೆ ತಾಲ್ಲೂಕಿನ ಆಯ್ದ ಐದು ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ಸಮುದಾಯದ ಮುಖಂಡ ಮಾರ್ಗದರ್ಶನ ಪಡೆದು ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ರಾಮಜ್ಜ, ಪ್ರೊ.ಬಸವರಾಜು, ಜಿಲ್ಲಾ ಕಾರ್ಯದರ್ಶಿ ಮಂಜುನಾಥ, ತಾಲ್ಲೂಕು ಉಪಾಧ್ಯಕ್ಷ ಪುಟ್ಟಲಿಂಗಪ್ಪ, ಖಜಾಂಚಿ ಆರ್ಟ್‍ಸನ್ಸ್ ಪ್ರಕಾಶ್, ಮುಖಂಡರಾದ ಪಗಡಲಬಂಡೆ ನಾಗೇಂದ್ರಪ್ಪ, ರುದ್ರಮುನಿ, ರಾಜಣ್ಣ, ಓಂಕಾರಪ್ಪ, ರಾಮಣ್ಣ, ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours