ವಿಕಲಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಅಹ್ವಾನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

 

ಚಿತ್ರದುರ್ಗ,ನವೆಂಬರ್02:
ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ 2021-22 ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ನಂತರ (post metric)  ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು,  ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಕಡ್ಡಾಯವಾಗಿ ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್‍ನಲ್ಲಿ https://ssp.postmatric.karnataka.gov.in./2021/
ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ತಮ್ಮ ವ್ಯಾಪ್ತಿಗೊಳಪಡುವ ಗ್ರಾಮೀಣ, ನಗರ, ವಿವಿದೊದ್ದೇಶ ಪುನರ್ವವಸತಿ ಕಾರ್ಯಕರ್ತರಲ್ಲಿ ಅರ್ಜಿ ನೀಡಬೇಕು.
ಮಾಹಿತಿಗಾಗಿ ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ಎನ್. ಮೈಲಾರಪ್ಪ 9880821934, ಚಳ್ಳಕೆರೆ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ನರಸಿಂಹ ಮೂರ್ತಿ 9611266930, ಹಿರಿಯೂರು ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ಕೆ.ಬಸವರಾಜ್ 9902888901, ಹೊಳಲ್ಕೆರೆ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ರಾಘವೇಂದ್ರ 9740030227, ಹೊಸದುರ್ಗ ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ಫಯಾಜ್ ಅಹಮ್ಮದ್ 9741829990, ಮೊಳಕಾಲ್ಮೂರು ತಾಲ್ಲೂಕು ಪಂಚಾಯತ್ ಎಂಆರ್‍ಡಬ್ಲ್ಯೂ ದಾದಾಪೀರ್ 9742725576 ಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳ ಕಚೇರಿ, ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ ಚಿತ್ರದುರ್ಗ ದೂರವಾಣಿ ಸಂಖ್ಯೆ:08194-235284ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours