ರಾಜ್ಯ ವಿಧಾನವ ಪರಿಷತ್ ಚುನಾವಣೆಯಲ್ಲಿ ಶ್ರೀಮಂತ ಅಭ್ಯರ್ಥಿ.

 

ಬೆಂಗಳೂರು:  ರಾಜ್ಯ  ವಿಧಾನ  ಪರಿಷತ್‌ ಚುನಾವಣೆಯಲ್ಲಿ ಕಣದಲ್ಲಿರುವ  ಅಭ್ಯರ್ಥಿಗಳಲ್ಲಿ  ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಉದ್ಯಮಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಅತ್ಯಂತ ಶ್ರೀಮಂತ ಅಭ್ಯರ್ಥಿ.

ಯೂಸುಫ್ ಷರೀಫ್ ಅವರು 5ನೇ ತರಗತಿವರೆಗೆ ಓದಿದ್ದು, ಅವರಿಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ.

ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ತಮ್ಮ  ಬಳಿ ಇರುವ ಆಸ್ತಿ ವಿವರ ಹೀಗಿದೆ   ₹97.98 ಕೋಟಿ ಮೌಲ್ಯದ ಚರಾಸ್ತಿ, ₹1,643.59 ಕೋಟಿ ಮೌಲ್ಯದ ಸ್ಥಿರಾಸ್ತಿ, ಇಬ್ಬರ ಪತ್ನಿಯರ ಪೈಕಿ, ಮೊದಲ ಪತ್ನಿಯ ಬಳಿ ₹98.96 ಲಕ್ಷ ಮೌಲ್ಯದ ಚರಾಸ್ತಿ, ₹1.07 ಕೋಟಿ ಮೌಲ್ಯದ ಸ್ಥಿರಾಸ್ತಿ, ಎರಡನೇ ಪತ್ನಿಯ ಬಳಿ ₹32.22 ಲಕ್ಷ ಮೌಲ್ಯದ ಚರಾಸ್ತಿ ಇದೆ. ತಮಗೆ ₹64.24 ಕೋಟಿ ಸಾಲವಿದೆ ಎಂದು ಘೋಷಿಸಿದ್ದದಾರೆ.

ತಮ್ಮ ಮೊದಲ ಪತ್ನಿಯ ಬ್ಯಾಂಕ್‌ ಖಾತೆಯಲ್ಲಿ ₹16.99 ಲಕ್ಷ ಹಣವಿದೆ. ಅಲ್ಲದೆ, ₹1.65 ಲಕ್ಷ ಮೌಲ್ಯದ ವಾಹನ, ₹77.15 ಲಕ್ಷ ಮೌಲ್ಯದ ಚಿನ್ನಾಭರಣವಿದೆ. ಎರಡನೇ ಪತ್ನಿಯ ಹೆಸರಿನಲ್ಲಿ ₹30.37 ಲಕ್ಷ ಹಾಗೂ ಒಟ್ಟು ಐವರು ಮಕ್ಕಳ ಪೈಕಿ ಮೊದಲ ಮಗಳ ಹೆಸರಿನಲ್ಲಿ ₹58.73 ಲಕ್ಷ ಮೌಲ್ಯದ ಚಿನ್ನಾಭರಣವಿದೆ ಎಂದೂ ಅವರು ಘೋಷಿಸಿಕೊಂಡಿದ್ದಾರೆ. ನಗರದ ಯಲಹಂಕ ನ್ಯೂಟೌನ್‌, ಜಯನಗರ, ಹಲಸೂರು ಮತ್ತು ಕಾಟನ್‌ಪೇಟೆ ಪೊಲೀಸ್‌ ಠಾಣೆಗಳಲ್ಲಿ ತಲಾ ಒಂದೊಂದು ಅಪರಾಧ ಪ್ರಕರಣ ಇವರ ವಿರುದ್ಧ ದಾಖಲಾಗಿದೆ. ಆದಾಯ ತೆರಿಗೆ ₹13.43 ಕೋಟಿ ಪಾವತಿ ಬಾಕಿ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಇನ್ನೂ ಆರಂಭ ಆಗಿಲ್ಲ ಎಂದೂ ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ

[t4b-ticker]

You May Also Like

More From Author

+ There are no comments

Add yours