ಯೋಗದಿಂದ ರೋಗ ನಿರೋಧಕ್ತ ಶಕ್ತಿ ಹೆಚ್ಚಿಸಿಕೊಳ್ಳಬಹುದು ” : ರೋಷನ್ ಜಮೀರ್.

 

ಹಿರಿಯೂರು : ” ನಿರಂತರ ಯೋಗಾಸನ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಂದ ದೂರ ಉಳಿಯಬಹುದು ” ಎಂದು ಡಿ.ವೈ.ಎಸ್. ಪಿ. ರೋಷನ್ ಜಮೀರ್ ಅಭಿಪ್ರಾಯ ಪಟ್ಟರು. ಅವರು ಸೋಮವಾರ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ನಡೆಸಿದೆ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
” ಪೂರ್ವಜರು ತಮ್ಮ ದಿನ ನಿತ್ಯದ ಕಾರ್ಯಕ್ರಮಗಳಲ್ಲಿ ಒಂದಿಷ್ಟು ಸಮಯವನ್ನು ದೈಹಿಕ ಕಸರತ್ತು ಹಾಗೂ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿರಸುತ್ತಿದ್ದರು ಇದರಿಂದ ನಾವು ಅವರನ್ನು ದೀರ್ಘಾಯುಷ್ಯ ಆಗಿರುವುದನ್ನು ಕಂಡಿದ್ದೇವೆ ಎಂದರು. “ಮಾನಸಿಕ ಒತ್ತಡದಿಂದ ಮುಕ್ತಿ ದಿನ ನಿತ್ಯದ ಕಾರ್ಯಗಳಲ್ಲಿ ಉತ್ಸಾಹ ತುಂಬುವಂತ ಯೋಗದ ಕಲೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು ” ಎಂದರು.
ಇನ್ಸ್ಫೆಕ್ಟರ್ ಶಿವಕುಮಾರ್ ಮಾತನಾಡಿ ” ಹಲವು ಒತ್ತಡಗಳ ಮದ್ಯೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುವ ಪೋಲೀಸ್ ಸಿಬ್ಬಂದಿ ಯೋಗ ಪ್ರಾಣಯಾಮ, ಧ್ಯಾನ ಗಳಂತಹ ಹವ್ಯಾಸಗಳನ್ನು ಬೆಳಿಸಿಕೊಳ್ಳಬೇಕು ” ಎಂದರು.
” ಮಲ್ಲಾಡಿಹಳ್ಳಿ ಸ್ವಾಮೀಜಿ, ವರನಟ ಡಾ: ರಾಜ್ ಕುಮಾರ್ ರವರಂತಹವರು ‘ಯೋಗಕ್ಕೆ ಒಂದು ಇಮೇಜ್ ತಂದುಕೊಟ್ಟರು, ನಿರಂತರ ಅಭ್ಯಾಸದಿಂದ ಯೋಗದಲ್ಲಿ ಪರಿಣಿತ ಪಡೆದು ಆರೋಗ್ಯವಂತರಾಗಿ ಬದುಕಬಹುದು ” ಎಂದರು.
ಕಾರ್ಯಕ್ರಮದಲ್ಲಿ ಸಿ.ಪಿ.ಐ.ರಾಘವೇಂದ್ರ, PSI ಗಳಾದ ಕೆ.ಅನುಸೂಯ, ಕ್ರೈಂ ಪಿ.ಎಸ್. ಐ.ಅನುಸೂಯ ಸಿಬ್ಬಂದಿಗಳಾದ ಚಿದಾನಂದ, ಮಹೇಂದ್ರ,ಮಹಂತೇಶ್,ವಸಂತ್, ತಿಮ್ಮರಾಯಪ್ಪ, ಅನೀಫ್, ಮತ್ತಿರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours