ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ವರ್ಧೆ ಸಾಧ್ಯತೆ ?

 

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಇನ್ನು ಎರಡು ವರ್ಷ ಚುನಾವಣೆ ಇರುವಾಗಲೇ ನಾಯಕರುಗಳು ಯಾವ ಕಗಷೇತ್ರ ಸೇಫ್ ಎಂದು ಹುಡುಕುತ್ತಿದ್ದಾರೆ. ಆದರೆ ಹೆಚ್ಚು ಸದ್ದು ಮಾಡುತ್ತಿರುವ ಕ್ಷೇತ್ರ ಚಾಮರಾಜಪೇಟೆ. ಈ   ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಸಮಾಧಾನಪಡಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸದ್ಯ ಬಾದಾಮಿ ಕ್ಷೇತ್ರದಲ್ಲಿದ್ದು  ಆಮೇಲೆ ಯೋಚನೆ ಮಾಡೋಣ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ  ಚರ್ಚೆಗೆ ಗ್ರಾಸವಾಗಿದೆ. ಶಾಸಕ ಜಮೀರ್‌ ಅಹಮ್ಮದ್‌ ಚಾಮರಾಜಪೇಟೆ ಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರು, ಬಡ ಕುಟುಂಬದವರಿಗೆ ಆಹಾರ ಕಿಟ್‌ ವಿತರಿಸುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ಮಾತನಾಡಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಜನರಿಗೆ ನೆರವಾಗುವಂತೆ ನಮ್ಮ ಶಾಸಕರಿಗೆ ಸೂಚಿಸಲಾಗಿತ್ತು. ಅದರಂತೆ ಎಲ್ಲ ಶಾಸಕರು ನೆರವು ನೀಡುತ್ತಿದ್ದಾರೆ ಎಂದರು. ಚಾಮರಾಜಪೇಟೆ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಪದೇ ಪದೇ ಪಾಲ್ಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಮೀರ್‌ ಪದೇ ಪದೇ ಕರೆಯುತ್ತಾರೆ. ಅದಕ್ಕಾಗಿ ಬರುತ್ತಿದ್ದೇನೆ. ಇದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜಮೀರ್‌ ಅಹಮ್ಮದ್‌ ಕೇಳುತ್ತಿದ್ದಾರೆ.

ಸುದ್ದಿಗಾರರು ಪದೇ ಪದೇ ಭೇಟಿ ಏಕೆ ಎಂದು ಪ್ರಶ್ನಿಸುತ್ತಿವೆ. ನಾನು ಸದ್ಯ ಬಾದಾಮಿ ಕ್ಷೇತ್ರದಲ್ಲೇ ಇದ್ದೇನೆ ಎಂದರು. ಆಗ ಜಮೀರ್‌ ಅಹಮ್ಮದ್‌ ಬೆಂಬಲಿಗರು, ಕಾರ್ಯಕರ್ತರು, ಚಾಮರಾಜಪೇಟೆ ಕ್ಷೇತ್ರಕ್ಕೆ ಬರಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಲಾರಂಭಿಸಿದರು. ಬಳಿಕ ಸಿದ್ದರಾಮಯ್ಯ, ”ಈಗ ಬಾದಾಮಿ ಕ್ಷೇತ್ರದಲ್ಲಿ ಶಾಸಕನಾಗಿದ್ದೇನೆ. ನಂತರ  ಅದರ ಬಗ್ಗೆ ಯೋಚನೆ ಮಾಡೋಣ,” ಎಂದು ಹೇಳಿ ಸಮಾಧಾನಪಡಿಸಿದರು.

[t4b-ticker]

You May Also Like

More From Author

+ There are no comments

Add yours