ಮೀಸಲಾತಿಗಾಗಿ ಶ್ರೀ ಪ್ರಸನ್ನನಂದ ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ನಾಯಕ ಜನಾಂಗ ಪೂರ್ಣ ಬೆಂಬಲ:ಬಿ.ಕಾಂತರಾಜ್

 

ಚಿತ್ರದುರ್ಗ ಏ. ೩
ಮೀಸಲಾತಿಗಾಗಿ ಶ್ರೀ ಪ್ರಸನ್ನನಂದ ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ನಾಯಕ ಜನಾಂಗ ಪೂರ್ಣ ಪ್ರಮಾಣದಲ್ಲಿ ಬೆಂಬಲವನ್ನು ನೀಡಬೇಕಿದೆ. ಅವರು ಹೋರಾಟ ಮಾಡುತ್ತಿರುವುದು ನಮ್ಮಗಾಗಿ ಹೊರೆತು ಅವರಿಗಾಗಿ ಅಲ್ಲ ಎಂಬುದನ್ನು ತಿಳಿಯಬೇಕಿದೆ ಎಂದು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.
ನಗರದ ಮದಕರಿ ವೃತ್ತದಲ್ಲಿ ಭಾನುವಾರ ನಾಯಕ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪುಣ್ಯಾನಂದಪುರಿ ಶ್ರೀಗಳರವರ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ನಮ್ಮಗಳ ಒಳಿತಿಗಾಗಿ ಶ್ರೀಗಳು ಬೆಂಗಳೂರಿನಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ ಅದು ಈಗಾಗಲೇ ೫೦ ದಿನ ದಾಟಿದೆ. ನ್ಯಾಯಾ ಸಿಗುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ. ಇದಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಸರ್ಕಾರ ನಮ್ಮ ಪಾಲಿನ ಮೀಸಲಾತಿಯನ್ನು ನೀಡಲೇಬೇಕಿದೆ ಇದಕ್ಕಾಗಿ ಗಡುವನ್ನು ಪಡೆದಿದೆ. ಚಿತ್ರದುರ್ಗದಿಂದ ನಾಯಕ ಜನಾಂಗದ ಪರವಾಗಿ ಏನೇ ಹೇಳಿಕೆ ಹೊರ ಬಿದ್ದರು ಸಹ ಅದು ಗಟ್ಟಿಯಾಗಿ ನಿಲ್ಲುತ್ತದೆ ಎಂಬ ನಂಬಿಕೆ ಇದೆ ಎಂದರು.
ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಮೇಲ್ಗಡೆ ವಾಲ್ಮೀಕಿ, ಶ್ರೀರಾಮ ಮತ್ತು ಅಂಜನೇಯರವರ ಭಾವಚಿತ್ರ ಮುಂದುಗಡೆ ಲವಕುಶರಿಗೆ ವಿದ್ಯಾಭ್ಯಾಸ ನೀಡುತ್ತಿರುವ ವಾಲ್ಮೀಕಿ, ಶ್ರೀರಾಮನ ಚಿತ್ರವನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆಯಾಗಿದೆ,  ಸರ್ಕಾರ ಮತ್ತು ನಗರಸಭೆವತಿಯಿಂದ ನಿರ್ಮಾಣ ಮಾಡಬೇಕಿದೆ ಅವರು ನಿರ್ಮಾಣ ಮಾಡದಿದ್ದರೆ ಸಮಾಜದವತಿಯಿಂದ ನಿರ್ಮಾಣ ಮಾಡಲಾಗುವುದು ಅನುಮತಿ ನಿಡಿದರೆ ಸಾಕು ಇದರ ನಿರ್ಮಾಣದ ಹೊಣೆಯನ್ನು ನಗರಸಭಾ ಸದಸ್ಯರಾದ ವೆಂಕಟೇಶ್ ಮತ್ತು ದೀಪಕ್ ರವರಿಗೆ ವಹಿಸಲಾಗುವುದೆಂದರು.
ಸಮುದಾಯ ಭವನದ ಪಕ್ಕದಲ್ಲಿ ಸ್ವಲ್ಪ ಜಾಗ ಇದೆ ಅಲ್ಲಿ ಶ್ರೀರಾಮ ವಾಲ್ಮೀಕಿ ಹಾಗೂ ಅಂಜನೇಯವರ ದೇವಾಲಯವನ್ನು ನಿರ್ಮಾಣ ಮಾಡಬೇಕಿದೆ. ಇಲ್ಲವಾದಲ್ಲಿ ಜಾಗ ವೇಸ್ಟ್ ಆಗಲಿದೆ ಇದಕ್ಕೆ ಎಲ್ಲರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಕಾಂತರಾಜ್ ಹೇಳಿದರು.
ತಿಪ್ಪೇಸ್ವಾಮಿ ಮಾತನಾಡಿ, ನಿಧನರಾದ ಶ್ರೀಗಳು ಸಮಾಜದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದರು ನಾಯಕ ಸಮಾಜ ಎಲ್ಲಾ ಸಮಾಜಕ್ಕಿಂತ ವಿಭೀನ್ನವಾಗಿರಬೇಕೆಂದು ಆಸೆಯನ್ನು ಪಟ್ಟವರಾಗಿದ್ದರು. ಭಕ್ತಾಧಿಗಳಿಗೆ ವಿವಿಧ ರೀತಿಯಲ್ಲಿ ಸಹಾಯವನ್ನು ಮಾಡಲು ಸಹಾ ಮುಂದಾಗಿದ್ದರು. ಈಗ ಪ್ರಸನ್ನಾನಂದ ಶ್ರೀಗಳು ಸಮಾಜದ ಗುರುಗಳಾಗಿದ್ದು ಅವರು ಮಾರ್ಗದರ್ಶನದಲ್ಲಿ ಸಮಾಜ ಮುನ್ನೆಡೆಯುತ್ತಿದೆ. ಅವರು ಸಹಾ ರಾಜ್ಯದ ವಿವಿಧೆಡೆಗಳಲ್ಲಿ ಸಂಚಾರವನ್ನು ಮಾಡುವುದರ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಿದ್ದು ಈಗ ಮೀಸಲಾತಿಗಾಗಿ ಹೋರಾಟವನ್ನು ಮಾಡುತ್ತಿದ್ದಾರೆ ಎಂದರು.
ಸಿರಿಗೆರೆ ತಿಪ್ಪಣ್ಣ ಮಾತನಾಡಿ, ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಮೀಸಲಾತಿ ಹೋರಾಟ ಈಗ ಬೃಹತ್ ಆಗಿ ಬೆಳೆದಿದೆ. ಸರ್ಕಾರ ಮನಸ್ಸು ಮಾಡಬೇಕಿದೆ ಆಗ ಮಾತ್ರ ನಮಗೆ ಮೀಸಲಾತಿಯ ಪ್ರಮಾಣ ಹೆಚ್ಚಾಗಲು ಸಾಧ್ಯವಿದೆ. ಸಮಾಜ ಸಂಘಟನೆಯಾಗಿದೆ. ಸಮಾಜದ ಕೆಲಸ ಮೌನವಾಗಿ ನಡೆಯಬೇಕಿದೆ. ಸರ್ಕಾರದಿಂದ ಸಮಾಜವನ್ನು ಗುರುತಿಸುವ ಕಾರ್ಯವಾಗಬೇಕಿದೆ. ಹಿಂದುಳಿದ ಸಮಾಜದಲ್ಲಿ ಬದಲಾವಣೆಯನ್ನು ಶ್ರೀ ಪಸನ್ನಾನಂದ ಶ್ರೀಗಳು ತರುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ವೆಂಕಟೇಶ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮುಖಂಡರಾದ ಅಶೋಕ ಬೆಳಗಟ್ಟ, ಸೋಮೇಂದ್ರ, ಗುರುಸಿದ್ದಪ್ಪ, ಪ್ರದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours