ಮಕ್ಕಳ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ದಿಗೆ :ಬಾಲ ಹಿತೈಷಿ ಯೋಜನೆ ಜಾರಿ.

 

ಬಾಲಹಿತೈಷಿ ಯೋಜನೆ ಜಾರಿ
******
ಚಿತ್ರದುರ್ಗ,ಜೂನ್17:
ಮಕ್ಕಳ ರಕ್ಷಣಾ ನಿರ್ದೇಶನಾಲಯ ವತಿಯಿಂದ ರಾಜ್ಯದಲ್ಲಿ ಕೋವಿಡ್-19 ವಿಪತ್ತಿನಿಂದ ಬಾದಿತ ಮಕ್ಕಳನ್ನು ಬೆಂಬಲಿಸಲು ಹೆಚ್ಚಿನ ಸಂದರ್ಭಗಳಲ್ಲಿ ಮಗುವಿಗೆ ಪಾಲನೆ ಮತ್ತು ರಕ್ಷಣೆ ಒದಗಿಸಲು ವಿಸ್ತೃತ ಕುಟುಂಬ, ಏಕಪೋಷಕರ ನೆರವಿದ್ದರೂ ಸಹ ತಂದೆ, ತಾಯಿಯರನ್ನು ಕಳೆದುಕೊಂಡ 18 ವರ್ಷದೊಳಗಿನ ಮಗುವನ್ನು ಮಾನಸಿಕ ಅಘಾತದಿಂದ ಹೊರತರಲು ಹಾಗೂ ಮಗುವಿನ ದೀರ್ಘಕಾಲಿಕ ಸಕಾರಾತ್ಮಕ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅನುವಾಗುವಂತೆ ಬಾಲಹಿತೈಷಿ (ಮಾರ್ಗದರ್ಶಕತ್ವ, ಮೆಂಟರ್‌ಶಿಷ್) ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.
ಇಬ್ಬರು ಪೋಷಕರು ಅಥವಾ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡು ಅಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಅತ್ಯುನ್ನತ ಸಾಮಾರ್ಥ್ಯವನ್ನು ಸಾಧಿಸಲು ಅವರಿಗೆ ಸಹಾಯ ಮಾಡಲು ಮತ್ತು ಮಗುವಿನ ಮಾರ್ಗದರ್ಶನ ನೀಡಲು ಉತ್ಸುಕರಾಗಿರುವ ಯಾವುದೇ ವ್ಯಕ್ತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನೊಂದಾಯಿಸಿಕೊಳ್ಳಬೇಕಾಗುತ್ತದೆ. ಮಾರ್ಗದರ್ಶಕರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ನಮೂನೆಯು (ಅನುಬಂಧ-1) ಮಕ್ಕಳ ರಕ್ಷಣಾ ನಿರ್ದೇಶನಾಲಯದ ವೆಬ್‌ಸೈಟ್ hಣಣಠಿ://iಛಿಠಿs.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಡಿಜಿಟಲ್ ಫಾರಂ ಲಭ್ಯವಿದ್ದು, ಇಚ್ಛೆಯುಳ್ಳ ಮಾರ್ಗದರ್ಶಕರು ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಚಿತ್ರದುರ್ಗ ದೂರವಾಣಿ ಸಂಖ್ಯೆ 08194-295822 ಮೊಬೈಲ್ ಸಂಖ್ಯೆ 9448070472, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ದೂರವಾಣಿ ಸಂಖ್ಯೆ 08194-295701,ಮೊಬೈಲ್ ಸಂಖ್ಯೆ 8970072609, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು 080-22115292, ಮಕ್ಕಳ ಆಪ್ತ ಸಮಾಲೋಚನಾ ಸಂಖ್ಯೆ 14499, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours