ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲು ಗೋಸಿಕೆರೆ ಹೊಸಕಪಿಲೆ ಶಾಲೆಯ ಶಿಕ್ಷಕರು ವಿಭಿನ್ನ ಐಡಿಯಾ ನೋಡಿ.

 

*ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲು ಗೋಸಿಕೆರೆ ಹೊಸಕಪಿಲೆ ಶಾಲೆಯ ಶಿಕ್ಷಕರು ವಿಭಿನ್ನ ಐಡಿಯಾ*..

ಚಳ್ಳಕೆರೆ : ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೆ ಜಾಸ್ತಿ ಅಂತಹದರಲ್ಲಿ ಗೋಸಿಕೆರೆ ಹೊಸಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟು ಸುಲಭ ರೀತಿಯಲ್ಲಿ ಅಕ್ಷರ ಅಭ್ಯಾಸ ಮಾಡಿಸಲು ಇಲ್ಲಿನ‌ ಶಿಕ್ಷಕರು ಮುಂದಾಗಿದ್ದಾರೆ…!!!

ಗೋಸಿಕೆರೆ ಹೊಸಕಪಿಲೆ ಶಾಲೆಯಲ್ಲಿ ಮಕ್ಕಳಿಗೆ ಕಲಿಯಲು ಬೇಕದ ಎಲ್ಲ ಅಕ್ಷರಗಳನ್ನು, ಪ್ರಪಂಚದ ಬಹುಮುಖ್ಯ ವಿಷಯಗಳ ಕುರಿತು, ವಿಜ್ಞಾನ ವಿಷಯಗಳ ಕುರಿತ ಮಾಹಿತಿ ನೀಡುವ ಚಿತ್ರಗಳನ್ನು ಶಾಲೆ ಗೋಡೆಯ ಮೇಲೆ ಬರೆಸಿದ್ದಾರೆ. ಇದರಿಂದ ಸುಲಭ ರೀತಿಯಲ್ಲಿ ಅಕ್ಷರಗಳು ಮಕ್ಕಳು ಕಲಿಯಲು ಸಹಾಯವಾಗುವಂತೆ ಕಾರ್ಯವನ್ನು ಗೋಸಿಕೆರೆ ಹೊಸಕಲಪಿಲೆ ಶಾಲೆಯ ಶಿಕ್ಷಕ ದಿನೇಶ್ ಮಾಡಿದ್ದಾರೆ.

ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರಿಗೆ ಕಲಿಯಲು ಅವಕಾಶವಿದೆ, ಶಾಲೆಯಲ್ಲಿ 30 ವಿದ್ಯಾರ್ಥಿ ಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯು ತಾಲ್ಲೂಕಿನಲ್ಲಿಯೇ ವಿಭಿನ್ನವಾದ ಶಾಲೆಯೆಂದರೆ ತಪ್ಪಾಗಲಾರದು, ಶಾಲೆ ಎಲ್ಲಾ ಗೋಡೆಗಳ ಮೇಲೆ ಕಲಿಕೆಯ ವಿಷಯಗಳ ಚಿತ್ರಗಳನ್ನು ರಚನೆ ಮಾಡಿಸಿ, ಮಕ್ಕಳ ಸುಲಭ ಕಲಿಕೆಗೆ ದಾರಿ ಮಾಡಿಕೊಡಲಾಗಿದೆ.

ಮಕ್ಕಳಿಗೆ ಕಂಪ್ಯೂಟರ್ ಕಲಿಕೆ: ಸರ್ಕಾರಿ ಶಾಲೆಗಳೆಂದರೆ ಎಲ್ಲರ ಮನಸ್ಸಲ್ಲಿ ಮೂಡುವುದು ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಬರುವುದಿಲ್ಲ, ಬಂದರು ನೆಟ್ಟಗೆ ಅಕ್ಷರ ಅಭ್ಯಾಸ ಮಾಡಿಸಲ್ಲ ಎಂದು ಹಳ್ಳಿಗಳಲ್ಲಿ ಸರ್ವೆ ಸಾಮಾನ್ಯವಾಗಿ ಮಾತನಾಡಿಕೊಳ್ಳುವುದೇ ಜಾಸ್ತಿ.


ಆದರೆ ಗೋಸಿಕೆರೆ ಹೊಸಕಪಿಲೆ ಶಾಲೆ ಅಕ್ಷರ ಅಭ್ಯಾಸಕ್ಕೂ ಸೈ, ಕಂಪ್ಯೂಟರ್ ಕಲಿಕೆಗೆ ಸೈ ಎನಿಸಿಕೊಂಡಿದೆ, ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಶಾಲೆ ಕಟ್ಟಡದ ಮೇಲೆ ಅಕ್ಷರಗಳು, ಇತರೆ ವಿಷಯಗಳ ಕುರಿತು ಮಾಹಿತಿ ನೀಡುವ ಚಿತ್ರಗಳ ರಚನೆ‌ ಮಾಡಲಾಗಿದೆ. ಮಕ್ಕಳಿಗೆ ಅ ಚಿತ್ರಗಳ ಬಗ್ಗೆ ಬರೆದಿರುವ ಅಕ್ಷರಗಳ ಬಗ್ಗೆ ಕೇಳಿದರೆ ಸಾಕು ಥಟ್ ಅಂತಹ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಶಾಲೆಯ ಶಿಕ್ಷಕರು ಶಿಕ್ಷಣದ ಜ್ಞಾನ ಮಕ್ಕಳಿಗೆ ನೀಡುತ್ತಿದ್ದಾರೆ ಶಿಕ್ಷಕ ದಿನೇಶ್.

ಶಾಲೆಯ ಆವರಣದಲ್ಲಿ ನಾಚುವಂತ ಪರಿಸರ: ಶಾಲೆಯ ಆವರಣದಲ್ಲಿ 30 ಕ್ಕು ಹೆಚ್ಚು ಗಿಡಗಳು ನೆಡಲಾಗಿದೆ. ಈ ಗಿಡಗಳ ಸುತ್ತಮುತ್ತ ಮಕ್ಕಳ ಆಟವಾಡಲು ಆಟದ ಸಾಮಾಗ್ರಿಗಳು ಕೂಡ ಆವರಣದಲ್ಲಿ ಇಡಲಾಗಿದೆ ಮಕ್ಕಳು ಆಟವಾಡಿ ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುವಂತಹ ವಾತವರಣವು ಕೂಡ ಇದೆ.

ಶಾಲೆಯ ಶಿಕ್ಷಕರ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮೆಚ್ಚುಗೆ : ಗೋಸಿಕೆರೆ ಹೊಸಕಪಿಲೆ ಶಾಲೆಗೆ ಶುಕ್ರವಾರ ಕ್ಷೇತ್ರಶಿಕ್ಷಣಾಧಿಕಾರಿ ಸುರೇಶ್ ಭೇಟಿ ನೀಡಿ, ಶಾಲೆಯ ಗೋಡೆಯ ಮೇಲೆ ರಚಿಸಿರುವ ಚಿತ್ರಗಳು ವೀಕ್ಷಣೆ ಮಾಡಿ , ಮಕ್ಕಳಿಗೆ ಅಕ್ಷರಗಳು ಕಲಿಯಲು ಸುಲಭ ರೀತಿಯಲ್ಲಿ ಮಾಡಿದ್ದಾರೆ ಎಂದರು.

[t4b-ticker]

You May Also Like

More From Author

+ There are no comments

Add yours