ಮಂತ್ರಿ ಮಂಡಲದ ಬೀಗ ಯಡಿಯೂರಪ್ಪ‌ ಬಳಿ ಇದ್ದಾಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಯನ್ನು ಮಂತ್ರಿ ಮಾಡಲಿಲ್ಲ.ಈಗ ?

 

ಚಿತ್ರದುರ್ಗ:  ಮುಂದಿನ ಸಚಿವ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ  ಹಿರಿಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರಿಗೆ  ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಹೇಳಿದರು.

ಮುರುಘಾ ಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಯಡಿಯೂರಪ್ಪ ಅವರು  ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ  ಅವರ ನಿವಾಸಕ್ಕೆ  ಭೇಟಿ ನೀಡಿ ಮಾತನಾಡಿದರು.

ಜಿಲ್ಲೆಯ ಹಿರಿಯ ಶಾಸಕರಾದ ಜಿ.ಹೆಚ್.  ತಿಪ್ಪಾರೆಡ್ಡಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಪ್ರತಿ ಸಂದರ್ಭದಲ್ಲಿಯೂ ಒಂದಲ್ಲ ಒಂದು ಕಾರಣಕ್ಕೆ ಸಚಿವರನ್ನಾಗಿ ಮಾಡದೇ ಅವರಿಗೆ ಅನ್ಯಾಯವಾಗಿದೆ. ಈ ಕುರಿತು ಸಿಎಂ ಜೊತೆಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಅವರಿಗೆ ಅವಕಾಶಕ್ಕಾಗಿ ಪ್ರಯತ್ನ ಮಾಡುವೆ ಎಂದರು.

ಅದರೆ ಮುಖ್ಯಮಂತ್ರಿ  ಪದವಿಯಲ್ಲಿ ಇದ್ದಾಗ ಶಾಸಕ ಜಿ.ಹೆಚ್.ತಿಪ್ಫಾರೆಡ್ಡಿ ಅವರನ್ನು ಮಂತ್ರಿ ಮಾಡುವ ಎಲ್ಲಾ ಅವಕಾಶಗಳು ಇದ್ದರು ಸಹ ಅನೇಕ ಕಾರಣಗಳನ್ನು ಹೇಳಿ ಈಗ ಮುಖ್ಯಮಂತ್ರಿ ಬದಲಾದ ಮೇಲೆ ಜಿಲ್ಡೆಯ ಹಿರಿಯ ರಾಜಕಾರಣಿ ಮತ್ತು ಹಿರಿಯರು ಮಂತ್ರಿಗಳಾಗುವ ಎಲ್ಲಾ ಅರ್ಹತೆ ಹೊಂದಿದ್ದ ಶಾಸಕ  ತಿಪ್ಪಾರೆಡ್ಡಿ ಅವರಿಗೆ  ಮಂತ್ರಿ ಮಾಡಬಬಹುದಿತ್ತು. ಅಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಹೇಳಿದ ಮಾತು ವೇದವಾಕ್ಯವಾಗಿತ್ತು. ಆದರೆ ಪರಿಸ್ಥಿತಿ ಬದಲಾದ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು‌ ಮುಂದಿನ ಸಾರ್ವತ್ರಿಕ ವಿಧಾನ ಸಭೆ  ಚುನಾವಣೆ ಬರುವ ಸಮಯದಲ್ಲಿ  ಮಂತ್ರಿ ಮಂಡಲ ವಿಸ್ತರಣೆ ಆಗುತ್ತದೆ ಎಂಬ ಮಾತು ಸಾರ್ವಜನಿಕರಲ್ಲಿ ಮೂಡಿದೆ. ಮತ್ತು ಯಡಿಯೂರಪ್ಪ ಅಧಿಕಾರ ಇದ್ದಾಗ ಮಾಡಬಹುದಿತ್ತು ಈಗ ಹೇಳಿ ಏನು ಪ್ರಯೋಜನ ಎಂಬ ಮಾತುಗಳು ಜಿಲ್ಲೆಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ. ಆದರೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತ್ರ ಮಂತ್ರಿ ಕೊಟ್ಟರು ಸಂತೋಷ, ಕೊಡದಿದ್ದರು ಸಂತೋಷ ಎಂಬ ದೃಢ ಸಂಕಲ್ಪದಿಂದ ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ ಎಂಬ ನಿಲುವಿಗೆ ಬಂದಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು, ಯಡಿಯೂರಪ್ಪ ಒತ್ತಡದಿಂದ ಮಂತ್ರಿ ಭಾಗ್ಯ ಒಲಿಯುವುದೆ ಎಂಬುದನ್ನು ಕಾದು ನೋಡುವ ತಂತ್ರಕ್ಕೆ ಎಲ್ಲಾ‌ರೂ ಬಂದಿದ್ದಾರೆ.

[t4b-ticker]

You May Also Like

More From Author

+ There are no comments

Add yours