ಬೆಂಬಲಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ: ಮಾ.30 ನೋಂದಣಿಗೆ ಕಡೆ ದಿನ

 

ಚಿತ್ರದುರ್ಗ, ಮಾರ್ಚ್ 16:
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಬೆಂಬಲಬೆಲೆ ಯೋಜನೆಯಡಿಯಲ್ಲಿ ಕಡಲೆಕಾಳು ಖರೀದಿಸಲು ರೈತರು ಸಂಬಂಧ ಪಟ್ಟ ಸಹಕಾರ ಸಂಘಗಳಲ್ಲಿ ಕೂಡಲೇ ನೊಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ. ಮಾರ್ಚ್ 30 ನೋಂದಣಿಗೆ ಕೊನೆಯ ದಿನವಾಗಿದೆ.
ಜಿಲ್ಲಾಧಿಕಾರಿ ಆದೇಶದಂತೆ ಏಪ್ರಿಲ್ 01 ರಿಂದ ಖರೀದಿ ಕೇಂದ್ರಗಳನ್ನು ಮಾಡಲಾಗುವುದು. ಪ್ರತಿ ರೈತರಿಗೆ ಎಕೆರೆಗೆ 4 ಕ್ವಿಂಟಾಲ್‍ನಂತೆ ಗರಿಷ್ಠ 15 ಕ್ವಿಂಟಾಲ್ ಖರೀದಿಸಲಾಗುವುದು. ಪ್ರತಿ ಕ್ವಿಂಟಾಲ್‍ನ ದರ ರೂ.5,230/- ಗಳಾಗಿದ್ದು, ಎಫ್‍ಎಕ್ಯೂ ಗುಣಮಟ್ಟ ಹೊಂದಿರಬೇಕು.   ರೈತರು ಎಫ್‍ಐಡಿ ನಂಬರ್ ಮೂಲಕ ನೋಂದಾಯಿಸಬೇಕು. ಡೆಬಿಟಿ ಮೂಲಕ ರೈತರ ಖಾತೆಗೆ ಹಣ ವರ್ಗಾಯಿಸಲಾಗುವುದು. ಮಾರ್ಚ್ 30 ನೊಂದಣಿಗೆ ಕೊನೆಯ ದಿನ. ಈಗಾಗಲೇ ಜಿಲ್ಲೆಯಲ್ಲಿ ಇದುವರೆಗೂ ಸುಮಾರು 950 ರೈತರು ನೋಂದಣಿ ಮಾಡಿದ್ದಾರೆ.
ಕಡಲೆ ಖರೀದಿ ಕೇಂದ್ರಗಳ ವಿವರ: ಚಿತ್ರದುರ್ಗ ತಾಲ್ಲೂಕಿನಲ್ಲಿ ಚಿತ್ರದುರ್ಗ ಟೌನ್ ಸಹಕಾರ ಸಂಘ, ಮಾಡನಾಯಕಹಳ್ಳಿ ಸಹಕಾರ ಸಂಘ, ಚಿಕ್ಕಗೊಂಡನಹಳ್ಳಿ ಸಹಕಾರ ಸಂಘ, ಚಳ್ಳಕೆರೆ ತಾಲ್ಲೂಕಿನಲ್ಲಿ ರಾಮಜೋಗಿಹಳ್ಳಿ ಸಹಕಾರ ಸಂಘ, ಚಿಕ್ಕಮಧುರೆ ಸಹಕಾರ ಸಂಘ, ಹಿರಿಯೂರು ತಾಲ್ಲೂಕಿನಲ್ಲಿ ಐಮಂಗಲ ಸಹಕಾರ ಸಂಘ, ಬಬ್ಬೂರು ಸಹಕಾರ ಸಂಘ, ಮರಡಿಹಳ್ಳಿ ಸಹಕಾರ ಸಂಘ, ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಹಕಾರ ಸಂಘ, ಹೊಸದುರ್ಗ ತಾಲ್ಲೂಕಿನಲ್ಲಿ ಹೊಸದುರ್ಗ ರೋಡ್ ಸಹಕಾರ ಸಂಘ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಟಿಎಪಿಸಿಎಂಎಸ್ ಸಹಕಾರ ಸಂಘದಲ್ಲಿ ಕಡಲೆಕಾಳು ಖರೀದಿ ಕೇಂದ್ರಗಳನ್ನು ತೆರೆಯಲು ಖರೀದಿ ಸಂಸ್ಥೆಯಾಗಿ ಚಿತ್ರದುರ್ಗ ಮಾರ್ಕ್‍ಫೆಡ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours