ಬಿಜೆಪಿ ಅಭ್ಯರ್ಥಿ ನವೀನ್ ಪಡೆದ ಮತಗಳ ಎಷ್ಟು ಮತ್ತು ಅಂತರ ಎಷ್ಟು ನೋಡಿ.

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಕೈ ಕೋಟೆ ಛಿದ್ರವಾಗಿದ್ದು ಕಮಲ ಕೋಟೆ ಭದ್ರವಾಗಿದೆ.  ಚಿತ್ರದುರ್ಗ ಸತತ ಕಾಂಗ್ರೆಸ್ ಕೋಟೆಯಾಗಿದ್ದ  ಚಿತ್ರದುರ್ಗ-ದಾವಣಗೆರೆ ವಿಧಾಮ ಪರಿಷತ್ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು ಸಾಧಿಸುವ ಮೂಲಕ  ಕೈ ಕೋಟೆ ಪುಡಿ ಮಾಡಿದ್ದಾರೆ. ಕಮಲ ಕೇಕೆ ಹಾಕಿದೆ. ಸತತ ಎರಡು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ  ನವೀನ್ ಗೆಲುವಿನ ಸವಿ ಉಂಡಿದ್ದಾರೆ.ಎಲ್ಲಾ ಸಚಿವರ , ಶಾಸಕರು , ಸಂಸದರ ಒಗ್ಗಟ್ಟಿನ  ಮಂತ್ರದಿಂದ ಕಮಲ ಅರಳಿದೆ.ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ 2271 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ 2629 ಮತ ಪಡೆದಿದ್ದಾರೆ. 350 ಕ್ಕಿಂತ ಹೆಚ್ಚಿನ ಮತಗಳಿಂದ ನವೀನ್ ಗೆಲುವಿನ ಕೇಕೆ ಹಾಕಿದ್ದಾರೆ.

ನವೀನ್ ರವರು 358 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ 16 ಮಾತುಗಳನ್ನು ಪಡೆದಿರುವರು. ಒಟ್ಟು 5066 ಮತಗಳಲ್ಲಿ 5060 ಮತ ಚಲಾವಣೆ ಯಾಗಿದ್ದವು. ಇದರಲ್ಲಿ 144 ತಿರಸ್ಕೃತಗೊಂಡ ಮತಗಳಿವೆ.

[t4b-ticker]

You May Also Like

More From Author

+ There are no comments

Add yours