ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅಭ್ಯಾಸ ಹಾಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ,ಜೂನ್11:
ಮಕ್ಕಳು ಬೇಸಿಗೆ ರಜಾ ಅವಧಿಯಲ್ಲಿ ಕಾಲಹರಣ ಮಾಡದೇ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಶಿಕ್ಷಣ ಇಲಾಖೆಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ರಚಿಸಲಾಗಿರುವ  ಅಭ್ಯಾಸ ಹಾಳೆಗಳ ಸಾಹಿತ್ಯ ಸಹಕಾರಿಯಾಗಿದೆ ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ  ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಚಿಸಲಾಗಿರುವ ಅಭ್ಯಾಸ ಹಾಳೆಗಳ ಸಾಹಿತ್ಯವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಗೆ ಸಂಬಂಧಿಸಿದಂತೆ ಕೊರೊನಾ ಸಾಂಕ್ರಾಮಿಕ ರೋಗದ ಪ್ರಯುಕ್ತ ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳು ಮನೆಯಲ್ಲಿಯೇ ಎಲ್ಲ ವಿಷಯಗಳ ಮೂಲ ಕಲಿಕಾ ಸಾಮಥ್ರ್ಯ ಕಲಿಯಲು ಅನುಕೂಲವಾಗುವಂತೆ “ಅಭ್ಯಾಸ ಹಾಳೆ” ಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಚಿಸಲಾಗಿದ್ದು, 2021-22ನೇ ಶೈಕ್ಷಣಿಕ ವರ್ಷಕ್ಕೆ ಪ್ರಸ್ತುತ 8, 9 ಮತ್ತು 10ನೇ ತರಗತಿ ಮಕ್ಕಳು ಸ್ವಯಂ ಕಲಿಕೆಗೆ ಪ್ರೇರೆಪಿಸಲು ಎಲ್ಲ ವಿಷಯಗಳ ಅಭ್ಯಾಸ ಹಾಳೆಗಳನ್ನು ಶಿಕ್ಷಕರು ಹಾಗೂ  ವಿದ್ಯಾರ್ಥಿಗಳು ಬಳಸಿಕೊಳ್ಳಲು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರವಿಶಂಕರ್ ರೆಡ್ಡಿ ಮಾತನಾಡಿ, ಕೊರೊನಾ ಸಾಂಕ್ರಾಮಿಕ ಕಾರಣಕ್ಕಾಗಿ ಶಾಲೆಯಿಂದ ಭೌತಿಕವಾಗಿ ದೂರವಿರುವ ಪ್ರೌಢಶಾಲಾ ಮಕ್ಕಳಿಗೆ ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಸ್ವಯಂ ಕಲಿಕೆ, ಸಂತಸ ದಾಯಕ ಕಲಿಕೆಗೆ  ಅನುಕೂಲವಾಗುವಂತೆ ಮೂಲ ಸಾಮಾಥ್ರ್ಯಗಳ ಪರಿಕಲ್ಪನೆ ಬಳಸಿಕೊಂಡು ರಚಿಸಿರುವ ಎಲ್ಲ ವಿಷಯಗಳ ಅಭ್ಯಾಸ ಹಾಳೆಗಳ ಪುಸ್ತಕಗಳನ್ನು  ಬಿಡುಗಡೆಮಾಡಲಾಗಿದ್ದು, ಇವುಗಳನ್ನು ಜಿಲ್ಲೆಯ ಎಲ್ಲ ಬ್ಲಾಕ್‍ಗಳಿಗೆ ಸಾಫ್ಟ್ ಕಾಪಿ ತಲುಪಿಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶೈಕ್ಷಣಿಕ ಭಾಗಿದಾರರು ಶಿಕ್ಷಕರ ಮುಖೇನ ಮಕ್ಕಳಿಗೆ ತಲುಪಿಸಿ ಅನುಪಾಲನೆ ಮಾಡುವಂತೆ ಸೂಚಿಸಿದರು.
ಪ್ರೌಢಶಾಲೆಯ 8,9 ಮತ್ತು 10ನೇ ತರಗತಿ  ವಿದ್ಯಾರ್ಥಿಗಳಿಗಾಗಿ ರಚಿಸಿರುವ ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಉನ್ಮೇಷ, ಉಜ್ವಲ, ಉತ್ತುಂಗ ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಇಂಗ್ಲಿಷ್-ಇ-ಇನ್ಸ್‍ಫಿರೇಷನ್, ಹಿಂದಿ-ಜ್ಞಾನಧಾರಾ, ಅಭಿಜ್ಞಾನ, ಸ್ವರ್ಣ ಬಿಂದು, ಗಣಿತ-ಜ್ಞಾನ ಸುಧಾ, ವಿಜ್ಞಾನ-ವಿಜ್ಞಾನಧಾರೆ, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಸವಿಸೇತು ಎಂಬ ಅಭ್ಯಾಸ ಹಾಳೆಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ವಿಷಯವಾರು ಕ್ಲಬ್‍ಗಳ ಪದಾಧಿಕಾರಿಗಳು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours