ಪಾಳೇಗಾರರ ಕಾಲದಲ್ಲಿ ದೂರದೃಷ್ಟಿಯಿಂದ ಕೆರೆ ಕಟ್ಟೆಗಳ ನಿರ್ಮಾಣ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ: ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಯಾವ ಇಂಜಿನಿಯರ್ ಕಮ್ಮಿ ಇಲ್ಲದಂತೆ ಕೆರೆ ಹೊಂಡಗಳ ನಿರ್ಮಾಣ ಮಾಡಿದ್ದಾರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಬುರುಜನಹಟ್ಟಿ ಬಳಿಯ ಸಿಹಿನೀರು ಹೊಂಡಕ್ಕೆ  ಮತ್ತು ಐತಿಹಾಸಿಕ ಚಂದ್ರವಳ್ಳಿ ಕೆರೆ ತುಂಬಿರುವ ಕಾರಣ ಎಲ್ಲಾ ನಗರಸಭೆ ಸದಸ್ಯರು ಮತ್ತು ಸಿಬ್ಬಂದಿಗಳು, ಇಂಜಿನಿಯರ್ ಗಳು ಸೇರಿ ಬಾಗಿನ ಅರ್ಪಿಸಿ ಮಾತನಾಡಿದರು.

 

 

ಸಿಹಿನೀರು ಹೊಂಡಕ್ಕೆ‌ ಬಾಗಿನ‌ ಅರ್ಪಣೆ ಮಾಡಿದ ಚಿತ್ರ.

ಈ ಎರಡು ಕೆರೆ ಮತ್ತು ಹೊಂಡ ಸಹ ಐತಿಹಾಸಿಕ ರಾಜರ ಕಾಲದಲ್ಲಿ ನಿರ್ಮಾಣವಾಗಿವೆ. ಕೋಟೆ ಮೇಲ್ಭಾಗದಲ್ಲಿರುವ   ಗೋಪಲಸ್ವಾಮಿ ಹೊಂಡ ತುಂಬಿದ ನಂತರ  ಆ ನೀರು ಅಕ್ಕ-ತಂಗಿ ಹೊಂಡ ತುಂಬಿ  ಕೋಟೆಯ ಮೇಲಿನ ಸಂಪೂರ್ಣ ನೀರು ಸಿಹಿನೀರು ಹೊಂಡಕ್ಕೆ ಬರುತ್ತದೆ. ಅದು ತುಂಬಿದ ಮೇಲೆ ಸಂತೇಹೊಂಡ,‌ಮಲ್ಲಪುರ ಕೆರೆ, ಗೊನೂರು ಕೆರೆ,‌ಕಲ್ಲೆನಹಳ್ಳಿ, ಮದುರೆಕೆರೆ ಮೂಲಕ ಚಳ್ಳಕೆರೆ ತಾಲೂಕಿನ ರಾಣಿಕೆರೆಗೆ ತಲುಪುತ್ತದೆ. ಹೀಗೆ ಎಲ್ಲಾ ಕಡೆ ನೀರು ಹರಿಯುವುದರಿಂದ ಹಳ್ಳಿಗಳ ಬೊರವೆಲ್ ನ ಅಂತರ್ಜಲದ ಮಟ್ಟ ಹೆಚ್ಚಲು ಸಹಕಾರಿಯಾಗಿದೆ. ಇಂತಹ ಮಹತ್ವದ  ಕಾರ್ಯವನ್ನು ಮದಕರಿನಾಯಕ ಕಾಲದಲ್ಲಿ ಯಾವುದೇ ಇಂಜಿನಿಯರ್ ಇಲ್ಲದೆ ಅಂತಹ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಅಂತರ್ಜಲ ಹೆಚ್ಚಿಸುವ  ದೂರದೃಷ್ಟಿಯಿಂದ ಇಂತಹ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡಿದ್ದಾರೆ.

ಚಿತ್ರದುರ್ಗ ನಗರ ಮತ್ತು ಅಕ್ಕ ಪಕ್ಕ ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.   ಸಿಹಿನೀರು ಹೊಂಡ ಕಳೆದ 3-4 ವರ್ಷದಿಂದ ಕೋಡಿ ಬೀಳುತ್ತಿದೆ. ನಗರಕ್ಕೆ ನೀರಿನ ಭರವಿಲ್ಲ.  2008 ರಿಂದ ನೀರಿನ ಕೊರತೆ ಇಲ್ಲದೆ 140 ಕೋಟಿ ಕುಡಿಯುವ ನೀರಿನ ಯೊಜನೆಗೆ ಕೇಂದ್ರ ಸರ್ಕಾರ ನೀಡಿದೆ. 2 ವರ್ಷದಲ್ಲಿ 24 ಗಂಟೆ ನೀರು ಸರಬರಾಜು ಮಾಡಲು ಎಲ್ಲಾ ಕಾರ್ಯ ಪ್ರಾರಂಭವಾಗಿದೆ. ಧವಳಗಿರಿ ಮತ್ತು ಬಿವಿಕೆ ಲೇ ಹೌಟ್ ಗ್ಯಾಸ್ ಸಂಪರ್ಕ ನೀಡಲಾಗಿದೆ. ಗ್ಯಾಸ್ ಸಂಪರ್ಕ ನೀಡಲು ರಸ್ತೆ ಅಗೆಯುತ್ತಿರುವುದು ನೋವಿನ ಸಂಗತಿ ಎಂದರು.ಆದರೆ ಅಭಿವೃದ್ಧಿ ದೃಷ್ಟಿಯಿಂದ  ನಗರಸಭೆಗೆ ಮುಂಗಡವಾಗಿ ಹಣ ಕಟ್ಟಿ ರಸ್ತೆ ಹಗೆಯಲ್ಲೂ ಅವಕಾಶ ಮಾಡಿಕೊಡಲಾಗುತ್ತಿದೆ.  ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕಡಿದ ಮರಗಳನ್ನು ಹೆಚ್ಚಿನ ಮರಗಳನ್ನು ನಗರದಲ್ಲಿ ಹಾಕಲಾಗುತ್ತಿದೆ.

ಯುಜಿಡಿ ಸ್ವಲ್ಪ ವ್ಯವಸ್ಥಿತವಾಗಿಲ್ಲ.ಹಾಗಾಗಿ ಮತ್ತೆ ಹಣ ತಂದು ಯುಜಿಡಿ ಪೂರ್ಣಗೊಳಿಸಲಾಗುತ್ತದೆ ಎಂದರು.

ಬಿಪಿಎಲ್ ಕಾರ್ಡ್ ವಿಚಾರದಲ್ಲಿ  ಯಾವುದೇ ಗೊಂದಲ ಇದ್ದರೆ. ಬಗೆಹರಿಸಲಾಗುವುದು. ಶ್ರೀಮಂತರು ಸಹ ಬಿಪಿಎಲ್ ಕಾರ್ಡ್ ನೀಡಿದರು

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ನಗರಸಭೆ ಸದಸ್ಯರಾದ ಭಾಗ್ಯಮ್ಮ ಆನಂದ,  ಶ್ರೀನಿವಾಸ್, ಶ್ವೇತ ಹರೀಶ್, ತಾರಕೇಶ್ವರಿ, ರೇಖಾ , AWE ಸತೀಶ್ ರೆಡ್ಡಿ ಇದ್ದರು.

[t4b-ticker]

You May Also Like

More From Author

+ There are no comments

Add yours