ನೆಹರು ಯುವ ಕೇಂದ್ರಕ್ಕೆ ಯುವಜನರಿಂದ ಅರ್ಜಿ ಆಹ್ವಾನ

 

ಚಿತ್ರದುರ್ಗ, ಡಿಸೆಂಬರ್06:
ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಜನವರಿ 12ರಿಂದ 16 ರವರೆಗೆ ರಾಷ್ಟ್ರೀಯ ಯುವ ಜನೋತ್ಸವವನ್ನು ಆಯೋಜಿಸುತ್ತದೆ. ಯುವಜನೋತ್ಸವದಲ್ಲಿ ಭಾಗವಹಿಸಲು ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನ.
ಈ ಕಾರ್ಯಕ್ರಮದ ಅಂಗವಾಗಿ ನೆಹರು ಯುವ ಕೇಂದ್ರ ಚಿತ್ರದುರ್ಗದಿಂದ ಯುವಜನೋತ್ಸವದಲ್ಲಿ ಭಾಗವಹಿಸಲು ಜಿಲ್ಲೆಯಿಂದ ಮೂವರು ಯುವ ಜನರನ್ನು ಆಯ್ಕೆ ಮಾಡಲಾಗುವುದು.
ಆಸಕ್ತ ಯುವ ಜನರು ನೆಹರು ಯುವಕೇಂದ್ರ ಚಿತ್ರದುರ್ಗ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದುಕೊಂಡು ಭರ್ತಿ ಮಾಡಿ ಅರ್ಜಿಸಲ್ಲಿಸಬಹುದು.
ಅರ್ಹತೆ: ವಯಸ್ಸು 15 ರಿಂದ 29ರ ನಡುವೆ ಇರಬೇಕು. ನೆಹರು ಯುವ ಕೇಂದ್ರ ಸಂಘಟನೆಯ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಿರಬೇಕು.  ಹೆಚ್ಚಿನ ಮಾಹಿತಿಗೆ ನೆಹರು ಯುವ ಕೇಂದ್ರ, ಚಿತ್ರದುರ್ಗ, ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ಚಿತ್ರದುರ್ಗ, ಮೊಬೈಲ್ 9945038684, 08194-222008ಗೆ ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಸುಹಾಸ್ ಎನ್. ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours